ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

'ಇನ್‌ ಮೈ ಫೀಲಿಂಗ್ಸ್‌' ಅಲ್ಬಮ್‌ನಲ್ಲಿರುವ ಕಿಕಿ, ಡು ಯೂ ಲವ್‌ ಮಿ ಸಾಂಗ್ ಮೂಲಕ ಇಡಿ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಖ್ಯಾತ ರ‍್ಯಾಪ್ ಸಿಂಗರ್ ಡ್ರೇಕ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ರೂ.1,300 ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಒಂದನ್ನು ಖರೀದಿ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ರೂ. 1300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಸಾಮಾನ್ಯವಾಗಿ ದೊಡ್ಡ ದೊಡ್ಡ ಉದ್ಯಮಿಗಳು ಖಾಸಗಿ ಜೆಟ್ ಹೊಂದಿರುವುದನ್ನು ನೋಡಿದ್ದೇವೆ. ಆದ್ರೆ ಉದ್ಯಮಿಗಳಿಗಿಂತ ನಾವು ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತುಪಡಿಸಿರುವ ರ‍್ಯಾಪ್ ಸಿಂಗರ್ ಡ್ರೇಕ್ ಅವರು ಉದ್ಯಮಿಗಳಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ವಿನೂತನ ಮಾದರಿಯ ಐಷಾರಾಮಿ ಖಾಸಗಿ ಜೆಟ್ ಅನ್ನು ಖರೀದಿಸಿದ್ದಾರೆ.

ರೂ. 1300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಕೆನಡಾ ಪ್ರಜೆಯಾಗಿರುವ 32 ವರ್ಷದ ಡ್ರೇಕ್ ಚಿತ್ರ ಸಾಹಿತ್ಯ, ರ‍್ಯಾಂಪ್ ಮತ್ತು ಚಿತ್ರ ನಿರ್ಮಾಣದಲ್ಲಿ ಭಾರೀ ಪ್ರಮಾಣದ ಆದಾಯ ಗಳಿಕೆ ಮಾಡುತ್ತಿದ್ದು, ತಮ್ಮ ಬಾಲ್ಯದ ಆಸೆಯೆಂತೆ ಖಾಸಗಿ ಜೆಟ್ ಅನ್ನು ಖರೀದಿ ಮಾಡಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.

ರೂ. 1300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಈಗಾಗಲೇ ಹಲವಾರು ಐಷಾರಾಮಿ ಕಾರುಗಳು ಮತ್ತು ಬೈಕ್‌ಗಳ ಸಂಗ್ರಹವನ್ನು ಹೊಂದಿರುವ ಡ್ರೇಕ್ ಈ ಬಾರಿ ತಮ್ಮ ಕನಸಿನ ಜೆಟ್ ಅನ್ನು ಖರೀದಿ ಮಾಡಿದ್ದು, ಹಲವಾರು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಜೆಟ್ ಇತರೆ ಜೆಟ್‌ಗಳಿಂತಲೂ ಸಾಕಷ್ಟು ವಿಶೇಷ ಎನ್ನಿಸಲಿದೆ.

ರೂ. 1300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಮತ್ತೊಂದು ವಿಶೇಷ ಅಂದ್ರೆ, ಬೋಯಿಂಗ್ 767-300ಎಫ್ ಜೆಟ್ ಮಾದರಿಗೆ "ಏರ್ ಡ್ರೇಕ್" ಎಂದು ಮರು ನಾಮಕರಣ ಮಾಡಿ ಅಭಿವೃದ್ಧಿ ಮಾಡಲಾಗಿದ್ದು, ಮೂಲ ಬೆಲೆಗಿಂತ ಎರಡುಪಟ್ಟು ಹೆಚ್ಚು ಖರ್ಚು ಮಾಡಿ ಈ ಜೆಟ್ ಅನ್ನು ಮಾಡಿಫೈ ಮಾಡಲಾಗುತ್ತಿದೆ. ಸದ್ಯ ಏರ್ ಡ್ರೇಕ್ ಇನ್ನು ಕೂಡಾ ನಿರ್ಮಾಣದ ಹಂತದಲ್ಲಿದ್ದು, ಶೇ.90ರಷ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆ ಡ್ರೇಕ್ ಅವರು ತಮ್ಮ ಖಾಸಗಿ ಜೆಟ್ ಕುರಿತು ತಮ್ಮ ಅಭಿಮಾನಿಗಳಿಗಾಗಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ರೂ. 1300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ರೂ.1,300 ಕೋಟಿ ಖರ್ಚು..!

ಹೌದು, ರ‍್ಯಾಪ್ ಸಿಂಗರ್ ಡ್ರೇಕ್ ಖರೀದಿ ಮಾಡಿರುವ ಖಾಸಗಿ ಜೆಟ್ ಹಲವಾರು ಐಷಾರಾಮಿ ವೈಶಿಷ್ಟ್ಯತೆಗಳೊಂದಿಗೆ ಅತ್ಯಾಧುನಿಕ ಸೌಲಭ್ಯ ಹೊಂದಿದ್ದು, 185 ಮಿನಿಯನ್ ಅಮೆರಿಕನ್ ಡಾಲರ್(ಭಾರತೀಯ ಬೆಲೆಗಳಲ್ಲಿ ರೂ.1,300 ಕೋಟಿ) ಬೆಲೆ ಪಡೆದುಕೊಂಡಿದೆ.

ರೂ. 1300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಮೇಲೆ ಹೇಳಿದ ಹಾಗೆ, ಈ ಜೆಟ್ ಸಂಪೂರ್ಣವಾಗಿ ಮಾಡಿಫೈ ಮಾಡಲಾಗಿದ್ದು, ಮೂಲ ಬೆಲೆಗಿಂತ ಎರಡು ಪಟ್ಟು ಹೆಚ್ಚು ವೆಚ್ಚ ಮಾಡಿ ಜೆಟ್ ಒಳಾಂಗಣವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗಿದೆ. 30 ಆಸನವುಳ್ಳ ಈ ಖಾಸಗಿ ಜೆಟ್‌ನಲ್ಲಿ ಐಷಾರಾಮಿ ಸೌಲಭ್ಯಗಳು ಸ್ವರ್ಗಕ್ಕೆ ಕಿಚ್ಚುಹಚ್ಚುವಂತಿವೆ.

ರೂ. 1300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ತಮ್ಮ ಖಾಸಗಿ ಜೆಟ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲು ಕೆನೆಡಾ ಕಾರ್ಗೋ ಜೆಟ್ ಸಂಸ್ಥೆಯೊಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಒಪ್ಪಂದದ ಭಾಗವಾಗಿ ಕೆನಡಾ ಕಾರ್ಗೋ ಜೆಟ್ ಕೂಡಾ ಏರ್ ಡ್ರೇಕ್ ನಿರ್ಮಾಣಕ್ಕಾಗಿ ಹೂಡಿಕೆ ಮಾಡಿದೆ.

MOST READ: ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ರೂ. 1300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಹೀಗಾಗಿ ವಿಶ್ವದಲ್ಲಿ ಕೆಲವೇ ಕೆಲವು ಖಾಸಗಿ ಐಷಾರಾಮಿ ಜೆಟ್‌ಗಳ ಪೈಕಿ ಇದು ಕೂಡಾ ಒಂದಾಗಿದ್ದು, ಏರ್ ಡ್ರೇಕ್ ನಿರ್ಮಾಣಕ್ಕಾಗಿ ಶ್ರಮವಹಿಸಿರುವ ನೂರಾರು ತಂತ್ರಜ್ಞರು ಮತ್ತು ಕಲಾವಿದರು ಜೆಟ್ ಒಳಭಾಗಲ್ಲಿ ಒಂದು ಅದ್ಭುತ ಲೋಕವನ್ನೇ ಸೃಷ್ಠಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೆನಡಾ ಕಾರ್ಗೋ ಜೆಟ್ ಸಂಸ್ಥೆಯ ಸಿಇಒ ಅಜಯ್ ವಿರ್ಮಾನಿ ಅವರು, ಡ್ರೇಕ್ ಜೊತೆಗೂಡಿ ಏರ್ ಡ್ರೇಕ್ ನಿರ್ಮಾಣ ಮಾಡುತ್ತಿರುವುದಕ್ಕೆ ಸಾಕಷ್ಟು ಖುಷಿಯಾಗುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿ ಸ್ವಂತ ಶ್ರಮದೊಂದಿಗೆ ಯಶಸ್ಸಿನ ಉತ್ತುಂಗ ತಲುಪಿರುವ ಡ್ರೇಕ್ ಮತ್ತು ಕಾರ್ಗೋ ಜೆಟ್ ಸಂಸ್ಥೆ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.

MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ ಇವರೇ..!

ರೂ. 1300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಇನ್ನು ನಿರ್ಮಾಣ ಹಂತದಲ್ಲಿರುವ ಏರ್ ಡ್ರೇಕ್ ಜೆಟ್ ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ತನ್ನ ಹಾರಾಟವನ್ನು ಆರಂಭಿಸಲಿದ್ದು, ಕೆಲವೇ ವರ್ಷಗಳಲ್ಲಿ ತಮ್ಮ ಸ್ವಂತ ಬಲದಿಂದಲೇ ಯಶಸ್ವಿ ಹಾದಿಯನ್ನು ತಲುಪಿರುವ ಡ್ರೇಕ್ ಅವರ ಈ ಸಾಧನೆಗೆ ನಿಜಕ್ಕೂ ಸುಲಭವಲ್ಲ.

Most Read Articles

Kannada
English summary
Rapper Drake Unveils His Private Boeing. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X