ಕುಡಿದು ಡ್ರೈವಿಂಗ್ ಮಾಡಿದ್ರೆ 4 ವರ್ಷದವರೆಗೆ ಜೈಲು!

ವಾಹನ ಚಾಲನೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವರ ವಿರುದ್ಧ ಕಾನೂನು ಬಿಗಿಗೊಂಡಿದೆ. ಅದರಲ್ಲೂ ಕುಡಿದು ವಾಹನ ಚಲಾಯಿಸುವುದು ಗಂಭೀರ ಅಪರಾಧವಾಗಿದೆ.

ಚಾಲಕ ಆಲ್ಕೋಹಾಲ್ ಸೇವಿಸಿರುವುದು ಪತ್ತೆಯಾದರೆ 2 ಸಾವಿರ ರು.ನಿಂದ 10 ಸಾವಿರ ರು.ವರೆಗೆ ದಂಡ ವಿಧಿಸಲಾಗುತ್ತದೆ. ಅಥವಾ ಆರು ತಿಂಗಳಿನಿಂದ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಅಥವಾ ಇವೆರಡೂ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ.

ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದವರ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣ 30ರಿಂದ 60 ಮಿಲಿಗ್ರಾಂ ಇದ್ದರೆ 2 ಸಾವಿರ ರು. ದಂಡ ಅಥವಾ/ಮತ್ತು ಆರು ತಿಂಗಳು ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಆಲ್ಕೋಹಾಲ್ ಪ್ರಮಾಣ 60ರಿಂದ 150 ಮಿಲಿಗ್ರಾಂ ಇದ್ದರೆ ಅಂತವರಿಗೆ 1 ವರ್ಷ ಜೈಲುಶಿಕ್ಷೆ ಅಥವಾ/ಮತ್ತು 4 ಸಾವಿರ ರು. ದಂಡ ಅಥವಾ ಇವೆರಡನ್ನೂ ವಿಧಿಸಲು ಅವಕಾಶವಿದೆ. ಹೀಗೆ ಒಮ್ಮೆ ಸಿಕ್ಕಿಬಿದ್ದು ಮೂರು ವರ್ಷದೊಳಗೆ ಮತ್ತೆ ಇದೇ ಕೇಸ್ ಮೇಲೆ ಸಿಕ್ಕಿಬಿದ್ದರೆ 8 ಸಾವಿರ ರುಪಾಯಿ ದಂಡ ಅಥವಾ/ಮತ್ತು 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾದೀತು.

ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣ 100 ಮಿಲಿಗ್ರಾಂಗಿಂತ ಹೆಚ್ಚಿದ್ದ ವಾಹನ ಚಾಲಕರಿಗೆ 5 ಸಾವಿರ ರುಪಾಯಿ ದಂಡ ಅಥವಾ/ಮತ್ತು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಮೂರು ವರ್ಷಕ್ಕೆ ಮುನ್ನ ಮತ್ತೊಮ್ಮೆ ಇಂತಹ ಅಪರಾಧ ಮಾಡಿ ಸಿಕ್ಕಿಬಿದ್ದರೆ 4 ವರ್ಷ ಜೈಲು ಶಿಕ್ಷೆ, 10 ಸಾವಿರ ರುಪಾಯಿ ದಂಡ ಮತ್ತು ವಾಹನ ಪರವಾನಿಗೆ ರದ್ದುಗೊಳಿಸಲು ಅವಕಾಶವಿದೆ. ಏನಿದು ಕಠಿಣ ಕಾನೂನು?

More from DriveSpark

Article Published On: Friday, March 2, 2012, 15:45 [IST]
English summary
The fines for traffic violations such as drunken driving will soon be made more strict as part of the amendments to the Motor Vehicles Act. Drunk drivers would not only be fined five times higher, but will also face jail terms up to four years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+