ತೆರೆಮರೆಯಲ್ಲಿ ಸಜ್ಜಾಗುತ್ತಿರುವ ಮುಂದಿನ ತಲೆಮಾರಿನ ಡೇಸಿಯಾ ಡಸ್ಟರ್

Written By:

ಫ್ರಾನ್ಸ್ ನಲ್ಲಿ ಡೇಸಿಯಾ ಡಸ್ಟರ್ ಭಾರತದಲ್ಲಿ ರೆನೊ ಡಸ್ಟರ್ ಎಂಬ ಮರು ಲಾಂಛನದೊಂದಿಗೆ ಮಾರಾಟದಲ್ಲಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಪ್ರಸ್ತುತ ಹೊಸ ತಲೆಮಾರಿನ ಡೇಸಿಯಾ ಡಸ್ಟರ್ ಸಿದ್ಧಗೊಳ್ಳುತ್ತಿರುವುದು ಭಾರತೀಯ ಡಸ್ಟರ್ ಪ್ರೇಮಿಗಳಲ್ಲೂ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ ಮುಂದಿನ ತಲೆಮಾರಿನ ಡೇಸಿಯಾ ಡಸ್ಟರ್

ಪ್ರಮುಖವಾಗಿಯೂ ಡೇಸಿಯಾ ಡಸ್ಟರ್ ತಾಂತ್ರಿಕತೆಯಲ್ಲಿ ಬದಲಾವಣೆ ಕಂಡುಬರಲಿದ್ದು, ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೇರಿದಂತೆ ಇನ್ನಿತ್ತರ ವೈಶಿಷ್ಟ್ಯಗಳು ಕಂಡುಬರಲಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ ಮುಂದಿನ ತಲೆಮಾರಿನ ಡೇಸಿಯಾ ಡಸ್ಟರ್

ಬಲ್ಲ ಮೂಲಗಳ ಪ್ರಕಾರ ಹೊಸ ತಲೆಮಾರಿ ಡೇಸಿಯಾ ಡಸ್ಟರ್ 2017ನೇ ಸಾಲಿನಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ. ಮೊದಲು ಯುರೋಪ್ ಮಾರುಕಟ್ಟೆಯನ್ನು ತಲುಪಲಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ ಮುಂದಿನ ತಲೆಮಾರಿನ ಡೇಸಿಯಾ ಡಸ್ಟರ್

ಹಲವಾರು ನಿಸ್ಸಾನ್ ಹಾಗೂ ರೆನೊ ಕಾರುಗಳು ನಿರ್ಮಾಣವಾಗಿರುವ ಕಾಮನ್ ಮೊಡ್ಯುಲ್ ಫ್ಯಾಮಿಲಿ ಅಥವಾ ಸಿಎಂಎಫ್ ತಳಹದಿಯಲ್ಲಿ ಹೊಸ ತಲೆಮಾರಿನ ಡೇಸಿಯಾ ಡಸ್ಟರ್ ನಿರ್ಮಾಣವಾಗಲಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ ಮುಂದಿನ ತಲೆಮಾರಿನ ಡೇಸಿಯಾ ಡಸ್ಟರ್

ಎಂಜಿನ್ ಸಂಬಂಧಿ ಮಾಹಿತಿಗಳು ಇನ್ನಷ್ಟೇ ಹೊರ ಬೀಳಬೇಕಿದೆ. ಇದು ಯುರೋಪ್ ನಲ್ಲಿ 1.6 ಲೀಟರ್ ಮತ್ತು 2.0 ಲೀಟರ್ ಎಂಜಿನ್ ಗಳನ್ನು ಗಿಟ್ಟಿಸಿಕೊಳ್ಳಲಿದೆ. ಹಾಗಿದ್ದರೂ ಭಾರತ ಮಾದರಿಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವ ಸಾಧ್ಯತೆಗಳಿಲ್ಲ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ ಮುಂದಿನ ತಲೆಮಾರಿನ ಡೇಸಿಯಾ ಡಸ್ಟರ್

ನೂತನ ಡೇಸಿಯಾ ಡಸ್ಟರ್ ಹಿಂದಿನಕ್ಕಿಂತಲೂ ಹೆಚ್ಚು ಉದ್ದವಾದ ಚಕ್ರಾಂತರವನ್ನು ಪಡೆಯಲಿದ್ದು, ಇದರೊಂದಿಗೆ ಹೆಚ್ಚುವರಿ ಎರಡು ಸೀಟುಗಳ ಸೇರ್ಪಡೆಯಾಗಲಿದೆ. ಇದರೊಂದಿಗೆ ಒಟ್ಟು ಆಸನ ಸಾಮರ್ಥ್ಯ ಏಳಕ್ಕೆ ಏರಿಕೆಯಾಗಲಿದ್ದು, ಕಂಪ್ಲೀಟ್ ಫ್ಯಾಮಿಲಿ ವಾಹನವೆನಿಸಿಕೊಳ್ಳಲಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ ಮುಂದಿನ ತಲೆಮಾರಿನ ಡೇಸಿಯಾ ಡಸ್ಟರ್

ಕಳೆದ ಕೆಲವು ಸಮಯಗಳಲ್ಲಿ ಭಾರತದಲ್ಲಿ ಡಸ್ಟರ್ ಸ್ವಲ್ಪ ಹಿನ್ನಡೆಯನ್ನು ಅನುಭವಿಸಿರುವುದರಿಂದ ಹೊಸ ಮಾದರಿಯು ಚೇತರಿಕೆಯನ್ನು ನೀಡುವಲ್ಲಿ ಗಮನಾರ್ಹ ಪಾತ್ರವನ್ನು ವಹಿಸಲಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ ಮುಂದಿನ ತಲೆಮಾರಿನ ಡೇಸಿಯಾ ಡಸ್ಟರ್

ಉಪಯುಕ್ತ ವಾಹನ ವಿಭಾಗದಲ್ಲಿ ಅದರಲ್ಲೂ ಪ್ರಮುಖವಾಗಿಯೂ ಕ್ರೀಡಾ ಬಳಕೆಯ ವಾಹನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ತಲೆಮಾರಿನ ಡಸ್ಟರ್ ಕಾರು ಬಿಡುಗಡೆ ಮಾಡಲು ರೆನೊ ಯೋಜನೆಯಿರಿಸಿಕೊಂಡಿದೆ.

Read more on ರೆನೊ renault
English summary
2017 Dacia Duster In The Works; To Be Extra Spacious
Story first published: Tuesday, December 27, 2016, 10:20 [IST]
Please Wait while comments are loading...

Latest Photos