ಹಕ್ಕಿಯಂತೆ ಹಾರುವ ಕಾರಿನ ಮಾರಾಟ ಸನ್ನಿಹಿತ

ಮೆಲ್ಬೊರ್ನ್, ಆ 30: ಬಹುನಿರೀಕ್ಷಿತ ಹಾರುವ ಕಾರನ್ನು ಖರೀದಿಸಲು ಇನ್ನು ಹೆಚ್ಚು ಸಮಯ ಕಾಯಬೇಕಿಲ್ಲ. ಟ್ರಾನ್ಸಿಸನ್ ಎಂಬ ನಾಲ್ಕು ಚಕ್ರದ ಹಾರುವ ಕಾರಿನ ಮಾರಾಟ ಶೀಘ್ರದಲ್ಲಿ ಆರಂಭವಾಗುವ ಸೂಚನೆ ದೊರಕಿದೆ.

ಅಮೆರಿಕದ ರಕ್ಷಣಾ ಇಲಾಖೆ ನೆರವಿನಿಂದ ಅಭಿವೃದ್ಧಿಪಡಿಸುತ್ತಿರುವ ಟ್ರಾನ್ಸಿಸನ್ ಈಗಾಗಲೇ ರಸ್ತೆ ಮತ್ತು ಆಕಾಶದಲ್ಲಿ ಚಲಿಸಲು ಪರವಾನಿಗೆ ಪಡೆದಿದೆ. ಇದು ರಸ್ತೆಯಲ್ಲಿ ಚಲಿಸುತ್ತಿರುವಂತೆಯೇ 20 ಸೆಕೆಂಡಿನಲ್ಲಿ ರೆಕ್ಕೆ ಬಿಚ್ಚಿ ಆಕಾಶದಲ್ಲಿ ಸುಮಾರು 500 ಮೈಲು ಎತ್ತರದವರೆಗೆ ಹಾರಬಲ್ಲದು.

ಆದರೆ ಟೆರ್ರಾಫುಗಿಯಾ ಟ್ರಾನ್ಸಿಸನ್ ಅಗ್ಗದ ದರಕ್ಕೆ ದೊರಕದು. ಇದರ ದರ ಸುಮಾರು 1,77,000 ಪೌಂಡ್ ಇರಬಲ್ಲದು. ಅಂದರೆ ಫೆರಾರಿ ಕಾರಿಗಿಂತಲೂ ದುಬಾರಿಯಾಗಿದೆ. ಈಗಾಗಲೇ ಬುಕ್ಕಿಂಗ್ ಮಾಡಿರುವ ಹತ್ತು ಗ್ರಾಹಕರಿಗೆ ಮುಂದಿನ ವರ್ಷ ಹಾರುವ ಕಾರನ್ನು ಹಸ್ತಾಂತರಿಸಲು ಕಂಪನಿ ನಿರ್ಧರಿಸಿದೆ.

ಹಾರುವ ಕಾರನ್ನು ಮಾರಾಟ ಮಾಡುವ ಕುರಿತು ಹೆಚ್ಚು ಗಂಭೀರವಾಗಿರುವುದಾಗಿ ಟೆರ್ರಾಫುಗಿಯಾ ಹಾರುವ ಕಾರನ್ನು ಕಂಡು ಹಿಡಿದ ಕಾರ್ಲ್ ಡ್ರಟ್ರಿಚ್ ಹೇಳಿದ್ದಾನೆ. ಈತ 2006ನೇ ಇಸವಿಯಲ್ಲಿ ಈ ಕಾರನ್ನು ಅಭಿವೃದ್ಧಿಪಡಿಸಲು ಆರಂಭಿಸಿದ್ದ.

ಟೆರ್ರಾಫುಗಿಯಾದಲ್ಲಿ ಮಡುಚಿಕೊಳ್ಳುವ ರೆಕ್ಕೆ ಇದೆ. ಅಂದರೆ ರಸ್ತೆಯಲ್ಲಿ ಸಾಗುತ್ತಿರುವ ಕಾರೊಂದು ಕೆಲವೇ ಸೆಕೆಂಡಿನಲ್ಲಿ ರೆಕ್ಕೆ ಬಿಚ್ಚಿ ಹಾರಲಿದೆ. ಪ್ರತಿಗಂಟೆಗೆ 110 ಕಿ.ಮೀ. ವೇಗದಲ್ಲಿ ಮತ್ತು ಫುಲ್ ಟ್ಯಾಂಕ್ ಇಂಧನದಲ್ಲಿ ಸುಮಾರು 460 ರಿಂದ 500 ಮೈಲು ಎತ್ತರದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.

ಈ ಹಾರುವ ಕಾರು ಖರೀದಿಸಲು ಸಮರ್ಪಕ ಪೈಲಟ್ ಪರವಾನಿಗೆಯೂ ನಿಮಲ್ಲಿರಬೇಕು. ವೈಮಾನಿಕ ಸಚಿವಾಲಯ ಮಾತ್ರವಲ್ಲದೇ ದೇಶದ ಭದ್ರತಾ ವಿಭಾಗದಿಂದಲೂ ಅನುಮತಿ ಪಡೆಯಬೇಕಿದೆ.

More from DriveSpark

Article Published On: Thursday, August 30, 2012, 15:28 [IST]
English summary
Flying car coming soon. Terrafugia very serious about producing flying car and selling it. Company expected to deliver Terrafugia Transition flying car to first 10 customers by next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+