ಷೆವರ್ಲೆ ಹೊಸ ತವೆರಾ ರಸ್ತೆಗೆ, ದರ 7.51 ಲಕ್ಷ ರು.

ಜನರಲ್ ಮೋಟರ್ಸ್ ಇಂಡಿಯಾ ಕಂಪನಿಯು 2012ರ ನೂತನ ತವೆರಾ ಆವೃತ್ತಿಯನ್ನು ಪರಿಚಯಿಸಿದೆ. ಇದರ ಆರಂಭಿಕ ದರ 7.51 ಲಕ್ಷ ರು. ಇದೆ. ಟಾಪ್ ಎಂಡ್ ಆವೃತ್ತಿ ದರ 10.34 ಲಕ್ಷ ರುಪಾಯಿ(ದೆಹಲಿ ಎಕ್ಸ್ ಶೋರೂಂ).

ನೂತನ ಷೆವರ್ಲೆ ತವೆರಾ ಕಾರು ಹಳೆಯ ನಿಯೊ3 ತವೆರಾಕ್ಕಿಂತ ಹೆಚ್ಚು ಸ್ಥಳಾವಕಾಶ ಮತ್ತು ಆರಾಮದಾಯಕತೆ ಹೊಂದಿದೆ. ಇದು ಎರಡು ಲೀಟರ್, ನಾಲ್ಕು ಸಿಲಿಂಡರಿನ ಕಾಮನ್ ರೈಲು ಡೀಸೆಲ್ ಎಂಜಿನ್ ಹೊಂದಿದೆ. 4 ಸಾವಿರ ಆವರ್ತನಕ್ಕೆ 106.7 ಹಾರ್ಸ್ ಪವರ್ ಮತ್ತು 2,500 ಆವರ್ತನಕ್ಕೆ 263.7 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಹೊಸ ತವೆರಾ ಎಂಪಿವಿ ಸ್ಟಾಂಡರ್ಡ್, ಮ್ಯಾಕ್ಸ್, ಎಲ್ಎಸ್ ಮತ್ತು ಎಲ್ಟಿ ಎಂಬ ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತಿದೆ. ಈ ಎಂಪಿವಿ ಐದು ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಇದು BS-IV ನಿಯಮ ಅನ್ವಯಿಸುವ ದೇಶದ 13 ನಗರಗಳಲ್ಲಿ ನೂತನ ತವೆರಾ ಕಾರನ್ನು ಕಂಪನಿ ಹೊರತರಲಿದೆ.

2012ರ ನೂತನ ತವೆರಾ ಮಲ್ಟಿ ಪರ್ಪೊಸ್ ವೆಹಿಕಲ್ ಟೊಯೊಟಾ ಇನ್ನೋವಾ, ಮಹೀಂದ್ರ ಕ್ಷೈಲೊ ಮತ್ತು ಇನ್ನಷ್ಟೇ ಆಗಮಿಸಲಿರುವ ಮಾರುತಿ ಸುಜುಕಿ ಎರ್ಟಿಗಾ ಕಾರುಗಳೊಂದಿಗೆ ಪೈಪೋಟಿ ನಡೆಸಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Wednesday, March 21, 2012, 16:28 [IST]
English summary
General Motors India has launched the new Bharat Stage IV emission norms compliant variant of its multi utility vehicle (MUV) Tavera with prices starting from Rs 7.51 lakh to Rs 10.34 lakh for the top end variant (ex showroom Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+