ಫೋರ್ಸ್ ಮೋಟಾರ್ಸ್‌ನಿಂದ ಟ್ರಾವೆಲರ್ 26 ವ್ಯಾನ್ ಬಿಡುಗಡೆ

ದೇಶದ ಆಟೋಮೊಬೈಲ್ ದೈತ್ಯ ಫೋರ್ಸ್ ಮೋಟಾರ್ಸ್ ಕಳೆದ ಮಂಗಳವಾರವಷ್ಟೇ 26 ಸೀಟ್ ಸೌಲಭ್ಯವುಳ್ಳ ನೂತನ ಮೊನೊಕಾಕ್ ಪ್ಯಾನಲ್ ವ್ಯಾನ್ ಅನ್ನು ಬಿಡುಗಡೆಗೊಳಿಸಿತ್ತು. 'ಟ್ರಾವೆಲರ್ 26' ಎಂದೇ ಹೆಸರಿಸಲ್ಪಡುವ ಈ ನೂತನ ವ್ಯಾನ್ ಅತ್ಯಂತ ಆಕರ್ಷಕ ಫೀಚರ್‌ಗಳನ್ನು ಹೊಂದಿದ್ದು, ಮೊಬಿಲೈಜ್ಡ್ ವ್ಯಾನ್‌ಗಳ ಪಟ್ಟಿಯಲ್ಲಿ ಮೊದಲ ಅವತರಣಿಕೆಯಾಗಿದೆ.

ದೆಹಲಿ ಎಕ್ಸ್ ಶೋರೂಂಗಳಲ್ಲಿ ವ್ಯಾನ್ ದರ 10,87,900 ಲಕ್ಷ ರುಪಾಯಿಗಳಾಗಿವೆ. ಟ್ರಾವೆಲರ್ 26 ಡೈಮ್ಲರ್ ಎಜಿ ಪರವಾನಗಿಯೊಂದಿಗೆ ಕಾಮನ್ ರೈಲ್ ಎಂಜಿನ್ ಹೊಂದಿದ್ದು, 129 ಪಿ ಎಸ್ ಪವರ್ ಹಾಗೂ 295 ಎನ್‌ಎಂ ಟರ್ಕ್ಯೂ ಹೊಂದಿದೆ. ಪ್ರತಿ ಟನ್‌‌ಗೆ ಗರಿಷ್ಠ 18 ಕಿಲೋ ವಾಟ್ ಪವರ್ ವೇಟ್ ರೆಷಿಯೋ ಕೂಡಾ ಹೊಂದಿದೆ. ಇದೇ ಸ್ಟಾಂಡರ್ಡ್‌ನಲ್ಲಿರುವ ಇತರ ವ್ಯಾನ್‌ಗಳು ಪ್ರತಿ ಟನ್‌ಗೆ ಕೇವಲ 12 ಕಿಲೋ ವ್ಯಾಟ್ ಪವರ್ ಮಾತ್ರ ಹೊಂದಿದೆ.

ಡ್ಯುಯಲ್ ಮಾಸ್ ಪ್ಲೈ ವೀಲ್ ತಂತ್ರಜ್ಞಾನ ಹೊಂದಿರುವುದರಿಂದ ನಿಧಾನ ವೇಗದಲ್ಲೂ ಸುಗಮವಾಗಿ ಚಲಿಸಲು ನೆರವು ಮಾಡಲಿದೆ. ಇದುವೇ ಇತರ ವ್ಯಾನ್‌ಗಳಿಂದ ಟ್ರಾವೆಲರ್ 26 ಪ್ರತ್ಯೇಕಿಸುತ್ತಿದ್ದು, ದೇಶದಲ್ಲಿ ಶಾಲಾ ಬಸ್ ಹಾಗೂ ಪ್ರವಾಸಿ ಸಾರಿಗೆ ವಾಹನಗಳನ್ನು ಬಳಸಲು ಹೆಚ್ಚು ಸೂಕ್ತವೆನಿಸಿದೆ.

ಅತ್ಯುತ್ತಮ ಇಂಧನ ದಕ್ಷತೆಯನ್ನು ಕೂಡಾ ಟ್ರಾವೆಲರ್ 26 ಹೊಂದಿದ್ದು, ಇದೇ ದರ್ಜೆಯ ಇತರ ಮಾದರಿಗಳಿಗಿಂತಲೂ ಶೇಕಡಾ 15ರಷ್ಟು ಹೆಚ್ಚು ಇಂಧನ ಕ್ಷಮತೆ ನೀಡಲಿದೆ ಎಂದು ಫೋರ್ಸ್ ಮೋಟಾರ್ಸ್ ಅಭಿಪ್ರಾಯಪಟ್ಟಿದೆ.

ಎಲ್ಲ ವೀಲ್‌ಗಳಲ್ಲೂ ವೆಂಟಿಲೇಟಡ್ ಡಿಸ್ಕ್ ಆಳವಡಿಸಲಾಗಿದೆ. ಅಲ್ಲದೆ ಮೊನೊಕಾಕ್ ನಿರ್ಮಾಣ ಬಾಳ್ವಿಕೆ ಹಾಗೂ ಪವರ್ ಅತ್ಯುತ್ತಮ ಮಟ್ಟದಲ್ಲಿರಲಿದೆ. 2.2 ಮೀಟರ್ ಇಂಟಿರಿಯರ್ ಭಾಗವು ಕುಳಿತುಕೊಳ್ಳಲು ಉತ್ತಮ ಸ್ಥಳಾವಕಾಶವನ್ನು ಒದಗಿಸಲಿದೆ. ಪಿತಾಂಪುರ ಘಟಕದಲ್ಲಿ ಕಾರು ನಿರ್ಮಾಣ ಪೂರ್ಣಗೊಂಡಿದ್ದು, ಮೊದಲ ಆವೃತ್ತಿಯಲ್ಲಿ 10 ಸಾವಿರ ಯುನಿಟ್ ಅನಾವರಣಗೊಳ್ಳಲಿದೆ. ಎರಡನೇ ಆವೃತ್ತಿಯು ಒಂದು ವರ್ಷ ಅವಧಿಯ ಬಳಿಕ ಬರಲಿದ್ದು, ಫೋರ್ಸ್ ಮೋಟಾರ್ಸ್ ಮಹಾರಾಷ್ಟ್ರ ಹಾಗೂ ಗೋವಾ ಡೀಲರ್ಸ್‌ಗಳಲ್ಲಿ ಲಭ್ಯವಿರಲಿದೆ.

ಟ್ರಾವೆಲರ್ 26

ಟ್ರಾವೆಲರ್ 26

ದೇಶದ ಆಟೋಮೊಬೈಲ್ ದೈತ್ಯ ಫೋರ್ಸ್ ಮೋಟಾರ್ಸ್ 26 ಸೀಟ್ ಸೌಲಭ್ಯವುಳ್ಳ ನೂತನ ಮೊನಕೊಕ್ ಪ್ಯಾನಲ್ ವ್ಯಾನ್ ಆದ ಟ್ರಾವೆಲರ್ 26 ಅನ್ನು ಬಿಡುಗಡೆ ಮಾಡಿದೆ.

ಟ್ರಾವೆಲರ್ 26 ಇಂಧನ ದಕ್ಷತೆ

ಟ್ರಾವೆಲರ್ 26 ಇಂಧನ ದಕ್ಷತೆ

ಅತ್ಯುತ್ತಮ ಇಂಧನ ದಕ್ಷತೆ ಕೂಡಾ ಟ್ರಾವೆಲರ್ 26 ಹೊಂದಿದ್ದು, ಇದೇ ದರ್ಜೆಯ ಇತರ ಮಾದರಿಗಳಿಗಿಂತಲೂ ಶೇಕಡಾ 15ರಷ್ಟು ಹೆಚ್ಚು ಇಂಧನ ಕ್ಷಮತೆ ನೀಡಲಿದೆ ಎಂದು ಫೋರ್ಸ್ ಮೋಟಾರ್ಸ್ ಅಭಿಪ್ರಾಯಪಟ್ಟಿದೆ.

ಟ್ರಾವೆಲರ್ 26 ವಿಶಾಲವಾದ ಸಿಟ್ಟಿಂಗ್ ಸೌಲಭ್ಯ

ಟ್ರಾವೆಲರ್ 26 ವಿಶಾಲವಾದ ಸಿಟ್ಟಿಂಗ್ ಸೌಲಭ್ಯ

ಫೋರ್ಸ್ ಮೋಟಾರ್ಸ್ ಟ್ರಾವೆಲರ್ 26 ವಿಶಾಲವಾದ ಸೀಟ್ ಸೌಲಭ್ಯವನ್ನು ಹೊಂದಿದೆ. ವ್ಯಾನ್ ಹೆಸರಿನಲ್ಲಿ ತಿಳಿಸಿರುವಂತೆಯೇ 25+1 ಸೀಟ್ ಸೌಲಭ್ಯ ಹೊಂದಿರಲಿದೆ.

ಟ್ರಾವೆಲರ್ 26 ದರ

ಟ್ರಾವೆಲರ್ 26 ದರ

ದೆಹಲಿಯ ಎಕ್ಸ್ ಶೋರೂಂಗಳಲ್ಲಿ ಫೋರ್ಸ್ ಮೋಟಾರ್ಸ್ ಟ್ರಾವೆಲರ್ 26 ವ್ಯಾನ್ ದರ 10,87,900 ಲಕ್ಷ ರುಪಾಯಿಗಳಾಗಿವೆ.

ಟ್ರಾವೆಲರ್ 26 ಫೀಚರ್ಸ್

ಟ್ರಾವೆಲರ್ 26 ಫೀಚರ್ಸ್

ಟ್ರಾವೆಲರ್ 26 ಡೈಮ್ಲರ್ ಎಜಿ ಪರವಾನಗಿಯೊಂದಿಗೆ ಕಾಮನ್ ರೈಲ್ ಎಂಜಿನ್ ಹೊಂದಿದ್ದು, 129 ಪಿ ಎಸ್ ಪವರ್ ಹಾಗೂ 295 ಎನ್‌ಎಂ ಟರ್ಕ್ಯೂ ಆಗಿದೆ. ದೇಶದಲ್ಲಿ ಶಾಲಾ ಬಸ್ ಹಾಗೂ ಪ್ರವಾಸಿ ಸಾರಿಗೆ ವಾಹನಗಳನ್ನು ಬಳಸಲು ಹೆಚ್ಚು ಸೂಕ್ತವೆನಿಸಿದೆ.

More from DriveSpark

Article Published On: Friday, October 19, 2012, 14:27 [IST]
English summary
Pune based commercial vehicle manufacturer Force Motors has launched the 26-seater light commercial vehicle at a base price of Rs 11.24 lakh, ex-showroom Hyderabad. Force Traveller 26 was earlier showcased at the 2012 Auto Expo in Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+