ಬೆಂಗಳೂರಲ್ಲಿ ಕುಡುಕ ಚಾಲಕನ ಅವಾಂತರ

ಬೆಂಗಳೂರು, ಜು 24: ಸೋಮವಾರ ರಾತ್ರಿ ಪಾನಮತ್ತ ಚಾಲಕನೊಬ್ಬ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ ಆರು ಬೈಕ್ ಮತ್ತು ಒಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ಬಸವನಗುಡಿ ಸಮೀಪ ನಡೆದಿದೆ. ಪುಣ್ಯಕ್ಕೆ ಯಾವುದೇ ಸಾವುನೋವು ಸಂಭವಿಸಿಲ್ಲ.

ರಾತ್ರಿ ಸುಮಾರು ಹತ್ತುವರೆ ಗಂಟೆಗೆ ಎಚ್ ಮಂಜುನಾಥ(24) ಕುಡಿದು ಚಾಲನೆ ಮಾಡಿ ಈ ಅವಾಂತರ ಸೃಷ್ಟಿಸಿದ್ದಾನೆ. ಆತ ಟ್ರಾವೆಲ್ ಏಜೆಂಟ್ ನಾಗಗುಪ್ತ ಎಂಬವರ ಕಾರು ಚಾಲಕನಾಗಿದ್ದಾನೆ.

"ಒಬ್ಬರನ್ನು ಡ್ರಾಪ್ ಮಾಡಿ ಬರುವಾಗ ಸ್ನೇಹಿತರು ಸಿಕ್ಕಿದ್ದಾರೆ. ಅವರೊಂದಿಗೆ ತ್ರಿಮುತಿ ಬಾರ್ ಗೆ ಹೋಗಿ ಆರು ಪೆಗ್ ಕುಡಿದೆ. ನಂತರ ನನಗೆ ಕಾರಿನ ಮೇಲೆ ಹಿಡಿತ ತಪ್ಪಿತ್ತು" ಎಂದು ಪೊಲೀಸರ ಮುಂದೆ ಮಂಜುನಾಥ ತಪ್ಪೊಪ್ಪಿಕೊಂಡಿದ್ದಾನೆ.

ಮೆಡಿಕಲ್ ಟೆಸ್ಟ್ ಆಧರಿಸಿ ಆತನ ಮೇಲೆ ಕುಡಿದು ವಾಹನ ಚಾಲನೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿವೇಳೆ ಕುಡಿದು ವಾಹನ ಚಾಲನೆ ಮಾಡುವುದು ಅಪರಾಧ. ಪಾನಮತ್ತ ಚಾಲಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಅವಕಾಶವಿದೆ. ಹೀಗಾಗಿ ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ಕನ್ನಡ ಡ್ರೈವ್ ಸ್ಪಾರ್ಕ್ ಆಗಾಗ ಎಚ್ಚರಿಸುತ್ತಲೇ ಇದೆ.

ವಾಹನ ಚಾಲಕ ಕುಡಿದು ವಾಹನ ಚಾಲನೆ ಮಾಡುವುದು ಪತ್ತೆಯಾದರೆ 2 ಸಾವಿರ ರುಪಾಯಿಯಿಂದ 10 ಸಾವಿರ ರುಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ. ಅಥವಾ ಆರು ತಿಂಗಳಿನಿಂದ ನಾಲ್ಕು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಅಥವಾ ಇವೆರಡೂ ಶಿಕ್ಷೆಯನ್ನೂ ಅನುಭವಿಸಬೇಕಾಗಬಹುದು.

ರಕ್ತದಲ್ಲಿ ಸಿಕ್ಕ ಆಲ್ಕೋಹಾಲ್ ಪ್ರಮಾಣಕ್ಕೆ ತಕ್ಕಂತೆ ಶಿಕ್ಷೆ ಹೇಗೆ?

More from DriveSpark

Article Published On: Tuesday, July 24, 2012, 11:06 [IST]
English summary
A drunk driver who was tryuing to evade police who were enforcing a nakabandi yesterday night went on to hit seven more vehicles causing a massive string of accidents near Basavanagudi. He was driving a grey MAruti Suzuki Swift DZire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+