ಡೀಸೆಲ್ ಕಾರಿಗೆ ಶೇ. 10ರಷ್ಟು ಕೊಲವರಿ ತೆರಿಗೆ!?

Diesel Cars
ನವದೆಹಲಿ, ಜ 14: ಡೀಸೆಲ್ ಕಾರುಗಳ ಮೇಲೆ ಶೇಕಡ 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಹಣಕಾಸು ಸಚಿವಾಲಯದ ಪ್ರಸ್ತಾಪಕ್ಕೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಿಭಾಗದ ಸಂಸದೀಯ ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ.

"ಬಹುಕಾಲದಿಂದ ಈ ಪ್ರಸ್ತಾಪವನ್ನು ಸಮಿತಿ ಪರಿಶೀಲಿಸುತ್ತಿತ್ತು. ಇದೀಗ ಹಣಕಾಸು ಸಚಿವಾಲಯದ ಪ್ರಸ್ತಾಪಕ್ಕೆ ಸ್ಥಾಯಿ ಸಮಿತಿ ಅಸ್ತು ಎಂದಿದೆ" ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮೇಲ್ ಟುಡೇಗೆ ಹೇಳಿದ್ದಾರೆ.

"ಸಬ್ಸಿಡಿ ಇರುವ ಇಂಧನವನ್ನು ಹೆಚ್ಚು ಬಳಕೆ ಮಾಡುವ ಡೀಸೆಲ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಮೇಲೆ ಹೆಚ್ಚು ತೆರಿಗೆ ವಿಧಿಸಲಾಗುವುದು. ಇದು ಪ್ರಯಾಣಿಕ ಡೀಸೆಲ್ ವಾಹನಗಳ ಪ್ರಗತಿಗೆ ಒಂದು ಅಂಕಿತ ಹಾಕಬಹುದು ಮತ್ತು ಡೀಸೆಲ್ ಸಬ್ಸಿಡಿಯಿಂದ ನಷ್ಟವನ್ನು ಅನುಭವಿಸುತ್ತಿರುವ ತೈಲ ಕಂಪನಿಗಳಿಗೆ ಚೇತರಿಸಿಕೊಳ್ಳಲು ಇದರಿಂದ ಅವಕಾಶ ದೊರಕಲಿದೆ" ಎಂದು ಅವರು ಹೇಳಿದ್ದಾರೆ.

ಕಳೆದ ಎಂಟು ತಿಂಗಳಲ್ಲಿ ಖಾಸಗಿ ಡೀಸೆಲ್ ಕಾರು ಮಾಲಿಕರ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಂಡಿದ್ದು, ಡೀಸೆಲಿಗೆ ನೀಡುವ ಸಬ್ಸಿಡಿ ನಿರಾಕರಿಸುವಂತೆ ಸರಕಾರಕ್ಕೆ ಸಂಸದೀಯ ಸ್ಥಾಯಿ ಸಮಿತಿ ಸೂಚಿಸಿದೆ. ಡೀಸೆಲ್ ಕಾರುಗಳ ಖರೀದಿ ಸಮಯದಲ್ಲಿಯೇ ಈ ತೆರಿಗೆ ವಿಧಿಸುವಂತೆ ಸ್ಥಾಯಿ ಸಮಿತಿ ಮುಖ್ಯಸ್ಥರಾದ ಅರುಣ ಕುಮಾರ್ ಹೇಳಿದ್ದಾರೆ.

ಹೀಗೆ ತೆರಿಗೆಯಿಂದ ಸಂಗ್ರಹವಾದ ಮೊತ್ತವನ್ನು ತೈಲ ಕಂಪನಿಗಳ ನಷ್ಟ ತುಂಬಿಕೊಡಲು ಬಳಸುವ ನಿರೀಕ್ಷೆಯಿದೆ. ಇಂಡಿಯನ್ ಆಯಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಭಾರತ್ ಪ್ರೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಗಳು ಇಂಧನವನ್ನು ಸಬ್ಸಿಡಿಗೆ ಮಾರಾಟ ಮಾಡುವುದರಿಂದ ನಷ್ಟವನ್ನು ಅನುಭವಿಸುತ್ತಿವೆ.

"ಪ್ರಯಾಣಿಕ ವಾಹನಗಳು, ಉದ್ದಿಮೆಗಳು ಮತ್ತು ವಿದ್ಯುತ್ ಉತ್ಪಾದನಾ ಘಟಕಗಳು ದೇಶದಲ್ಲಿ ಒಟ್ಟಾರೆ ಶೇಕಡ 33ರಷ್ಟು ಡೀಸೆಲ್ ಬಳಕೆ ಮಾಡುತ್ತಿವೆ" ಎಂದು ಸ್ಥಾಯಿ ಸಮಿತಿ ಹೇಳಿದೆ. ಆದರೆ ಈ ಬೆಳವಣಿಗೆಗೆ ಭಾರಿ ಉದ್ದಿಮೆಗಳ ಸಚಿವಾಲಯವೂ ವಿರೋಧ ವ್ಯಕ್ತಪಡಿಸಿದೆ. ಇನ್ನಷ್ಟು ತೆರಿಗೆ ವಿಧಿಸುವುದು ವಾಹನೋದ್ಯಮದ ಬೆಳವಣಿಗೆಗೆ ಹೊಡೆತ ನೀಡಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

"ಕಳೆದ ಏಪ್ರಿಲ್ ತಿಂಗಳಿನಿಂದ ಡೀಸೆಲ್ ಕಾರುಗಳ ಪ್ರಗತಿ ಶೇಕಡ 24ರಷ್ಟು ಏರಿಕೆ ಕಂಡಿದೆ. ಆದರೆ ಪೆಟ್ರೋಲ್ ಕಾರುಗಳ ಮಾರಾಟ ಶೇಕಡ 16ರಷ್ಟು ಇಳಿಕೆ ಕಂಡಿದೆ" ಎಂದು ಭಾರತೀಯ ವಾಹನ ಉತ್ಪಾದಕರ ಒಕ್ಕೂಟ(ಸ್ಯಾಮ್) ವರದಿ ಹೇಳಿದೆ. ಈಗಾಗಲೇ ಹ್ಯುಂಡೈ, ಟೊಯೊಟಾ, ಜನರಲ್ ಮೋಟರ್ಸ್ ಮತ್ತು ಫೋರ್ಡ್ ಕಂಪನಿಗಳು ಡೀಸೆಲ್ ವಾಹನ ಉತ್ಪಾದನೆಗೆ ಹೂಡಿಕೆ ಹೆಚ್ಚಿಸಲು ಯೋಜಿಸಿವೆ.

More from DriveSpark

Article Published On: Saturday, January 14, 2012, 17:42 [IST]
English summary
Diesel car prices will go up from march as the central government has planning to impose 10% additional tax on Diesel cars. The proposal has already under the consideration of the central government. The Government may announce official statement in this regard in upcoming budget.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+