ಅಯ್ಯೋ ಶಿವನೇ, ಡೀಸೆಲ್ ದರನೂ ಜಾಸ್ತಿಯಾಗುತ್ತ!

ಕೆಲವು ದಿನಗಳ ಹಿಂದಷ್ಟೇ ಪೆಟ್ರೋಲ್ ದರ ಹೆಚ್ಚಳದ ಹೊಡೆತಕ್ಕೆ ಮಕಾಡೆ ಮಲಗಿರುವ ದೇಶದ ಸತ್ಪ್ರಜೆಗಳಿಗೆ ಸರಕಾರವು ಶೀಘ್ರದಲ್ಲಿ ಇನ್ನೊಂದು ಹೊಡೆತ ನೀಡುವ ನಿರೀಕ್ಷೆ ದಟ್ಟವಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಡೀಸೆಲ್ ದರವೂ ದುಬಾರಿಯಾಗುವ ಸೂಚನೆಯನ್ನು ಮೂಲಗಳು ನೀಡಿವೆ.

ಮೇ 31ರ ದಿನಾಂಕದ ನಂತರ, ಯಾವುದೇ ಕ್ಷಣದಲ್ಲಿ ಬೇಕಾದರೂ ಡೀಸೆಲ್ ದರವೂ 4 ರಿಂದ 5 ರುಪಾಯಿ ಏರಿಕೆ ಕಾಣುವ ನಿರೀಕ್ಷೆಯಿದೆ. ಡೀಸೆಲ್ ದರವನ್ನು ಸುಮಾರು 12 ರುಪಾಯಿಯಷ್ಟು ಏರಿಕೆ ಮಾಡುವ ಒತ್ತಡವಿದ್ದರೂ, ಸರಕಾರವು ತಕ್ಷಣಕ್ಕೆ ಸುಮಾರು 4-5 ರುಪಾಯಿ ಏರಿಕೆ ಮಾಡುವ ನಿರೀಕ್ಷೆಯಿದೆ ಎಂದು ಸರಕಾರಿ ಕಚೇರಿ ಮೂಲಗಳನ್ನು ಉಲ್ಲೇಖಿಸಿ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.

ಈಗಾಗಲೇ ದರ ನಿಯಂತ್ರಣವಿರುವ ಇಂಧನಗಳ ದರ ಹೆಚ್ಚಳದ ಕುರಿತು ಸಚಿವಾಲಯದ ಸಭೆಗಳಲ್ಲಿ ಚರ್ಚಿಸಲಾಗಿದೆ. "ಡೀಸೆಲ್, ಎಲ್‌ಪಿಜಿ, ಸೀಮೆಎಣ್ಣೆಗಳ ದರಗಳು ಸರಕಾರದ ನಿಯಂತ್ರಣದಲ್ಲಿವೆ. ಸಾಕಷ್ಟು ಸಬ್ಸಿಡಿಯಿರುವ ಈ ಇಂಧನಗಳ ದರ ಪರಿಷ್ಕರಣೆ ಯಾವ ಸಮಯದಲ್ಲಿ ಬೇಕಾದರೂ ಪ್ರಕಟವಾಗಬಹುದು" ಎಂಬ ಸೂಚನೆಯನ್ನು ಹೆಸರು ಬಹಿರಂಗಪಡಿಸಲಿಚ್ಚಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇಶದ ತೈಲ ಕಂಪನಿಗಳು ಪ್ರತಿದಿನಕ್ಕೆ ಡೀಸೆಲ್, ಎಲ್‌ಪಿಜಿ ಮತ್ತು ಸೀಮೆಎಣ್ಣೆ ಮಾರಾಟದಲ್ಲಿ ಸುಮಾರು 512 ಕೋಟಿ ರುಪಾಯಿ ನಷ್ಟವನ್ನು ಅನುಭವಿಸುತ್ತಿವೆ. ಪ್ರತಿಲೀಟರ್ ಡೀಸೆಲ್ ಮಾರಾಟಕ್ಕೆ ಇವುಗಳಿಗೆ ಸುಮಾರು 15.35 ರುಪಾಯಿ ನಷ್ಟವಾಗುತ್ತಿದೆಯಂತೆ. ಸೀಮೆ ಎಣ್ಣೆ ಲೀಟರಿಗೆ 32 ರು. ಮತ್ತು ಎಲ್‌ಪಿಜಿ ಕೇಜಿಗೆ 479 ರುಪಾಯಿ ನಷ್ಟವಾಗುತ್ತದೆ ಎಂದು ತೈಲ ಕಂಪನಿಗಳು ಹೇಳುತ್ತಿವೆ.

ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಡುವೆ ಭಾರಿ ಅಂತರವಿರುವುದರಿಂದ ಹಣಕಾಸು ಸಚಿವಾಲಯವು ಡೀಸೆಲ್ ಕಾರುಗಳಿಗೆ ಅಬಕಾರಿ ಸುಂಕವನ್ನೂ ಏರಿಕೆ ಮಾಡುವ ಸಾಧ್ಯತೆಗಳಿವೆ. ಡೀಸೆಲ್ ದರಕ್ಕೆ ಹೆಚ್ಚುವರಿ ಸುಂಕವನ್ನು ಕಳೆದ ಬಜೆಟಿನಲ್ಲಿ ಮಾಡಿರಲಿಲ್ಲ. ಮುಂದಿನ ದಿನಗಳಲ್ಲಿ ಡೀಸೆಲಿಗೂ ಕೆಟ್ಟದಿನಗಳು ಆರಂಭವಾಗುವ ಸೂಚನೆಗಳನ್ನು ಅಲ್ಲಗೆಳೆಯುವಂತಿಲ್ಲ.

ಪೆಟ್ರೋಲ್ ದರ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಗ್ರಾಹಕರು ಡೀಸೆಲ್ ಕಾರುಗಳತ್ತ ವಲಸೆ ಹೋಗುತ್ತಿದ್ದಾರೆ. ಡೀಸೆಲ್ ದರವೂ ಏರಿಕೆ ಮುಂದುವರೆಸಿದರೆ ವಾಹನ ಗ್ರಾಹಕರು ತಲೆಮೇಲೆ ಕೈಯಿಟ್ಟುಕುಳಿತುಕೊಳ್ಳಬೇಕಾಗಿರುವುದು ನಿಶ್ಚಿತ.

More from DriveSpark

Article Published On: Monday, May 28, 2012, 11:28 [IST]
English summary
After huge hike in petrol prices, Central government planing to increase diesel price by RS 4 to 5 per litre. And there's also possibility of raising excise duty on diesel cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+