ಫೋರ್ಡ್ ಫಿಗೊ ಪೆಟ್ರೋಲ್ ಮಾದರಿಯ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ

ಫೋರ್ಡ್ ಇಂಡಿಯಾ ಕಂಪನಿಯು ಫಿಗೋ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಪೆಟ್ರೋಲ್ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಎಎಂಟಿ ಆವೃತ್ತಿಯು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಫೋರ್ಡ್ ಫಿಗೊ ಪೆಟ್ರೋಲ್ ಮಾದರಿಯ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ

ಫಿಗೊ ಹ್ಯಾಚ್‌ಬ್ಯಾಕ್ ಪೆಟ್ರೋಲ್ ಮಾದರಿಯಲ್ಲಿ ಮ್ಯಾನುವಲ್ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದ ಫೋರ್ಡ್ ಕಂಪನಿಯು ಇದೀಗ ಹೊಸದಾಗಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಆಟೋಮ್ಯಾಟಿಕ್ ಆವೃತ್ತಿಯು ಫಿಗೊ ಪೆಟ್ರೋಲ್ ಮಾದರಿಯ ಮಧ್ಯಮ ಕ್ರಮಾಂಕದ ಆವೃತ್ತಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ.

ಫೋರ್ಡ್ ಫಿಗೊ ಪೆಟ್ರೋಲ್ ಮಾದರಿಯ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ

ಫಿಗೊ ಪೆಟ್ರೋಲ್ ಆವೃತ್ತಿಗಳಾದ ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್‌ನಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆ ಮಾಡಲಾಗಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.75 ಲಕ್ಷಕ್ಕೆ ಮತ್ತು ರೂ.8.20 ಲಕ್ಷ ಬೆಲೆ ಹೊಂದಿದೆ.

ಫೋರ್ಡ್ ಫಿಗೊ ಪೆಟ್ರೋಲ್ ಮಾದರಿಯ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ

ಹೊಸ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಸೆಲೆಕ್ಟ್ ಶಿಫ್ಟ್ ಟೆಕ್ನಾಲಜಿ ಆಧಾರಿತ ಎಎಂಟಿ ಗೇರ್‌ಬಾಕ್ಸ್ ಜೊತೆಗೆ ಮ್ಯಾನುವಲ್ ಆಗಿ ನಿಯಂತ್ರಣ ಮಾಡಬಹುದಾದ ಸ್ಪೋರ್ಟ್ ಬಟನ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯಗಳನ್ನು ನೀಡಲಾಗಿದೆ.

ಫೋರ್ಡ್ ಫಿಗೊ ಪೆಟ್ರೋಲ್ ಮಾದರಿಯ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ

ಫಿಗೊ ಕಾರು ಡ್ರಾಗ್ಯನ್ ಸರಣಿಯ 3 ಸಿಲಿಂಡರ್ 1.2-ಲೀಟರ್ ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಆವೃತ್ತಿಯ ಜೊತೆಗೆ ಇದೀಗ ಹೊಸದಾಗಿ ಆಟೋಮ್ಯಾಟಿಕ್ ಆವೃತ್ತಿಯು ಸಹ ಮಾರಾಟಗೊಳ್ಳಲಿದ್ದು, ಎರಡು ಮಾದರಿಗಳು ಗರಿಷ್ಠ 95 ಬಿಎಚ್‌ಪಿ ಮತ್ತು 119 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಫೋರ್ಡ್ ಫಿಗೊ ಪೆಟ್ರೋಲ್ ಮಾದರಿಯ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಹೊಸ ಗೇರ್‌ಬಾಕ್ಸ್ ಜೋಡಣೆ ಹೊರತುಪಡಿಸಿ ಮ್ಯಾನುವಲ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಹೊಸ ಗೇರ್‌ಬಾಕ್ಸ್ ಆಯ್ಕೆಯು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲಿದೆ.

ಫೋರ್ಡ್ ಫಿಗೊ ಪೆಟ್ರೋಲ್ ಮಾದರಿಯ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ

ಹೊಸ ಕಾರಿನಲ್ಲಿ ಬ್ಲ್ಯಾಕ್ ಔಟ್ ಗ್ರಿಲ್ ಮತ್ತು ರೂಫ್, ಫಾಗ್ ಲ್ಯಾಂಪ್, 15-ಇಂಚಿನ ಅಲಾಯ್ ವ್ಹೀಲ್, ಚಾರ್ಕಲ್ ಬ್ಲ್ಯಾಕ್ ಇಂಟಿರಿಯರ್, ಫೋರ್ಡ್ ಪಾಸ್ ಕಾರ್ ಕನೆಕ್ಟ್ ಟೆಕ್ನಾಲಜಿ, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸುರಕ್ಷತೆಗಾಗಿ ಎಬಿಎಸ್, 6 ಏರ್‌ಬ್ಯಾಗ್, ಟ್ರಾಕ್ಷನ್ ಕಂಟ್ರೋಲ್, ಕ್ಲೈಮೆಟ್ ಕಂಟ್ರೋಲ್ ಒಳಗೊಂಡಿದೆ.

ಫೋರ್ಡ್ ಫಿಗೊ ಪೆಟ್ರೋಲ್ ಮಾದರಿಯ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ

ಇನ್ನು ಫಿಗೊ ಕಾರು ಮಾದರಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿ 1.2 ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯಲ್ಲಿ ಮಾರಾಟವಾಗುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.85 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 8.70 ಲಕ್ಷ ಬೆಲೆ ಹೊಂದಿದೆ.

ಫೋರ್ಡ್ ಫಿಗೊ ಪೆಟ್ರೋಲ್ ಮಾದರಿಯ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ

ಫಿಗೊ ಕಾರಿನ 1.5 ಲೀಟರ್ ಡೀಸೆಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 100-ಬಿಎಚ್‌ಪಿ, 215-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ಡೀಸೆಲ್ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯನ್ನು ನೀಡಲಾಗಿಲ್ಲ.

Most Read Articles

Kannada
English summary
Ford Figo Petrol Automatic Launched In India At Rs 7.75 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X