ಹೊಸ ವಿನ್ಯಾಸಗಳೊಂದಿಗೆ ಫೋರ್ಡ್ ಫಿಗೊ ಬಿಡುಗಡೆ
ದಸರಾ ಹಾಗೂ ದೀಪಾವಳಿ ಹಬ್ಬದ ಸೀಸನ್ ಮುಂದಿರಿಸಿಕೊಂಡು ಫೋರ್ಡ್ ಇಂಡಿಯಾ ಕಾರು ತಯಾರಕ ಕಂಪೆನಿಯು ನೂತನ ಫಿಗೊ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆ ಮಾಡಿದೆ. ಫೋರ್ಡ್ ಕಂಪೆನಿಯು ಭಾರತದಲ್ಲಿ 2010 ಮಾರ್ಚ್ ತಿಂಗಳಲ್ಲಿ ಫಿಗೊ ಮೊದಲ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ನೂತನ ವಿನ್ಯಾಸದೊಂದಿಗೆ ಆಗಮಿಸಿರುವ ಹೊಸ ಫಿಗೊ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.
ದರ ಮಾಹಿತಿ
- ಪೆಟ್ರೋಲ್ ಎಂಜಿನ್ ನೂತನ ಫಿಗೊ ದರ: 3.84 ಲಕ್ಷ ರು.
- ಡೀಸೆಲ್ ಎಂಜಿನ್ ನೂತನ ಫಿಗೊ ದರ: 4.81 ಲಕ್ಷ ರು.
(ದೆಹಲಿ ಎಕ್ಸ್ ಶೋರೂಂಗಳಲ್ಲಿ)
ನೂತನ ಫೋರ್ಡ್ ಫಿಗೊ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಇಂಜಿನ್‌ಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಫಿಗೊ 1.2L 16 ವಾಲ್ವೆ ಡಿಒಎಚ್‌ಸಿ ಹಾಗೂ ಡೀಸೆಲ್ ಫಿಗೊ 1.4L 8 ವಾಲ್ವೆ ಎಸ್‌ಒಎಚ್‌ಸಿ ಶಕ್ತಿಯೊಂದಿಗೆ ನಿಯಂತ್ರಿಸಲ್ಪಡಲಿದೆ.ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ತಲಾ ಎರಡು ವೈವಿಧ್ಯಗಳೊಂದಿಗೆ (ಎಲ್‌ಎಕ್ಸ್‌ಐ, ಇಎಕ್ಸ್‌ಐ, ಜೆಡ್‌ಎಕ್ಸ್‌ಐ, ಟೈಟಾನಿಯಂ) ಲಭ್ಯವಿರಲಿದೆ. ದಸರಾ ಹಾಗೂ ದೀಪಾವಳಿ ಹಬ್ಬದ ಸೀಸನ್‌ನಲ್ಲಿ ಈ ಸಣ್ಣ ಹಾಗೂ ಕಾಂಪೆಕ್ಟ್ ಕಾರು ಗ್ರಾಹಕರನ್ನು ಹೆಚ್ಚು ಆಕರ್ಷಿಸುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.
ನವೀನ ಷಡ್ಭುಜೀಯ ಮುಂದಿನ ಗ್ರಿಲ್, ಹೊಸ ಅಲೋಯ್ ವೀಲ್, ಉತ್ತಮವಾಗಿ ರೂಪಿತವಾದ ಹಿಂಭಾಗದ ಟೈಲ್ ಲ್ಯಾಂಪುಗಳು ಪ್ರಮುಖ ವೈಶಿಷ್ಟ್ಯಗಳಾಗಿವೆ. ಫೋರ್ಡ್ ಕಂಪನಿಯ ಪ್ರಕಾರ ನೂತನ ಫಿಗೊದಲ್ಲಿ 100 ಸಂಘಟಿತ ಬದಲಾವಣೆಗಳನ್ನು ಮಾಡಲಾಗಿದೆಯಂತೆ.


Click it and Unblock the Notifications









