ಷೆವರ್ಲೆ ಸೈಲ್ ಯುವಿಎ: ಹೊಸ ಕಾರು ಹೇಗಿದೆ?

ದೇಶದ ವಾಹನ ಮಾರುಕಟ್ಟೆಗೆ ಜನರಲ್ ಮೋಟರ್ಸ್ ಫ್ಯಾಕ್ಟರಿಯಿಂದ ಆಗಮಿಸಲಿರುವ ಬಹುನಿರೀಕ್ಷಿತ ಸಣ್ಣಕಾರು "ಷೆವರ್ಲೆ ಸೈಲ್ ಯುವಿಎ". ಷೆವರ್ಲೆ ಸೈಲ್ ಯುವಿಎ ದೇಶದ ರಸ್ತೆಗೆ ಮುಂದಿನ ತಿಂಗಳು ಆಗಮಿಸಲಿದೆ.

ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಷೆವರ್ಲೆ ಸೈಲ್ ಕಾರಿನ ಕೆಲವು ಚಿತ್ರಗಳು ಇಲ್ಲಿವೆ. ನೂತನ ಹ್ಯಾಚ್ ಬ್ಯಾಕ್ ಕಾರು ಸದ್ಯ ರಸ್ತೆಯಲ್ಲಿರುವ ಅವಿಯೊ ಬದಲಿ ಆವೃತ್ತಿಯಾಗಿ ಆಗಮಿಸಲಿದೆ. ಸೈಲ್ ಯುವಿಎ ಕಾರನ್ನು ಜನರಲ್ ಮೋಟರ್ಸ್ ಮತ್ತು ಚೀನಾದ ಸೈಕ್ ಕಂಪನಿಯು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಷೆವರ್ಲೆ ಸೈಲ್ ಎಂಜಿನ್

ಷೆವರ್ಲೆ ಸೈಲ್ ಎಂಜಿನ್

ನೂತನ ಷೆವರ್ಲೆ ಸೈಲ್ ಹ್ಯಾಚ್ ಬ್ಯಾಕ್ ಕಾರು 1.2 ಲೀಟರ್ ಆಲ್ ಅಲ್ಯುಮಿನಿಯಂ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಜೊತೆಗೆ 1.3 ಲೀಟರ್ ಎಂಜೆಡಿ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ಲಭ್ಯವಿರಲಿದೆ.

ಸ್ಟೈಲ್ ವಿಷ್ಯ: ಪರವಾಗಿಲ್ಲ

ಸ್ಟೈಲ್ ವಿಷ್ಯ: ಪರವಾಗಿಲ್ಲ

ಷೆವರ್ಲೆ ಕಂಪನಿಯ ಇತರ ಕಾರುಗಳಿಗೆ ಹೋಲಿಸಿದರೆ ಇದರ ಸ್ಟೈಲ್ ಅಷ್ಟೇನೂ ಕ್ಯೂಟಾಗಿ ಕಾಣುವುದಿಲ್ಲ. ಆದರೂ ಮುಂಭಾಗದ ಬೋಲ್ಡ್ ಗ್ರಿಲ್, ವಿಶಾಲ ಹೆಡ್ ಲ್ಯಾಂಪ್ ಇತ್ಯಾದಿ ಫೀಚರುಗಳು ಗಮನ ಸೆಳೆಯುತ್ತವೆ.

ಷೆವರ್ಲೆ ಸೈಲ್ ಫೀಚರುಗಳು

ಷೆವರ್ಲೆ ಸೈಲ್ ಫೀಚರುಗಳು

ನೂತನ ಷೆವರ್ಲೆ ಸೈಲ್ ಕಾರು 5 ಸ್ಪೀಡಿನ ಗೇರ್ ಬಾಕ್ಸ್ ಹೊಂದಿದೆ. ಇದರಲ್ಲಿ ಟಾಪ್ ಎಂಡ್ ಆವೃತ್ತಿಯಲ್ಲಿ ಎಬಿಎಸ್ ಮತ್ತು ಡ್ಯೂಯಲ್ ಏರ್ ಬ್ಯಾಗುಗಳು ಇರಲಿವೆ.

ಷೆವರ್ಲೆ ಸೈಲ್ ದರವೆಷ್ಟಿರಬಹುದು?

ಷೆವರ್ಲೆ ಸೈಲ್ ದರವೆಷ್ಟಿರಬಹುದು?

ನೂತನ ಷೆವರ್ಲೆ ಸೈಲ್ ಕಾರಿನ ದರ ಸುಮಾರು 4ರಿಂದ 6 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ಸೈಲ್ ಕಾರು ಗೆಲ್ಲುತ್ತಾ?

ಸೈಲ್ ಕಾರು ಗೆಲ್ಲುತ್ತಾ?

ಮಾರುಕಟ್ಟೆಯಲ್ಲಿ ಸೈಲ್ ಕಾರು ಹ್ಯುಂಡೈ ಐ20 ಮತ್ತು ಟೊಯೊಟಾ ಎಟಿಯೋಸ್ ಲಿವಾ ಕಾರುಗಳಿಗೆ ಪೈಪೋಟಿ ನೀಡುವುದು ಕಷ್ಟ. ಇವೆರಡು ಕಾರುಗಳಿಗೆ ಹೋಲಿಸಿದರೆ ಸೈಲ್ ಅಷ್ಟೇನೂ ಗಮನ ಸೆಳೆಯುವುದಿಲ್ಲ.

ನೂತನ ಸೈಲ್ ಕಾರಿಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರಕುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ. ಸೈಲ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕಲಿದೆ. ಇದರಲ್ಲಿ ಪೆಟ್ರೋಲ್ ಆವೃತ್ತಿಯು 1.2 ಲೀಟರಿನ ಆಲ್ ಅಲ್ಯುಮಿನಿಯಂ ಎಂಜಿನ್ ಹೊಂದಿರಲಿದೆ. ಮತ್ತೊಂದು ಡೀಸೆಲ್ ಆವೃತ್ತಿಯು 1.3 ಲೀಟರಿನ ಎಂಜೆಡಿ ಎಂಜಿನ್ ಹೊಂದಿರಲಿದೆ.

ನಿರೀಕ್ಷಿತ ದರ: 4-6 ಲಕ್ಷ ರುಪಾಯಿ

ಪ್ರಮುಖ ಪ್ರತಿಸ್ಪರ್ಧಿಗಳು: ಮಾರುತಿ ಸುಜುಕಿ ಸ್ವಿಫ್ಟ್
ಸ್ಕೋಡಾ ರಾಪಿಡ್
ಹ್ಯುಂಡೈ ಐ20
ಟೊಯೊಟಾ ಎಟಿಯೋಸ್ ಲಿವಾ

ರಸ್ತೆಗೆ: ಅಕ್ಟೋಬರ್ 2012

More from DriveSpark

Article Published On: Tuesday, September 25, 2012, 10:27 [IST]
English summary
General Motor's next big launch for the Indian shore, comes in the form of the Chevrolet Sail UVA hatchback. If you are looking out for a hatchback from Chevrolet, do check out the Sail UVA which will be launched next month in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+