ರೆನೊ ಟ್ವಿಜಿ ಚಾಲನೆಗೆ ಲೈಸನ್ಸ್ ಅಗತ್ಯವಿಲ್ಲ
ಪ್ರಮುಖವಾಗಿಯೂ ನಗರ ಪ್ರದೇಶ ಡ್ರೈವಿಂಗ್ ಗುರಿಯಾಗಿರಿಸಿಕೊಂಡು ರೆನೊ ಟ್ವಿಜಿ ತಯಾರಿಸಲಾಗಿದೆ. ಈ ಅಲ್ಟ್ರಾ ಕಾಂಪಾಕ್ಟ್ ಆಯಾಮ ಹೊಂದಿರುವ ಟ್ವಿಜಿ ಭಾರ ಎಂಜಿನ್‌ಗೆ ಅನುಗುಣವಾಗಿದೆ. ಅಂದ ಹಾಗೆ ಕ್ವಾಡ್ರಾಸೈಕಲ್ ವಿಭಾಗಕ್ಕೆ ಸೇರಿರುವ ಈ ನಾಲ್ಕು ಚಕ್ರದ ವಾಹನವನ್ನು ಚಲಾಯಿಸಲು ಯಾವುದೇ ಡ್ರೈವಿಂಗ್ ಲೈಸನ್ಸ್‌ನ ಅಗತ್ಯವಿರುವುದಿಲ್ಲ. ಇದು 2.34 ಎಂ ಉದ್ದ, 1.24 ಎಂ ಅಗಲ ಹಾಗೂ 1.45 ಎಂ ಎತ್ತರವನ್ನಷ್ಟೇ ಹೊಂದಿದೆ.
ಪಾಸಿಟಿವ್ ಟ್ವಿಜಿ
ರೆನೊ ಟ್ವಿಜಿ ಮೊದಲ ಬಾರಿಗೆ 2010 ಪ್ಯಾರಿಸ್ ಆಟೋ ಷೋದಲ್ಲಿ ಪ್ರದರ್ಶಿಸಲಾಗಿತ್ತು. ಸಂಪೂರ್ಣವಾಗಿಯೂ ಎಲೆಕ್ಟ್ರಿಕ್ ಮೋಟಾರ್‌ನಿಂದ ಚಾಲನೆಯಾಗಲಿರುವ ರೆನೊ ಟ್ವಿಜಿಗಳಲ್ಲಿ ಟ್ವಿನ್ ಹಾಗೂ ಇಸಿಗಳೆಂಬ ಎರಡು ಸೀಟುಗಳನ್ನು ಹೊಂದಿರಲಿದೆ.
ಪ್ರಮುಖವಾಗಿಯೂ ನಗರ ಪ್ರದೇಶದ ಬಿಡುವಿಲ್ಲದ ಚಾಲಕರು ದ್ವಿತೀಯ ವಾಹನ ಬಯಸಿದ್ದರೆ ರೆನೊ ಟ್ವಿಜಿ ಪರಿಗಣಿಸಬಹುದು ಎಂದು ಕಂಪನಿ ಆಹ್ವಾನ ನೀಡುತ್ತಿದೆ. ಅಂದ ಹಾಗೆ ಹೊಸತಾಗಿ ಡ್ರೈವಿಂಗ್ ಕಲಿತುಕೊಳ್ಳಲು ಉತ್ಸುಕರಾಗಿರುವ ಯುವ ಜನಾಂಗದವರು ಕೂಡಾ ಯಾವುದೇ ಡ್ರೈವಿಂಗ್ ಲೈಸನ್ಸ್ ಇಲ್ಲದ ಹೊರತಾಗಿಯೂ ಇದನ್ನು ಪರಿಗಣಿಸಬಹುದಾಗಿದೆ.
ಏತನ್ಮಧ್ಯೆ ಕಾರಿನ ಎಲ್ಲ ಮೂಲಭೂತ ಘಟಕಗಳನ್ನು ರೆನೊ ಟ್ವಿಜಿಯಲ್ಲಿ ಆಳವಡಿಸಲಾಗಿದೆ. ನಾಲ್ಕು ಚಕ್ರದ ಚಾಸೀಸ್, ಸ್ಟೀರಿಂಗ್ ವೀಲ್, ಪ್ಯಾಡೆಲ್, ಬಾಡಿ ಡಿಸೈನ್ ಹಾಗೂ ಟು ಸಿಟ್ಟಿಂಗ್ ವ್ಯವಸ್ಥೆಗಳಿವೆ. ಒಟ್ಟಿನಲ್ಲಿ ರೆನೊ ಟ್ವಿಜಿ ಆಧುನಿಕ ವಿನ್ಯಾಸ ಹೊಂದಿರುವ ಕಾರು ಆಗಿದೆ. ಬಾಡಿ ಕೆಲಸ ಸ್ವಿಪಿಂಗ್ ಲೈನ್ಸ್‌ನಿಂದ ಮಾಡಲಾಗಿದ್ದು ಐಚ್ಛಿಕ ವಿಂಗ್ ಡೋರ್ ನೀಡಲಾಗಿದೆ.
ನಗರ ಪ್ರದೇಶದ ಸ್ಟಾಂಡರ್ಡ್ ಸೈಕಲ್‌ಗಿಂತಲೂ ಹೆಚ್ಚು ಮೈಲೇಜ್ ರೆನೊ ಟ್ವಿಜಿ ನೀಡಲಿದೆ. ಡೊಮೆಸ್ಟಿಕ್ ಸಾಕೆಟ್‌ನಲ್ಲಿ 3 ವರೆ ಗಂಟೆಗಳಷ್ಟು ಕಾಲ ಸಂಪೂರ್ಣ ರಿ ಚಾರ್ಜ್ ಮಾಡಿಸಿದರೆ 100 ಕೀ.ಮೀ ರೇಂಜಿನಷ್ಟು ಪ್ರಯೋಜನ ಪಡೆಯಬಹುದಾಗಿದೆ.
ರೆನೊ ಟ್ವಿಜಿ 13 ಕೆಡಬ್ಲ್ಯು (17 ಎಚ್‌ಪಿ) ಎಲೆಕ್ಟ್ರಿಕ್ ಮೋಟಾರ್ 57 ಎನ್‌ಎಂ ಉತ್ಪಾದಿಸಲಿದ್ದು, ಗರಿಷ್ಠ ವೇಗತೆ ಪ್ರತಿ ಗಂಟೆಗೆ 80 ಕಿಲೋ ಮೀಟರ್ ದೊರಕಲಿದೆ. ಇದನ್ನು ಚಾಲನೆ ಮಾಡಲು ಲೈಸನ್ಸ್ ಅಗತ್ಯವಿರುತ್ತದೆ. ಆದರೆ 33 ಎನ್‌ಎಂ ಉತ್ಪಾದಿಸುವ 4 ಕೆಡಬ್ಲ್ಯು (5 ಎಚ್‌ಪಿ) ಮೋಟಾರ್ ಚಾಲನೆ ಮಾಡಲು ಲೈಸನ್ಸ್ ಅಗತ್ಯವಿರುವುದಿಲ್ಲ. ಸ್ಟಾರ್ಟ್ ಅಪ್ ಸಾಧನ ಲಭ್ಯವಿರುವ ಇದರ ಗರಿಷ್ಠ ವೇಗತೆ ಪ್ರತಿ ಗಂಟೆಗೆ 45 ಕೀ.ಮೀ ಆಗಿರಲಿದೆ. ರೆನೊ ಟ್ವಿಜಿ 6.1 ಲಿಥಿಯಂ-ಇಯಾನ್ ಬ್ಯಾಟರಿಯಿಂದ ಚಾಲನೆಯಾಗಲಿದೆ.
ಪ್ರಸ್ತುತ ಮೂರು ವೆರಿಯಂಟ್, ನಾಲ್ಕು ಕಲರ್ ಹಾಗೂ ಎರಡು ಎಂಜಿನ್ ಆಯ್ಕೆಗಳಲ್ಲಿ ರೆನೊ ಟ್ವಿಜಿ ಲಭ್ಯವಿದೆ. ಆದರೆ ಯುರೋಪ್‌ನಲ್ಲಿ ಪ್ರದರ್ಶನಗೊಂಡಿರುವ ರೆನೊ ಟ್ವಿಜಿ ಭಾರತಕ್ಕೂ ಪ್ರವೇಶಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ರೆನೊ ಟ್ವಿಜಿ ಆಕರ್ಷಕ ವಿನ್ಯಾಸ- ಹೆಚ್ಚಿನ ಫೋಟೋಗಳಿಗಾಗಿ ಮುಂದಕ್ಕೆ ಕ್ಲಿಕ್ಕಿಸಿ..

ರೆನೊ ಟ್ವಿಜಿ ಆಕರ್ಷಕ ವಿನ್ಯಾಸ- ಹೆಚ್ಚಿನ ಫೋಟೋಗಳಿಗಾಗಿ ಮುಂದಕ್ಕೆ ಕ್ಲಿಕ್ಕಿಸಿ..

ರೆನೊ ಟ್ವಿಜಿ ಆಕರ್ಷಕ ವಿನ್ಯಾಸ- ಹೆಚ್ಚಿನ ಫೋಟೋಗಳಿಗಾಗಿ ಮುಂದಕ್ಕೆ ಕ್ಲಿಕ್ಕಿಸಿ..

ರೆನೊ ಟ್ವಿಜಿ ಆಕರ್ಷಕ ವಿನ್ಯಾಸ- ಹೆಚ್ಚಿನ ಫೋಟೋಗಳಿಗಾಗಿ ಮುಂದಕ್ಕೆ ಕ್ಲಿಕ್ಕಿಸಿ..

ರೆನೊ ಟ್ವಿಜಿ ಆಕರ್ಷಕ ವಿನ್ಯಾಸ- ಹೆಚ್ಚಿನ ಫೋಟೋಗಳಿಗಾಗಿ ಮುಂದಕ್ಕೆ ಕ್ಲಿಕ್ಕಿಸಿ..

ರೆನೊ ಟ್ವಿಜಿ ಆಕರ್ಷಕ ವಿನ್ಯಾಸ


Click it and Unblock the Notifications








