ವಿದ್ಯಾರ್ಥಿಗಳ ಸಾಧನೆ: ನೀರಲ್ಲೂ ರೋಡಲ್ಲೂ ಓಡುವ ಕಾರು

Engineering students designed amphibian Car
ದೇಶದ ಪ್ರತಿಭಾನ್ವಿತ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಒಮ್ಮೊಮ್ಮೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಅನ್ವೆಷಣೆಗಳನ್ನು ಮಾಡಿ ಬೆರಗು ಹುಟ್ಟಿಸುತ್ತಾರೆ. ಇದೀಗ ತಂಜಾವೂರು ಪ್ರಿಸ್ಟ್ ಯುನಿವರ್ಸಿಟಿಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಲ್ಲೂ ರಸ್ತೆಯಲ್ಲೂ ಸಾಗುವ ಕಾರೊಂದನ್ನು ವಿನ್ಯಾಸ ಮಾಡಿದ್ದಾರೆ.

ಪ್ರಿಸ್ಟ್ ಯುನಿವರ್ಸಿಟಿಯ ವಿದ್ಯಾರ್ಥಿಗಳು ಎರಡು ಬಗೆಯ ವಾಹನ ಅಭಿವೃದ್ಧಿಪಡಿಸಿದ್ದಾರೆ. ಒಂದು ತಂಡದ ವಿದ್ಯಾರ್ಥಿಗಳು ಪೆಟ್ರೋಲ್/ಎಲ್ ಪಿಜಿ ಚಾಲಿತ ಹಗುರ, ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಅಚ್ಚರಿಯೆಂಬಂತೆ ಪ್ರತಿಲೀಟರ್ ಪೆಟ್ರೋಲಿಗೆ 65 ಕಿ.ಮೀ. ಮೈಲೇಜ್ ನೀಡುತ್ತದೆ.

ನೀರಲ್ಲೂ ರಸ್ತೆಯಲ್ಲೂ ಸರಾಗವಾಗಿ ಚಲಿಸುವ ಕಾರನ್ನು ಇದೇ ಸಂಸ್ಥೆಯ ವಿದ್ಯಾರ್ಥಿಗಳು ವಿನ್ಯಾಸ ಮಾಡಿದ್ದಾರೆ. ಸೌರಶಕ್ತಿ ಬ್ಯಾಟರಿಯ ಎಲೆಕ್ಟ್ರಿಕ್ ಕಾರಾಗಿದ್ದು ರಸ್ತೆ ಮತ್ತು ನೀರಲ್ಲಿ ಚಲಿಸುತ್ತದೆ. ಪ್ರಿಸ್ಟ್ ಯುನಿವರ್ಸಿಟಿಯ ಎರಡು ಗುಂಪಿನ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೈ ಟೆಕ್ ಪ್ರಾಜೆಕ್ಟ್ ಇಂಡಸ್ಟ್ರಿಸ್ ಸಹಯೋಗದಲ್ಲಿ ಇವೆರಡು ಕಾರುಗಳನ್ನು ವಿನ್ಯಾಸ ಮಾಡಿದ್ದಾರೆ.

ಈ ಎಲೆಕ್ಟ್ರಿಕ್ ಕಾರನ್ನು ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ರಾಜೇಂದ್ರ ಕುಮಾರ್, ನಿತೀಶ್ ಕುಮಾರ್, ಸಂಜಯ್ ಕುಮಾರ್, ಅಭೀಷೇಕ್ ರಾಜ್, ರೂಪಕ್ ಕುಮಾರ್, ಸಂಜಯ್ ಕುಮಾರ್ ಯಾದವ್ ಮತ್ತು ಚಂದ್ರಕಾಂತ್ ಅಭಿವೃದ್ಧಿಪಡಿಸಿದ್ದಾರೆ.

ಮುಂದಿನ ಪುಟದಲ್ಲಿ ಓದಿ: ಎರಡು ಕಾರಿಗೆ ಕೇವಲ 35 ಸಾವಿರ ರುಪಾಯಿ

More from DriveSpark

Article Published On: Wednesday, January 25, 2012, 10:21 [IST]
English summary
Engineering students of PRIST University, Thanjavur have designed two types of light weight, eco-friendly and low-cost cars, including an amphibian one capable of traveling on road and floating on water.
Read more on ಕಾರು concept car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+