ಮತ್ತೆ ಮಹೀಂದ್ರಾ ಥಾರ್‌ ಎದೆಯಲ್ಲಿ ಢವ ಢವ: ಎದುರಾಳಿ ಕಾರಿನಲ್ಲಿ ಬರುತ್ತಿದೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆ!

ಮಹೀಂದ್ರಾ ಥಾರ್‌ ಭಾರತದ ಪ್ರಸಿದ್ದ ಆಫ್‌ರೋಡ್‌ ವಾಹನ ಎಂದರೆ ತಪ್ಪಾಗಲಾರದು. ಇದು ತನ್ನದೇ ಆದ ರಗಡ್‌ ಲುಕ್‌ ಮತ್ತು ಅದ್ಭುತ ಪರ್ಫಾಮೆನ್ಸ್‌ಗೆ ಹೆಸರುವಾಸಿಯಾಗಿದೆ. ಸದ್ಯಕ್ಕೆ ಈ ಸೆಗ್ಮೆಂಟ್‌ನಲ್ಲಿ ಮಹೀಂದ್ರಾ ಥಾರ್‌ಗೆ ಸ್ಪರ್ಧೆ ಒಡ್ಡುವಮತಹ ಒಂದೇ ಒಂದು ವಾಹನವೆಂದರೆ ಅದು ಫೋರ್ಸ್‌ ಕಂಪನಿಯ ಪ್ರಸಿದ್ದ ಗೂರ್ಖಾ. ಇದೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಮಹೀಂದ್ರಾ ಕಂಪನಿ ಥಾರ್‌ ಕಾರಿಗ 5 ಡೋರ್‌ ಆವೃತ್ತಿಯನ್ನು ಮಾರುಕಟ್ಟೆಗೆ ತರಲಿದೆಯಾದರೂ, ಫೋರ್ಸ್‌ ಈಗಾಗಲೇ ಮಾರುಕಟ್ಟೆಗೆ ಗೂರ್ಖಾ ಕಾರಿನ 5 ಡೋರ್‌ ಅನ್ನು ಪರಿಚಯಿಸಿದೆ ಎಂಬುದನ್ನು ಗಮನಿಸಬೇಕು.

ಹೌದು, ಯಾವಗಾಲೂ ಫೋರ್ಸ್‌ ಗೂರ್ಖಾ, ಮಹೀಂದ್ರಾ ಥಾರ್‌ಗಿಂತ ಒಂದು ಹೆಜ್ಜೆ ಮುಂದೆ ಇರುತ್ತದೆ ಎಂದರೆ ತಪ್ಪಾಗಲಾರದು. ಫೋರ್ಸ್‌ ಯಾವಾಗಲೂ ಮಹೀಂದ್ರಾ ಥಾರ್‌ಗಿಂತ ಮುಂಚಿತವಾಗಿ ತನ್ನ ಕಾರಿಗೆ ಅಪ್‌ಡೇಟ್‌ಗಳನ್ನು ಕೊಡುತ್ತಾ ಬರುತ್ತದೆ. ಇದು ಗ್ರಾಹಕರಿಗೆ ತಿಳಿದಿದೆಯೂ ಕೂಡ. ಆದರೆ ಥಾರ್‌ನ ಜನಪ್ರೀಯತೆ ಗೂರ್ಖಾಗಿಂತ ಹೆಚ್ಚಿದೆ ಎಂದರೆ ತಪ್ಪಾಗಲಾರದು.

The Force Gurkha automatic is currently undergoing evaluation

ಇದೀಗ ಗೂರ್ಖಾ ಫೋರ್ಸ್‌ನಲ್ಲಿ ಆಟೋಮ್ಯಾಟಿಕ್‌ ಗೇರ್‌ ಬಾಕ್ಸ್‌ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕುರಿತಾಗಿ ಪ್ರಭಲ ಮೂಲಗಳಿಂದ ಮಾಹಿತಿಗಳು ಬಂದಿದ್ದು, ಥಾರ್‌ನ ಮೂರು ಮತ್ತು ಐದು ಡೋರ್‌, ಈ ಎರಡೂ ಮಾಡೆಲ್‌ಗಳಿಗೂ ಈ ಆಯ್ಕೆ ಸಿಗಲಿದೆ ಎಂದು ತಿಳಿದು ಬಂದಿದೆ. ಈ ಆಯ್ಕೆ ಬಂದರೆ ವಾಹನ ಚಾಲಕರ ಅನುಭವ ಮತ್ತಷ್ಟು ಹೆಚ್ಚಾಗಲಿದೆ.

ಮಾಹಿತಿಗಳ ಪ್ರಕಾರ ಫೋರ್ಸ್ ಗೂರ್ಖಾ (Force Gurkha automatic) ಆಟೋಮ್ಯಾಟಿಕ್‌ ಗೇರ್ ಆಯ್ಕೆಯಲ್ಲಿ 7 ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಇರಲಿದ್ದು, ಸಾಧಾರಣ ಮಾಡೆಲ್‌ಗಳಿಗಿಂತ ಒಂದು ಲಕ್ಷ ಹೆಚ್ಚು ಬೆಲೆಬಾಳಲಿದೆ ಎಂದು ತಿಳಿದು ಬಂದಿದೆ. ಹಿಂದಿನ ಮಾಡಲ್‌ಗೆ ಹೋಲಿಸಿದರೆ, ಹೊಸ 2024 ಗೂರ್ಖಾ ಗಮನಾರ್ಹ ನವೀಕರಣಗಳನ್ನು ಪಡೆದಿದೆ.

The Force Gurkha automatic is currently undergoing evaluation

ಹೊಸ 2024ರ ಗೂರ್ಖಾ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ. 16.75 ಲಕ್ಷಗಳಾದರೆ, 5 - ಡೋರ್ ಮಾದರಿಯ ಬೆಲೆಯು ರೂ. 18 ಲಕ್ಷಗಳಾಗಿದೆ. ಇದು ತನ್ನ ಅಡ್ವೆಂಚರ್ ವಿಭಾಗದಲ್ಲಿ ಮಹೀಂದ್ರಾ ಥಾರ್ ಮತ್ತು ಮಾರುತಿ ಜಿಮ್ನಿಯಂತಹ ಕಾರುಗಳಿಗೆ ಪೈಪೋಟಿ ನೀಡುತ್ತದೆ.

2024ರ ಗೂರ್ಖಾ ಕಾರಿನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 9 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್, ಟಿಪಿಎಂಎಸ್ ರೀಡ್ ಔಟ್ ನೊಂದಿಗೆ ಸಂಪೂರ್ಣ ಡಿಜಿಟಲ್ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಸ್ಕ್ರೀನ್, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್‌ವಿಎಂಗಳು, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್ ಸೇರಿದಂತೆ ಹೆಚ್ಚಿನವುಗಳನ್ನು ಹೊಂದಿದೆ.

ಎಫ್ಎಂ 2.6 ಸಿಆರ್ ಟರ್ಬೊ ಡೀಸೆಲ್ ಘಟಕವನ್ನು ಹೊಂದಿದೆ. ಹೊಸ 2024 ಗೂರ್ಖಾ 140 ಬಿಹೆಚ್‌ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲೆಕ್ಟ್ರಾನಿಕ್ ಶಿಫ್ಟ್-ಆನ್-ದಿ-ಫ್ಲೈ 4X4 ವರ್ಗಾವಣೆ ಕೇಸ್ ಜೊತೆಗೆ ಮುಂಭಾಗ ಮತ್ತು ಹಿಂಭಾಗದ ಲಾಕಿಂಗ್ ಡಿಫರೆನ್ಶಿಯಲ್‌ಗಳು ಗಮನಾರ್ಹ ವೈಶಿಷ್ಟ್ಯಗಳಾಗಿವೆ ಎಂಬುದನ್ನು ನಾವು ಈ ಸಂಧರ್ಭದಲ್ಲಿ ನೆನಪಿಸಿಕೊಳ್ಳಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 20, 2024, 11:10 [IST]
English summary
The force gurkha automatic is currently undergoing evaluation
Read more on force motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+