ಬಿಡುಗಡೆಗೂ ಮುನ್ನವೇ ಹಾರುವ ಕಾರಿನ ಬೆಲೆ ಪಟ್ಟಿ ಬಿಡುಗಡೆ ಮಾಡಿದ ಪಿಎಲ್-ವಿ ಲಿಬರ್ಟಿ

ಹಾರುವ ಬೈಕಿನ ಬಗ್ಗೆ ನೀವು ಈಗಾಗಲೇ ಕೇಳಿದ್ದಿರಿ. ಹಾಗೆಯೇ ಹಾರುವ ಕಾರುಗಳ ಬಗ್ಗೆಯೂ ಹಲವೆಡೆ ಅರಕೆಗಳು ಚುರುಕುಗೊಳ್ಳುತ್ತಿವೆ. ಇದಕ್ಕೆ ಪೂರಕ್ಕೆ ಎಂಬಂತೆ ಜಿನೆವಾ ಮೋಟಾರ್ ಶೋನಲ್ಲಿ ಅನಾವರಣಗೊಂಡಿದ್ದ ಪಿಎಲ್-ವಿ ಲಿಬರ್ಟಿ ಸಂಸ್ಥೆಯ ಹೊಸ ಮಾದರಿಯ ಹಾರುವ ಕಾರು ಗೈರೊಕಾಪ್ಟಾರ್ ಇದೀಗ ಬಿಡುಗಡೆಗಾಗಿ ಸಿದ್ದವಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಹಾರುವ ಕಾರುಗಳ ಕನಸಿಗೆ ರೆಕ್ಕೆ ಬಂದಾಯ್ತು- ಈಗ ಬುಕ್ಕಿಂಗ್ ಮಾಡೋದೊಂದೆ ಬಾಕಿ..!

ಆಟೋ ಉದ್ಯಮದಲ್ಲಿ ದಿನದಿಂದ ದಿನಕ್ಕೆ ಹೊಸ ಸಂಶೋಧನೆಗಳು ಮತ್ತು ಆವಿಷ್ಕಾರಗಳು ನಡೆಯುತ್ತಲೇ ಇದ್ದು, ಇದೀಗ ಹಾರುವ ಕಾರುಗಳ ಉತ್ಪಾದನೆ ಸಾಧ್ಯತೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಸಿ ಬಿಸಿ ಚರ್ಚೆಗಳ ಬೆನ್ನಲ್ಲೇ ಡಚ್ ಮೂಲದ ಪಿಎಲ್-ವಿ ಲಿಬರ್ಟಿ ಸಂಸ್ಥೆಯು ಹೊಸ ಪ್ರಯತ್ನಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯಾಗುವ ತವಕದಲ್ಲಿದೆ.

ಹಾರುವ ಕಾರುಗಳ ಕನಸಿಗೆ ರೆಕ್ಕೆ ಬಂದಾಯ್ತು- ಈಗ ಬುಕ್ಕಿಂಗ್ ಮಾಡೋದೊಂದೆ ಬಾಕಿ..!

2020ರ ಆರಂಭದಲ್ಲಿ ಹಾರುವ ಕಾರುಗಳ ಉತ್ಪಾದನೆಯನ್ನು ಶುರು ಮಾಡುವ ಬಗ್ಗೆ ಸುಳಿವು ನೀಡಿದ್ದ ಪಿಎಲ್-ವಿ ಲಿಬರ್ಟಿ ಸಂಸ್ಥೆಯು, ಹೆಲಿಕಾಪ್ಟರ್‌ಗಿಂತ ಕಡಿಮೆ ದರ್ಜೆಯ ಮತ್ತು ಟ್ರೈಸೈಕಲ್‌ಗಳಿಂತ ಉನ್ನತ ಸೌಲಭ್ಯಗಳನ್ನು ಹೊಂದಿರುವ ಗೈರೊಕಾಪ್ಟಾರ್ ಕಾರುನ್ನು ನಿರ್ಮಾಣ ಮಾಡಿದೆ.

ಹಾರುವ ಕಾರುಗಳ ಕನಸಿಗೆ ರೆಕ್ಕೆ ಬಂದಾಯ್ತು- ಈಗ ಬುಕ್ಕಿಂಗ್ ಮಾಡೋದೊಂದೆ ಬಾಕಿ..!

ಇದರೊಂದಿಗೆ ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಟು ಸೀಟರ್ ಸೌಲಭ್ಯವನ್ನು ಹೊಂದಿರುವ ಹಾರುವ ಕಾರಗಳು ಬಿಡುಗಡೆಗೂ ಮುನ್ನವೇ ಯುರೋಪ್ ಮತ್ತು ಅಮೆರಿಕನ್ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುತ್ತಿವೆ.

ಹಾರುವ ಕಾರುಗಳ ಕನಸಿಗೆ ರೆಕ್ಕೆ ಬಂದಾಯ್ತು- ಈಗ ಬುಕ್ಕಿಂಗ್ ಮಾಡೋದೊಂದೆ ಬಾಕಿ..!

ಇದಕ್ಕೆ ಕಾರಣ ಅಮೆರಿಕನ್ ಮತ್ತು ಯುರೋಪಿನ್ ಮಾರುಕಟ್ಟೆಯಲ್ಲಿ ಈಗಾಗಲೇ ಹಾರುವ ಕಾರುಗಳಿಗೆ ಮಾನ್ಯತೆ ಸಿಕಿದ್ದು, 2020ರ ವೇಳೆಗೆ ಹೊಸ ಮಾದರಿಯ ಸಾರಿಗೆ ವ್ಯವಸ್ಥೆಯು ಜಗತ್ತಿಗೆ ತೆರೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಾರುವ ಕಾರುಗಳ ಕನಸಿಗೆ ರೆಕ್ಕೆ ಬಂದಾಯ್ತು- ಈಗ ಬುಕ್ಕಿಂಗ್ ಮಾಡೋದೊಂದೆ ಬಾಕಿ..!

ಇನ್ನು ಕಾರ್ಬನ್ ಮತ್ತು ಟೈಟಾನಿಯಂನಿಂದ ಗೈರೊಕಾಪ್ಟಾರ್ ಕಾರುಗಳ ಬಾಡಿ ಕಿಟ್ ಅಭಿವೃದ್ಧಿ ಮಾಡಲಾಗುತ್ತಿದ್ದು, 680 ಕೆಜಿ ತೂಕವನ್ನು ಪಡೆದುಕೊಂಡಿವೆ. ಹೀಗಾಗಿ ಕಡಿಮೆ ಅಂತರದಲ್ಲಿ ಟೆಕ್ ಆಫ್ ಮತ್ತು ಲ್ಯಾಂಡಿಂಗ್‌ಗೆ ಅನಕೂಲಕರರವಾಗಿವೆ ಎನ್ನಬಹುದು.

ಹಾರುವ ಕಾರುಗಳ ಕನಸಿಗೆ ರೆಕ್ಕೆ ಬಂದಾಯ್ತು- ಈಗ ಬುಕ್ಕಿಂಗ್ ಮಾಡೋದೊಂದೆ ಬಾಕಿ..!

ಮೂಲಗಳ ಪ್ರಕಾರ, ಪಿಎಲ್-ವಿ ಲಿಬರ್ಟಿಯ ಸಂಸ್ಥೆಯ ಕಾರುಗಳು ಟೆಕ್ ಆಫ್ ಆಗಲು 165 ಮೀಟರ್ ಮತ್ತು ಲ್ಯಾಂಡಿಂಗ್‌ಗೆ 30 ಮೀಟರ್ ‌ಬೇಕಾಗಲಿದ್ದು, 100 ಬಿಎಚ್‌ಪಿ ಉತ್ಪಾದನಾ ಎಂಜಿನ್ ಬಳಕೆ ಮಾಡಲಾಗಿದೆ.

ಹಾರುವ ಕಾರುಗಳ ಕನಸಿಗೆ ರೆಕ್ಕೆ ಬಂದಾಯ್ತು- ಈಗ ಬುಕ್ಕಿಂಗ್ ಮಾಡೋದೊಂದೆ ಬಾಕಿ..!

ಈ ಮೂಲಕ ಪ್ರತಿಗಂಟೆಗೆ 180ಕಿಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದಿರುವ ಪಿಎಲ್-ವಿ ಲಿಬರ್ಟಿ ಹಾರುವ ಕಾರು ಕೇವಲ ಆಕಾಶದಲ್ಲಿದಷ್ಟೇ ಅಲ್ಲದೇ ಸಾಮಾನ್ಯ ಕಾರುಗಳಂತೆ ರಸ್ತೆಯಲ್ಲೂ ಸುಗಮವಾಗಿ ಸಂಚರಿಸಬಲ್ಲವು.

ಹಾರುವ ಕಾರುಗಳ ಕನಸಿಗೆ ರೆಕ್ಕೆ ಬಂದಾಯ್ತು- ಈಗ ಬುಕ್ಕಿಂಗ್ ಮಾಡೋದೊಂದೆ ಬಾಕಿ..!

ರಸ್ತೆ ಸಂಚರಿಸುವಾಗ ಕಾರಿನ ರೆಕ್ಕೆಗಳು ಮಡಿಚಿಕೊಳ್ಳುವ ವ್ಯವಸ್ಥೆಯನ್ನು ಇದರಲ್ಲಿ ಇರಿಸಲಾಗಿದ್ದು, ಮೂರು ಚಕ್ರಗಳೊಂದಿಗೆ ವೇಗವಾಗಿ ಸಂಚರಿಸುವುದಲ್ಲದೇ ಅರಾಮದಾಯಕ ಪ್ರಯಾಣವನ್ನು ಒದಗಿಸಲಿವೆ ಎನ್ನುತ್ತೆ ಪಿಎಲ್-ವಿ ಲಿಬರ್ಟಿ ಸಂಸ್ಥೆ.

ಹಾರುವ ಕಾರುಗಳ ಕನಸಿಗೆ ರೆಕ್ಕೆ ಬಂದಾಯ್ತು- ಈಗ ಬುಕ್ಕಿಂಗ್ ಮಾಡೋದೊಂದೆ ಬಾಕಿ..!

ಹೀಗಾಗಿ ಕೆಲವೇ ನಿಮಿಷಗಳಲ್ಲಿ ನಿಮಗೆ ಬೇಕಾದ ಸ್ಥಳಗಳನ್ನು ತಲುಪಲು ಸಹಾಯಕವಾಗುವ ಈ ಕಾರುಗಳ ಬೆಲೆ ಕೊಂಚ ದುಬಾರಿಯಾಗಿದ್ದು, ಎರಡು ಮಾದರಿಯಲ್ಲಿ ಪಿಎಲ್-ವಿ ಲಿಬರ್ಟಿ ಹಾರುವ ಕಾರುಗಳನ್ನು ನಿರ್ಮಾಣ ಮಾಡಲಾಗಿದೆ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ಹಾರುವ ಕಾರುಗಳ ಕನಸಿಗೆ ರೆಕ್ಕೆ ಬಂದಾಯ್ತು- ಈಗ ಬುಕ್ಕಿಂಗ್ ಮಾಡೋದೊಂದೆ ಬಾಕಿ..!

ಮೈಲೇಜ್

ಡ್ಯುಯಲ್ ಎಂಜಿನ್ ಹೊಂದಿರುವ ಪಿಎಲ್-ವಿ ಲಿಬರ್ಟಿಯ ಗೈರೊಕಾಪ್ಟಾರ್ ಹಾರುವ ಕಾರುಗಳು ಪ್ರತಿ ಚಾರ್ಜ್‌ಗೆ 482 ಕಿ.ಮಿ(ಆಕಾಶದಲ್ಲಿ) ಮತ್ತು 1,287 ಕಿ.ಮಿ ರಸ್ತೆಯ ಮೇಲೆ ಚಲಿಸುವಷ್ಟು ಸಾಮರ್ಥ್ಯವನ್ನು ಹೊಂದಿವೆ.

ಹಾರುವ ಕಾರುಗಳ ಕನಸಿಗೆ ರೆಕ್ಕೆ ಬಂದಾಯ್ತು- ಈಗ ಬುಕ್ಕಿಂಗ್ ಮಾಡೋದೊಂದೆ ಬಾಕಿ..!

ಹಾರುವ ಕಾರುಗಳ ಬೆಲೆ

ಭಾರತೀಯ ಮೌಲ್ಯದಲ್ಲಿ ಹೇಳುವುದಾರೇ ಆರಂಭಿಕ ಹೊಸ ಕಾರಿನ ಬೆಲೆಯನ್ನು ರೂ. 2.89 ಕೋಟಿ ಮಾಡಿದ್ದು, ಕಾರು ಖರೀದಿಗೆ ಮುಂಗಡ ಪಾವತಿಸಿದ 150 ಗಂಟೆಗಳ ಒಳಗಾಗಿ ಹೊಸ ಕಾರು ಒದಗಿಸುವ ಬಗ್ಗೆ ಪಿಎಲ್-ವಿ ಲಿಬರ್ಟಿಯು ಭರವಸೆ ನೀಡಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಹಾರುವ ಕಾರುಗಳ ಕನಸಿಗೆ ರೆಕ್ಕೆ ಬಂದಾಯ್ತು- ಈಗ ಬುಕ್ಕಿಂಗ್ ಮಾಡೋದೊಂದೆ ಬಾಕಿ..!

ಬುಕ್ಕಿಂಗ್ ಆರಂಭ

ಪಿಎಲ್-ವಿ ಲಿಬರ್ಟಿ ಸಂಸ್ಥೆಯು ತನ್ನ ಬಹುನೀರಿಕ್ಷಿತ ಗೈರೊಕಾಪ್ಟಾರ್ ಹಾರುವ ಕಾರುಗಳನ್ನು 2019ರ ಕೊನೆಯಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಆಸಕ್ತ ಗ್ರಾಹಕರಿಂದ ಈಗಿನಿಂದಲೇ ಫ್ರೀ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಆಟೋ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.

More from DriveSpark

Article Published On: Monday, December 17, 2018, 19:06 [IST]
English summary
Drive in Air! Pal-V flying car pre-booking starts; Check price, features, launch date. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+