ಭಾರತಕ್ಕೆ ಬರಲಿದೆಯಾ ಫೋರ್ಡ್ ಫಿಗೊ ಸ್ಪೋರ್ಟ್ಸ್ ಆವೃತ್ತಿ..?

Written By:

ಬೃಹತ್ ಯೋಜನೆ ರೂಪಿಸಿರುವ ಫೋರ್ಡ್ ಇಂಡಿಯಾ, ಸದ್ಯದಲ್ಲೇ ಕ್ರೀಡಾ ಆವೃತ್ತಿಯ ಫಿಗೊ ಕಾರು ಬಿಡುಗಡೆಗೊಳಿಸುವ ತವಕದಲ್ಲಿದೆ. ಈ ಕುರಿತು ಸದ್ಯದಲ್ಲೇ ಅಧಿಕೃತ ಮಾಹಿತಿ ಬಹಿರಂಗಪಡಿಸಲಿರುವ ಫೋರ್ಡ್, ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಕ್ರೀಡಾ ಆವೃತ್ತಿಯನ್ನು ಪರಿಚಯಿಸಲಿದೆ.

To Follow DriveSpark On Facebook, Click The Like Button
ಭಾರತಕ್ಕೆ ಬರಲಿದೆ ಫೋರ್ಡ್ ಫಿಗೊ ಸ್ಫೋರ್ಟ್ಸ್ ಆವೃತ್ತಿ..?

ಕ್ರೀಡಾ ಆವೃತ್ತಿಯಲ್ಲಿ ಸಿದ್ಧಗೊಂಡಿರುವ ಫೋರ್ಡ್ ಫಿಗೊ, ಟೈಟಾನಿಯಂ ಮಾದರಿಯಲ್ಲಿ ಲಭ್ಯವಿರಲಿದೆ. ಇನ್ನೂ ಸಾಮಾನ್ಯ ಮಾದರಿಗಿಂತ ಭಿನ್ನತೆ ಹೊಂದಿರುವ ಸ್ಫೋರ್ಟ್ಸ್ ಆವೃತ್ತಿಯು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಮಿಂಚಲಿದ್ದು, KA+ ಆವೃತ್ತಿ ಈಗಾಗಲೇ ಲಂಡನ್‌ನಲ್ಲಿ ಭರ್ಜರಿ ಮಾರಾಟಗೊಳ್ಳುತ್ತಿದೆ.

ಭಾರತಕ್ಕೆ ಬರಲಿದೆ ಫೋರ್ಡ್ ಫಿಗೊ ಸ್ಫೋರ್ಟ್ಸ್ ಆವೃತ್ತಿ..?

ಸ್ಪೋರ್ಟ್ಸ್ ಮಾದರಿಯ ಫಿಗೊ ಕಾರು 15-ಇಂಚಿನ ಬ್ಲ್ಯಾಕ್ ಅಲಾಯ್ ವೀಲ್ಹ್‌ಗಳನ್ನು ಹೊಂದಿದೆ. ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಹನಿಕೊಂಬ್ ಫ್ರಂಟ್ ಗ್ರೀಲ್ ಮತ್ತು ಹಿಂಬದಿಯಲ್ಲಿ ಸ್ಪಾಯ್ಲರ್ ವ್ಯವಸ್ಥೆಯಿದೆ.

ಭಾರತಕ್ಕೆ ಬರಲಿದೆ ಫೋರ್ಡ್ ಫಿಗೊ ಸ್ಫೋರ್ಟ್ಸ್ ಆವೃತ್ತಿ..?

ಪ್ರಮುಖ ಎರಡು ಬಣ್ಣಗಳಲ್ಲಿ ಫೋರ್ಡ್ ಫಿಗೊ ಲಭ್ಯವಿರಲಿದೆ. ORVMs ಸೌಲಭ್ಯ ಹೊಂದಿರುವ ಇದರಲ್ಲಿ ಕಾರಿನ ಬಣ್ಣಗಳು ವ್ಯತಿರಿಕ್ತ ಛಾಯೆಗಳಲ್ಲಿ ಗೋಚರಿಸುವ ಗುಣಹೊಂದಿದೆ.

ಭಾರತಕ್ಕೆ ಬರಲಿದೆ ಫೋರ್ಡ್ ಫಿಗೊ ಸ್ಫೋರ್ಟ್ಸ್ ಆವೃತ್ತಿ..?

ಕಾರಿನ ಒಳಾಂಗಣ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಕಾರಿನ ಸ್ಟೀರಿಂಗ್ ಚಕ್ರಕ್ಕೆ ಲೆದರ್ ಕೊಟಿಂಗ್ ಇದ್ದು, ಅಷ್ಟೇನು ಗಮನಾರ್ಹ ಬದಲಾವಣೆಗಳು ಹೊಸ ಮಾದರಿ ಕಾರಿನಲ್ಲಿ ಇಲ್ಲವೆಂಬ ಮಾಹಿತಿಯಿದೆ.

ಭಾರತಕ್ಕೆ ಬರಲಿದೆ ಫೋರ್ಡ್ ಫಿಗೊ ಸ್ಫೋರ್ಟ್ಸ್ ಆವೃತ್ತಿ..?

ಕೆಲವು ಸುದ್ಧಿ ಮೂಲಗಳ ಪ್ರಕಾರ, ಫೋರ್ಡ್ ಫಿಗೊ ಆವೃತ್ತಿಯ ಎಂಜಿನ್ ಬದಲಾಗುವ ನೀರಿಕ್ಷೆಯಿದೆ. ಜೊತೆಗೆ ಟೈಟಾನಿಯಂ ಮತ್ತು ಟೈಟಾನಿಯಂ+ ಮಾದರಿಗಳ ನಡುವೆ ಕೆಲವು ಸ್ವಾಮ್ಯತೆಗಳನ್ನು ತರಲಾಗಿದ್ದು, ಹಳೆಯ ಫೋರ್ಡ್ ಆವೃತ್ತಿಗಳು ಮಾರಾಟ ಭಾರತದಲ್ಲಿ ಮುಂದುವರೆಯಲಿದೆ.

ಭಾರತಕ್ಕೆ ಬರಲಿದೆ ಫೋರ್ಡ್ ಫಿಗೊ ಸ್ಫೋರ್ಟ್ಸ್ ಆವೃತ್ತಿ..?

ಒಂದು ವೇಳೆ ಭಾರತದಲ್ಲಿ ಫೋರ್ಡ್ ಫಿಗೊ ಕ್ರೀಡಾ ಆವೃತ್ತಿ ಬಿಡುಗಡೆಗೊಂಡ ಪಕ್ಷದಲ್ಲಿ ಭರ್ಜರಿ ಸೇಲ್ ಆಗಲಿದ್ದು, ಬೆಲೆಗಳ ವಿಚಾರದಲ್ಲಿ ಮಧ್ಯಮ ವರ್ಗದ ಗ್ರಾಹಕರಿಗೆ ವರವಾಗಲಿದೆ.

ಸದ್ಯ ಬಿಡುಗಡೆಗೊಂಡು ಭರ್ಜರಿ ಮಾರಾಟಗೊಳ್ಳುತ್ತಿರುವ 2017 ಹೋಂಡಾ ಸಿಟಿ ಕಾರಿನ ಚಿತ್ರಗಳನ್ನು ವೀಕ್ಷಿಸಿಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
The Ford Figo Sports features cosmetic changes and will an addition to the features of the Titanium variant.
Please Wait while comments are loading...

Latest Photos