Force Gurkha: ಥಾರ್ ರಾಕ್ಸ್ ಪ್ರತಿಸ್ಪರ್ಧಿ.. 'ಫೋರ್ಸ್ ಗೂರ್ಖಾ' ಡೆಲಿವರಿ ಪಡೆದ ದೇಶದ ಮೊದಲ ಲೇಡಿ!
ಫೋರ್ಸ್ ಮೋಟಾರ್ಸ್ (Force Motors), ಅತಿದೊಡ್ಡ 'ವ್ಯಾನ್' ತಯಾರಕ ಕಂಪನಿಯಾಗಿದೆ. ಕೆಲವೇ ತಿಂಗಳ ಹಿಂದೆ, ಭಾರತದ ಮಾರುಕಟ್ಟೆಯಲ್ಲಿ ಕಂಪನಿಯು 5-ಡೋರ್‌ನ ಮಾರುತಿ ಜಿಮ್ನಿ & ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿಗೆ ಪ್ರಬಲವಾದ ಸ್ಪರ್ಧೆಯೊಡ್ಡಲು 5-ಡೋರ್ ಆಯ್ಕೆಯ ಗೂರ್ಖಾವನ್ನು ಆದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಈಗಾಗಲೇ ದೇಶಾದ್ಯಂತ ವಿವಿಧ ನಗರಗಳಲ್ಲಿ ಡೆಲಿವರಿಯನ್ನು ಶುರು ಮಾಡಲಾಗಿದೆ.
ಇತ್ತೀಚೆಗೆ ಫೋರ್ಸ್ ಗೂರ್ಖಾ (Force Gurkha) ಎಸ್‌ಯುವಿಯನ್ನು ಮಹಿಳೆಯೊಬ್ಬರು ವಿತರಣೆ ಪಡೆಯುತ್ತಿರುವ ವಿಡಿಯೋವನ್ನು ಕಂಪನಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಶೇರ್ ಮಾಡಲಾಗಿದೆ. ಇವರೇ ದೇಶದಲ್ಲಿ 'ಫೋರ್ಸ್ ಗೂರ್ಖಾ' ಕಾರನ್ನು ಡೆಲಿವರಿ ತೆಗೆದುಕೊಂಡ ಮೊದಲ ಮಹಿಳೆ ಎನ್ನಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೂ ನೂತನ ಗೂರ್ಖಾ ಎಸ್‌ಯುವಿಯನ್ನು ಚಾಲನೆ ಮಾಡುತ್ತಿರುವುದನ್ನು ಕೂಡ ಕಾಣಬಹುದು.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಹೊಚ್ಚ ಹೊಸ 'ಫೋರ್ಸ್ ಗೂರ್ಖಾ' ಜನಪ್ರಿಯ ಆಫ್-ರೋಡ್ ಎಸ್‌ಯುವಿಯಾಗಿದೆ. ಇದು ಬರೋಬ್ಬರಿ ರೂ.18 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. ರೆಡ್, ಗ್ರೀನ್, ವೈಟ್ ಹಾಗೂ ಬ್ಲ್ಯಾಕ್ ಎಂಬ ಆಕರ್ಷಕ ಬಣ್ಣಗಳ ಆಯ್ಕೆಯನ್ನು ಪಡೆದಿದೆ.
ಈ ಫೋರ್ಸ್ ಗೂರ್ಖಾ 2.6 - ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 140 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 320 ಎನ್ಎಂ (ನ್ಯೂಟನ್ ಮೀಟರ್) ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 9.5 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ.

ನೂತನ ಫೋರ್ಸ್ ಗೂರ್ಖಾ ಎಸ್‌ಯುವಿಯಲ್ಲಿ 7 - ಜನರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು. ಇದು 9 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಫುಲ್-ಫೋರ್ ಪವರ್ ವಿಂಡೋಗಳು ಹಾಗೂ ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.
ಈ ಫೋರ್ಸ್ ಗೂರ್ಖಾಗೆ ನೇರ ಎದುರಾಳಿಯಾಗಿರುವ ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಎಸ್‌ಯುವಿ, ರೂ.12.99 ಲಕ್ಷದಿಂದ ರೂ.22.49 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 2.0 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 2 - ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಹೊಸ ಫೋರ್ಸ್ ಗೂರ್ಖಾಗೆ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಎಸ್‌ಯುವಿ ಕೂಡ ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಇದು ರೂ.12.74 ಲಕ್ಷದಿಂದ ರೂ.14.95 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. 1.5 - ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications