ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

ಕಳೆದೊಂದು ಶತಮಾನದಲ್ಲಿ ವಾಹನ ಜಗತ್ತು ಹಲವಾರು ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಭವಿಷ್ಯದಲ್ಲಿ ಮತ್ತಷ್ಟು ಹೊಸ ಮಾದರಿಯ ವಾಹನಗಳು ಕಾರ್ಯಾಚರಣೆ ನಡೆಸುವ ಸಿದ್ದತೆಯಲ್ಲಿದ್ದು, ಫೈಯಿಂಗ್ ಕಾರುಗಳು ಹೆಚ್ಚು ಕುತೂಹಲ ಮೂಡಿಸಿವೆ.

ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

'ಫೈಯಿಂಗ್ ಕಾರು' ಅಥವಾ ಹಾರುವ ಕಾರಿಗಳು ವಾಣಿಜ್ಯ ಹಾಗೂ ವೈಯಕ್ತಿಕ ಅಗತ್ಯಗಳಿಗಾಗಿ ಬಳಕೆ ಮಾಡಬಹುದಾಗಿದ್ದು, ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಫೈಯಿಂಗ್ ಕಾರುಗಳಿಗೆ ಇದೀಗ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಯುರೋಪ್ ಒಕ್ಕೂಟವು ಜಗತ್ತಿನಲ್ಲಿ ಮೊದಲ ಬಾರಿಗೆ ಹಾರುವ ಕಾರುಗಳ ವಾಣಿಜ್ಯ ಬಳಕೆಗೆ ಅನುಮತಿ ನೀಡಲಾಗಿದ್ದು, ಪಿಎಲ್-ವಿ ಕಂಪನಿಯು ತನ್ನ ಮೊದಲ ಲಿಬರ್ಟಿ ಫೈಯಿಂಗ್ ಕಾರು ಮಾದರಿಯನ್ನು ರಸ್ತೆಗಿಳಿಸಿದೆ.

ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

ಯುರೋಪಿಯನ್ ಏವಿಯೆಷನ್ ಸೇಫ್ಟಿ ಎಜೆನ್ಸಿಯಿಂದ ಪಿಎಲ್-ವಿ ಕಂಪನಿಯು ವಾಣಿಜ್ಯ ಬಳಕೆಗಾಗಿ ಫೈಯಿಂಗ್ ಕಾರ್ ಅನುಮತಿ ಪಡೆದುಕೊಂಡಿದ್ದು, ಹೊಸ ಕಾರುಗಳನ್ನು ಗ್ರಾಹಕರಿಗೆ ವಿತರಣೆ ಮಾಡುವುದಕ್ಕೂ ಮತ್ತೊಂದು ಹಂತದ ಪರೀಕ್ಷೆ ಎದುರಿಸಬೇಕಿದೆ.

ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

ಗ್ರಾಹಕರಿಗೆ ಹಾರುವ ಕಾರುಗಳ ವಿತರಣೆ ಮಾಡುವುದಕ್ಕೂ ಮುನ್ನ 1200 ಪರೀಕ್ಷಾ ವರದಿಗಳನ್ನು ಯುರೋಪಿಯನ್ ಏವಿಯೆಷನ್ ಸೇಫ್ಟಿ ಎಜೆನ್ಸಿಗೆ ಸಲ್ಲಿಕೆ ಮಾಡಬೇಕಿರುವ ಪಿಎಲ್-ವಿ ಕಂಪನಿಯು ತನ್ನ ಬಹುನೀರಿಕ್ಷಿತ ಲಿಬರ್ಟಿ ಕಾರನ್ನು ಒಟ್ಟು 150 ಗಂಟೆಗಳ ಕಾಲ ಪರೀಕ್ಷಾರ್ಥವಾಗಿ ಹಾರಾಟ ನಡೆಸಲಿದೆ.

ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

ಪಿಎಲ್-ವಿ ಕಂಪನಿಯು ತನ್ನ ಅಧಿಕೃತ ಪರೀಕ್ಷಾರ್ಥ ಹಾರಾಟದಲ್ಲಿ ಲಿಬರ್ಟಿ ಕಾರಿನ ಹಾರಾಟವನ್ನು ಪೂರ್ಣ ಪ್ರಮಾಣದಲ್ಲಿ ಯಶಸ್ವಿಗೊಳಿಸಿದ್ದು, ಇದೀಗ ಯುರೋಪಿಯನ್ ಏವಿಯೆಷನ್ ಸೇಫ್ಟಿ ಎಜೆನ್ಸಿ ಕೂಡಾ ಪ್ರಯಾಣಿಕರ ವ್ಯಯಕ್ತಿಕ ಬಳಕೆಗೆ ಯೋಗ್ಯವೇ ಎಂಬುವುದನ್ನು ಪರೀಕ್ಷಾರ್ಥ ಹಾರಾಟದ ನಂತರವಷ್ಟೇ ಕಾರು ವಿತರಣೆಗೆ ಅನುಮತಿ ನೀಡಲಿದೆ.

ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

ಇದರಿಂದ ಸದ್ಯಕ್ಕೆ ಪಿಎಲ್-ವಿ ಕಂಪನಿಯ ಸಿಬ್ಬಂದಿ ಮಾತ್ರವೇ ಸಾರ್ವಜನಿಕ ಬಳಕೆಯ ರಸ್ತೆಗಳಲ್ಲೂ ಹಾರುವ ಕಾರುಗಳನ್ನು ಚಾಲನೆ ಮಾಡಬಹುದಾಗಿದ್ದು, ಪ್ರಯಾಣಿಕರಿಗೆ ಹೊಸ ಕಾರು 2022ರ ಆರಂಭದಲ್ಲಿ ವಿತರಣೆಯಾಗುವ ಸಾಧ್ಯತೆಗಳಿವೆ.

ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

ಡಚ್ ಮೂಲದ ಪಿಎಲ್-ವಿ ಲಿಬರ್ಟಿ ಕಂಪನಿಯ ಹಲವು ಪ್ರಯತ್ನಗಳ ನಂತರ ಲಿಬರ್ಟಿ ಫೈಯಿಂಗ್ ಕಾರಿನ ಚಾಲನೆಯಲ್ಲಿ ಯಶಸ್ವಿಯಾಗಿದ್ದು, ಈಗಾಗಲೇ ನೀರಿಕ್ಷೆಗೂ ಮೀರಿ ಗ್ರಾಹಕರ ಬೇಡಿಕೆಗಳನ್ನು ಪಡೆದುಕೊಂಡಿದೆ.

ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

ಹೊಸ ಹಾರುವ ಕಾರುಗಳ ವಿತರಣೆಗೂ ಮುನ್ನ ಕಾರು ಖರೀದಿ ಬಯಸುವ ಗ್ರಾಹಕರು ಕಡ್ಡಾಯವಾಗಿ ಚಾಲನಾ ಪರವಾಗಿ ಪಡೆಯಬೇಕಿದ್ದು, ಹಾರುವ ಕಾರು ಖರೀದಿದಾರರಿಗೆ ಪಿಎಲ್-ವಿ ಕಂಪನಿಯೇ ವಿವಿಧ ಹಂತದ ತರಬೇತಿ ನೀಡದ ನಂತರ ಕಾರು ವಿತರಿಸಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

ಇನ್ನು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಸಿದ್ದಗೊಂಡಿರುವ ಲಿಬರ್ಟಿ ಫೈಯಿಂಗ್ ಕಾರು ನೆಲದ ಜೊತೆಗೆ ಆಕಾಶದಲ್ಲೂ ಯಶಸ್ವಿಯಾಗಿ ಚಾಲನಾ ವೈಶಿಷ್ಟ್ಯತೆ ಹೊಂದಿದ್ದು, ಅತಿ ಕಡಿಮೆ ಅಂತರದಲ್ಲಿ ಟೆಕ್ ಆಫ್ ಮತ್ತು ಲ್ಯಾಂಡಿಂಗ್‌ ಗುಣಹೊಂದಿದೆ.

ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

ಕಾರ್ಬನ್ ಮತ್ತು ಟೈಟಾನಿಯಂ ಅಭಿವೃದ್ದಿಗೊಂಡಿರುವ ಲಿಬರ್ಟಿ ಫೈಯಿಂಗ್ ಕಾರು ಮಾದರಿಯು 680 ಕೆಜಿ ತೂಕವನ್ನು ಪಡೆದುಕೊಂಡಿದ್ದು, 100-ಬಿಎಚ್‌ಪಿ ಉತ್ಪಾದನೆಯೊಂದಿಗೆ 165 ಮೀಟರ್ ಅಂತರದಲ್ಲಿ ಟೆಕ್ ಆಫ್ ಮತ್ತು 30 ಮೀಟರ್ ಅಂತರದಲ್ಲಿ ಲ್ಯಾಂಡಿಂಗ್‌ ಆಗಲಿದೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

ಈ ಮೂಲಕ ಪ್ರತಿ ಗಂಟೆಗೆ ಗರಿಷ್ಠ 180ಕಿಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದಿರುವ ಪಿಎಲ್-ವಿ ಲಿಬರ್ಟಿ ಹಾರುವ ಕಾರುಗಳು ರಸ್ತೆಯಲ್ಲೂ ಸಾರಾಗವಾಗಿ ಸಂಚರಿಸಲಿದ್ದು, ರಸ್ತೆ ಸಂಚರಿಸುವಾಗ ಕಾರಿನ ರೆಕ್ಕೆಗಳು ಮಡಿಚಿಕೊಳ್ಳುವ ವ್ಯವಸ್ಥೆಯಿದೆ.

ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

ಮೂರು ಚಕ್ರಗಳೊಂದಿಗೆ ವೇಗವಾಗಿ ಸಂಚರಿಸುವ ಲಿಬರ್ಟಿ ಹಾರುವ ಕಾರು ಅರಾಮದಾಯಕ ಪ್ರಯಾಣವನ್ನು ಒದಗಿಸಲಿದ್ದು, ಕಾರಿನ ಒಳಭಾಗದಲ್ಲಿ ಹಲವಾರು ಸುರಕ್ಷಾ ಫೀಚರ್ಸ್‌ಗಳೊಂದಿಗೆ ಐಷಾರಾಮಿ ಸೌಲಭ್ಯಗಳ ಜೋಡಣೆ ಮಾಡಲಿದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ಹಾರುವ ಕಾರು-ಕಂಡ ಕನಸಿಗೆ ಕೊನೆಗೂ ಸಿಕ್ತು ಅಧಿತೃತ ಚಾಲನೆ

ಈ ಮೂಲಕ ಸೂಪರ್ ಕಾರು ಮಾದರಿಗಳ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿರುವ ಪಿಎಲ್-ವಿ ಲಿಬರ್ಟಿ ಹಾರುವ ಕಾರುಗಳು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ರೂ. 2.50 ಕೋಟಿಯಿಂದ ರೂ. 4 ಕೋಟಿ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದ್ದು, 2022ರ ವೇಳೆಗೆ ಹೊಸ ಸಂಚಾರ ವ್ಯವಸ್ಥೆಯು ಮಹತ್ವದ ಬದಲಾವಣೆಗೆ ಸಾಕ್ಷಿಯಾಗಲಿದೆ.

Most Read Articles

Kannada
English summary
PAL-V Liberty Is Now The World's First Road-Legal Commercial Flying Car. Read in Kannada.
Story first published: Saturday, October 31, 2020, 18:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X