ವಿದ್ಯಾರ್ಥಿಗಳ ಸಾಧನೆ: ಈ ಕಾರಿಗೆ ಕೇವಲ 35 ಸಾವಿರ ರುಪಾಯಿ

Engineering students designed amphibian Car
ಮೂವತ್ತೈದು ಸಾವಿರ ರೂಪಾಯಿಗೆ ಬೈಕ್ ಸಿಗೋದು ಕಷ್ಟ. ಕಾರೆಲ್ಲಿಂದ ಬಂತು ಎಂದು ಕೇಳದಿರಿ. ತಂಜಾವೂರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿನ್ಯಾಸ ಮಾಡಿದ ಈ ಎರಡು ಕಾರುಗಳಿಗೆ ತಗುಲಿದ ವೆಚ್ಚ ಮಾಡಿದ್ದು ಕೇವಲ 35 ಸಾವಿರ ರುಪಾಯಿಯಂತೆ. ಸ್ಟೀಲ್, ಅಲ್ಯುಮಿನಿಯಂ ಅಲಾಯ್ ವೀಲ್, ಪ್ಲಾಸ್ಟಿಕ್ ಮತ್ತು ಇನ್ನಿತ್ತರ ಸ್ಥಳೀಯ ಬಿಡಿಭಾಗಗಳನ್ನು ಜೋಡಿಸಿ ಇವೆರಡು ಕಾರುಗಳನ್ನು ಅಭಿವೃದ್ಧಿಪಡಿಸಲಾಗಿದೆ.

ನೀರು ಮತ್ತು ರಸ್ತೆಯಲ್ಲಿ ಚಲಿಸುವ ಕಾರಿನಲ್ಲಿ ಕಾರು ಸಾಗಲಿ ಮುಂದೆ ಹೋಗಲಿ ದೂರತೀರವ ಸೇರಲಿ ಎಂದು ಹಾಡಬಹುದು. ನೀರಿನಲ್ಲಿ ಪ್ರಯಾಣಿಸುವಾಗ 2 ಜನರು ಈ ಕಾರಿನಲ್ಲಿ ಕುಳಿತುಕೊಳ್ಳಬಹುದು. ನೂತನ ಕಾರು ರಸ್ತೆಯಲ್ಲಿ ಪ್ರತಿಗಂಟೆಗೆ ಗರಿಷ್ಠ 30 ಕಿ.ಮೀ. ಮತ್ತು ನೀರಿನಲ್ಲಿ ಪ್ರತಿಗಂಟೆಗೆ ಗರಿಷ್ಠ 15 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಒಟ್ಟಾರೆ ಇದು ಪರಿಸರ ಸ್ನೇಹಿ ವಾಹನವೆಂದು ವಿದ್ಯಾರ್ಥಿಗಳು ಹೇಳುತ್ತಾರೆ.

ಮತ್ತೊಂದು ಕಾರು 110ಸಿಸಿಯ ಪೆಟ್ರೋಲ್/ಎಲ್ ಪಿಜಿಯ ತೂಕ ಕೇವಲ 135 ಕೆ.ಜಿ. ಇದನ್ನು ಅಲೋಕ್ ಕುಮಾರ್, ಅಮಿತ್ ಕುಮಾರ್, ಅನಂತ್ ಕುಮಾರ್ ಮತ್ತು ಅಜಯ್ ಕುಮಾರ್ ಅಭಿವೃದ್ಧಿಪಡಿಸಿದ್ದಾರೆ. ಈ ಕಾರು ಪ್ರತಿಗಂಟೆಗೆ ಗರಿಷ್ಠ 50 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.

ಈ ಕಾರು ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 65 ಕಿ.ಮೀ. ಮೈಲೇಜ್ ನೀಡುತ್ತದೆ ಎಂದು ಅವರು ಹೇಳುತ್ತಾರೆ. ಈ ಕಾರನ್ನು ನೋಡಲು ಬಂದ ಸ್ಟ್ರಿಕ್ಟ್ ಕಲೆಕ್ಟರ್ ಟಿ ಮುನುಸ್ವಾಮಿ ವಿದ್ಯಾರ್ಥಿಗಳ ಬೆನ್ನು ತಟ್ಟಿದ್ದಾರೆ.

More from DriveSpark

Article Published On: Wednesday, January 25, 2012, 10:18 [IST]
English summary
Engineering students of PRIST University, Thanjavur have designed two types of light weight, eco-friendly and low-cost cars, including an amphibian one capable of traveling on road and floating on water.
Read more on ಕಾರು concept car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+