ದುಬೈ ಮರುಭೂಮಿಯಲ್ಲಿ ಸನ್ನಿ ಲಿಯೋನ್ 'ಡೆಸಾರ್ಟ್ ಸಫಾರಿ' ಮೋಜು-ಮಸ್ತಿ
ದುಬೈಗೆ ಭೇಟಿಕೊಡುವ ಸೆಲೆಬ್ರಿಟಿಗಳು 'ಡೆಸಾರ್ಟ್ ಸಫಾರಿ' ಮೋಜು ಸವಾರಿಯಲ್ಲಿ ಭಾಗವಹಿಸದೇ ಹಿಂತಿರುಗುವುದಿಲ್ಲ. ನಮ್ಮ ಬಾಲಿವುಡ್ ತಾರೆಯರು ಇದರಿಂದ ಹೊರತಾಗಿಲ್ಲ. ಅತ್ತ ನೀಲಿ ಚಿತ್ರಗಳಿಂದಲೇ ಫೇಮಸ್ ಆಗಿರುವ ಹಾಟ್ ನಟಿ ಸನ್ನಿ ಲಿಯೋನ್ ಸಹ ಇತ್ತೀಚೆಗಷ್ಟೇ ದುಬೈ ಡೆಸಾರ್ಟ್ ಸಫಾರಿಯಲ್ಲಿ ಭಾಗವಹಿಸಿದ್ದಾರೆ.
ಇಂಡೋ-ಕೆನಡಾ ಮೂಲದ ನಟಿಯಾಗಿರುವ ಸನ್ನಿ ಲಿಯೋನ್ ದುಬೈನಲ್ಲಿ ನಡೆದ ಫ್ಯಾಶನ್ ವೀಕ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪತಿ ಡ್ಯಾನಿಯಲ್ ವೆಬರ್ ಹಾಗೂ ಸ್ನೇಹಿತರ ಜೊತೆಗೆ ವಿಮಾನವೇರಿದ್ದರು.

ಸ್ವತ: ಸನ್ನಿ ಲಿಯೋನ್ ಅವರೇ ಡೆಸಾರ್ಟ್ ಸಫಾರಿ ಚಿತ್ರಗಳನ್ನು ಟ್ವಿಟರ್ ನಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

ದುಬೈನಲ್ಲಿ ಮೋಜು ಮಸ್ತಿಯಲ್ಲಿ ಭಾಗಿಯಾಗಿರುವ ಸನ್ನಿ, ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಡೆಸಾರ್ಟ್ ಸಫಾರಿ ಯಾತ್ರೆಯನ್ನು ಹಮ್ಮಿಕೊಂಡಿದ್ದರು.

ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ನಿರ್ಮಿಸಿರುವ ಲ್ಯಾಂಡ್ ಕ್ರೂಸರ್, ಆಫ್-ರೋಡ್ ಚಾಲನೆಗೂ ಹೇಳಿ ಮಾಡಿಸಿದ ಗಾಡಿಯಾಗಿದೆ.

ಫೋರ್ ವೀಲ್ ಡ್ರೈವ್ ಸಿಸ್ಟಂ, ಮಲ್ಟಿ ಟರೈನ್ ಆ್ಯಂಟಿ ಲಾಂಕಿಂಗ್ ಬ್ರೇಕಿಂಗ್ ಸಿಸ್ಟಂ, ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಮತ್ತು ಶಕ್ತಿಶಾಲಿ ವಿ8 ಟರ್ಬೊ ಡೀಸೆಲ್ ಎಂಜಿನ್ ಇತ್ಯಾದಿ ವೈಶಿಷ್ಟ್ಯಗಳನ್ನು ಲ್ಯಾಂಡ್ ಕ್ರೂಸರ್ ಹೊಂದಿದೆ.

ದುಬೈ ಮರಳುಗಾಡಿನಲ್ಲಿ ಡೆಸಾರ್ಟ್ ಸಫಾರಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇದಕ್ಕಾಗಿ ವಾಹನ ಸಂಸ್ಥೆಗಳು ವಿಶೇಷ ಆಫ್ ರೋಡ್ ಸಾಮರ್ಥ್ಯದ ವಾಹನಗಳನ್ನು ನಿರ್ಮಿಸುತ್ತದೆ.

ಭಾರತದ ಜೊತೆಗೆ ದುಬೈನಲ್ಲೂ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿರುವ ಸನ್ನಿ, ಡೆಸಾರ್ಟ್ ಸಫಾರಿಯನ್ನು ಮರೆಯಲಾಗದ ಅನುಭವ ಎಂದಿದ್ದಾರೆ.

ವಿಶ್ವದ ಅತಿ ದೊಡ್ಡ ಕಟ್ಟಡ ಬುರ್ಜ್ ಖಲೀಫಾದಲ್ಲಿ ಸನ್ನಿ ಮತ್ತು ಆಕೆಯ ತಂಡ

ಬಹುಕಾಲದ ಕನಸು ನನಸಾಗಿಸಿದ ಸನ್ನಿ- ವಿಮಾನದಲ್ಲಿ ರೆಸ್ಲರ್ ಖಲಿ ದಿ ಗ್ರೇಟ್ ಭೇಟಿ


Click it and Unblock the Notifications








