ಪೆಟ್ರೋಲ್ ಕಾರನ್ನು ಓವರ್ ಟೇಕ್ ಮಾಡಿದ ಡೀಸೆಲ್

ಡೀಸೆಲ್ ಕಾರು ಮಾರಾಟ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಪ್ರಪ್ರಥಮ ಬಾರಿಗೆ ಪೆಟ್ರೋಲ್ ಕಾರು ಮಾರಾಟವನ್ನು ಡೀಸೆಲ್ ಕಾರುಗಳು ಓವರ್ ಟೇಕ್ ಮಾಡಿದ್ದವು. ಇಂಧನ ದರ ಹೆಚ್ಚಳ ಮತ್ತು ಬಡ್ಡಿದರ ಏರಿಕೆ ಇತ್ಯಾದಿ ಕಾರಣಗಳಿಂದ ಡೀಸೆಲ್ ಪ್ರಯಾಣಿಕ ಕಾರುಗಳು ಮಾರಾಟದಲ್ಲಿ ಗರಿಷ್ಠ ವೇಗದಲ್ಲಿ ಸಾಗುತ್ತಿವೆ. ಇದರ ವೇಗಕ್ಕೆ ಹೆದರಿ ಪೆಟ್ರೋಲ್ ಕಾರುಗಳು ದಾರಿಬಿಡುತ್ತಿವೆ.

ಪೆಟ್ರೋಲ್ ಕಾರು ಮಾರಾಟ ಹೆಚ್ಚಿಸಲು ಕಾರು ಕಂಪನಿಗಳು ನಾನಾ ವಿನಾಯಿತಿಗಳನ್ನು ಪ್ರಕಟಿಸುತ್ತಿವೆ. ಆದರೂ ಪೆಟ್ರೋಲ್ ಕಾರು ಮಾರಾಟ ಏರಿಕೆ ಕಾಣುತ್ತಿಲ್ಲ. ಏಪ್ರಿಲ್ 2011ರಿಂದ 2012ರ ಫೆಬ್ರವರಿ ತನಕ ಪೆಟ್ರೋಲ್ ಕಾರುಗಳ ಮಾರಾಟ ಶೇಕಡ 15ರಷ್ಟು ಏರಿಕೆ ಕಂಡಿವೆ. ಆದರೆ ಇದೇ ಸಮಯದಲ್ಲಿ ಡೀಸೆಲ್ ಕಾರುಗಳ ಮಾರಾಟ ಶೇಕಡ 35ರಷ್ಟು ಏರಿಕೆ ದಾಖಲಿಸಿವೆ.

ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆ ಇರುವುದರಿಂದ ವೇಟಿಂಗ್ ಪಿರೆಯಿಡ್ ಕೂಡ ಏರಿಕೆ ಕಂಡಿದೆ. ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್, ಹ್ಯುಂಡೈ ವೆರ್ನಾ ಸೆಡಾನ್, ಮಹೀಂದ್ರ ಎಕ್ಸ್ ಯುವಿ5ಒಒಒ ಕಾರು ಗ್ರಾಹಕರ ಕೈಸೇರಲು ಕೆಲವು ತಿಂಗಳು ಕಾಯುವುದು ಅನಿವಾರ್ಯ.

ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಕಾರು ಕಂಪನಿಗಳೆಲ್ಲ ಡೀಸೆಲ್ ಕಾರುಗಳ ಉತ್ಪಾದನೆ ಹೆಚ್ಚಿಸುತ್ತಿವೆ. ಇತ್ತೀಚೆಗೆ 1,700 ಕೋಟಿ ರುಪಾಯಿ ಮೌಲ್ಯದ ಡೀಸೆಲ್ ಎಂಜಿನ್ ಘಟಕ ಸ್ಥಾಪಿಸುವ ನಿರ್ಧಾರವನ್ನು ಮಾರುತಿ ಸುಜುಕಿ ಬಹಿರಂಗಪಡಿಸಿದೆ.

ಮಾರುತಿ ಸುಜುಕಿ ಆಲ್ಟೊ, ಹ್ಯುಂಡೈ ಐ10 ಮುಂತಾದ ಬೆಸ್ಟ್ ಸೆಲ್ಲರ್ ಕಾರುಗಳ ಮಾರಾಟ ಕೂಡ ಇಳಿಮುಖವಾಗುತ್ತಿವೆ. ಈ ಕಾರುಗಳು ಡೀಸೆಲ್ ಆಯ್ಕೆಯಲ್ಲಿ ದೊರಕದೆ ಇರುವುದು ಕೂಡ ಮಾರಾಟ ಇಳಿಕೆಗೆ ಕಾರಣವಾಗಿದೆ.

ಇದೇ ಸಮಯದಲ್ಲಿ ಷೆವರ್ಲೆ ಬೀಟ್, ಫೋಕ್ಸ್ ವ್ಯಾಗನ್ ಪೊಲೊ, ಮಾರುತಿ ಸುಜುಕಿ ಸ್ವಿಫ್ಟ್, ಹ್ಯುಂಡೈ ವೆರ್ನಾ, ಫೋಕ್ಸ್ ವ್ಯಾಗನ್ ವೆಂಟೊ ಮುಂತಾದ ಡೀಸೆಲ್ ಆಯ್ಕೆಯಲ್ಲಿ ದೊರಕುವ ಕಾರುಗಳ ಮಾರಾಟ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Monday, March 26, 2012, 16:39 [IST]
English summary
Diesel car sales surged ahead of petrol models for the first time in December last year. Diesel passenger car sales overtook petrol models capturing more than 50% of the market due to the lower retail price of the subsidised fuel and high fuel economy of cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+