ಕ್ಯಾಮರಾ ಮುಂದೆ ನಕ್ಕವಳಿಗೆ ದಂಡ, ಯಾಕೆ?
ಸಂಚಾರ ನಿಯಮಕ್ಕೆ ವಿರುದ್ಧವಾಗಿ ಹೋಗುತ್ತಿಲ್ಲ. ಇನ್ನೊಮ್ಮೆ ಫೋಟೊ ತೆಗೆಸಿಕೊಳ್ಳೊಣವೆಂದು ಆಕೆಗೆ ಅನಿಸಿತು. ರಿವರ್ಸ್ ಬಂದು ಮತ್ತೆ ಆ ಟ್ರಾಫಿಕ್ ಕ್ಯಾಮರಾದ ಮುಂದೆ ಪೋಸ್ ನೀಡಿ ಮುಂದಕ್ಕೆ ಹೋದಳು. ತುಂಬಾ ಫನ್ನಿ ಅನಿಸಿ ಮತ್ತೊಮ್ಮೆ ಅದೇ ಸ್ಥಳಕ್ಕೆ ಬಂದು ಕ್ಯಾಮರಾದ ಮುಂದೆ ಪೋಸ್ ನೀಡಿದಳು.
ಹೀಗೆ ಸತತ ಐದು ಬಾರಿ ಆ ಕ್ಯಾಮರಾದ ಮುಂದೆ ಕಾರಿನೊಳಗಿನಂದಲೇ ಪೋಸ್ ನೀಡಿ ಮುಂದೆ ಸಾಗಿದಳು. ಯಾಂತ್ರಿಕ ಟ್ರಾಫಿಕ್ ಕ್ಯಾಮರಾ ಐದು ಬಾರಿಯೂ ಪ್ಲಾಷ್ ಆಗಿ ಈಕೆಯ ಸುಂದರ ಮುಖದ ಚಿತ್ರವನ್ನು ಸೆರೆಹಿಡಿಯಿತು. ಆಕೆಗೆ ತುಂಬಾ ಸಂತೋಷವಾಯಿತು.
ಆದರೆ ಇದೀಗ ಕ್ಯಾಮರಾ ಮುಂದೆ ಸ್ಮೈಲ್ ಕೊಟ್ಟ ತಪ್ಪಿಗೆ ಈಕೆ ಪಶ್ಚಾತಾಪ ಪಡುತ್ತಿದ್ದಾಳೆ. ವೇಗದ ಮಿತಿ ಮೀರದೆ ಪ್ರಯಾಣಿಸಿದರೂ ಟ್ರಾಫಿಕ್ ಪೊಲೀಸರು ಆ ಕ್ಯಾಮರಾದಲ್ಲಿದ್ದ ಆಕೆಯ ಐದು ಆಕರ್ಷಕ ಚಿತ್ರಗಳನ್ನು ನೋಡಿ ದಂಡ ವಿಧಿಸಿದ್ದಾರೆ.
ಎರಡು ವಾರಗಳು ಕಳೆದು ಆಕೆಗೆ ಒಂದಲ್ಲ, ಎರಡಲ್ಲ, ಒಟ್ಟು ಐದು ಟ್ರಾಫಿಕ್ ಕೇಸ್ ಚಲನ್ ಗಳು ಬಂದಿದ್ದವು. ಕಾರಣ ಆಕೆ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಇದೀಗ ಕ್ಯಾಮರಾ ಮುಂದೆ ನಕ್ಕ ತಪ್ಪಿಗೆ ಆಕೆ ಪೆಚ್ಚು ಮುಖ ಹಾಕಿಕೊಂಡಿದ್ದಾಳಂತೆ!


Click it and Unblock the Notifications
