ದೊಡ್ಡ ಸಿಗ್ನಲ್ ಕೊಟ್ಟ ಫೋರ್ಡ್: ಭಾರತಕ್ಕೆ ಬರುತ್ತಿದೆ ಹೊಸ ಎಸ್‍ಯುವಿ... ಟಾಟಾಗೆ ಆತಂಕ ಶುರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋರ್ಡ್ (Ford) 1990ರ ದಶಕದಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿತ್ತು. ಅಮೆರಿಕದ ದೈತ ಫೋರ್ಡ್ ಕಂಪನಿಯು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯಚರಣೆ ನಡೆಸುತ್ತಿರುವ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಆದರೆ ಫೋರ್ಡ್ ಕಂಪನಿಯು ನಷ್ಟದಿಂದ ಭಾರತದಲ್ಲಿ ಉತ್ಪಾದನೆ ಮತ್ತು ಮಾರಾಟ ನಿಲ್ಲಿಸಿದ್ದರು.
ಆದರೆ ಕಳೆದ ಕೆಲವು ತಿಂಗಳುಗಳಲ್ಲಿ, ಭಾರತೀಯ ಮಾರುಕಟ್ಟೆಗೆ ಫೋರ್ಡ್ ರಿ-ಎಂಟ್ರಿ ಬಗ್ಗೆ ವದಂತಿಗಳು ಹರಡಿವೆ. ಇದೀಗ ದೇಶದ ಎಲ್ಲಾ ಫೋರ್ಡ್ ಪ್ರಿಯರಿಗೆ ರೋಮಾಂಚಕಾರಿ ಸುದ್ದಿ ಒಂದು ಬಹಿರಂಗವಾಗಿದೆ. ಫೋರ್ಡ್ ಕಂಪನಿಯು ಇತ್ತೀಚೆಗೆ ಹೊಸ ಎಸ್‍ಯುವಿಗಾಗಿ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿದೆ. ವರದಿಗಳ ಪ್ರಕಾರ, ಫೋರ್ಡ್ ಇಂಡಿಯಾ ಭಾರತದಲ್ಲಿ "ಟೆರಿಟರಿ" ಎಂಬ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿದೆ.

ಈ ಹೊಸ ಫೋರ್ಡ್ ಎಸ್‍ಯುವಿಯನ್ನು ಮುಂದಿನ ವರ್ಷದಲ್ಲಿ ದೇಶದಲ್ಲಿ ಬಿಡುಗಡೆ ಮಾಡಬಹುದು. ಈಗಾಗಲೇ ಚೀನಾದಲ್ಲಿ ಮಾರಾಟಕ್ಕೆ ಲಭ್ಯವಿರುವ ಈ ಎಸ್‍ಯುವಿ ಮಾದರಿಯು ಭಾರತದಲ್ಲಿ ಮಹೀಂದ್ರಾ XUV700 ಮತ್ತು ಟಾಟಾ ಸಫಾರಿ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಫೋರ್ಡ್ ಪ್ರಸ್ತುತ ಈ ಎಸ್‍ಯುವಿಯನ್ನು ಚೀನಾ ಮತ್ತು ಮೆಕ್ಸಿಕೋ, ದಕ್ಷಿಣ ಆಫ್ರಿಕಾ ಮತ್ತು ವಿಯೆಟ್ನಾಂನಂತಹ ಇತರ ದೇಶಗಳಲ್ಲಿ ಮಾರಾಟ ಮಾಡುತ್ತದೆ. ಚೀನಾದಲ್ಲಿ, ಇದನ್ನು ಟೆರಿಟರಿ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.
ಇತರ ಮಾರುಕಟ್ಟೆಗಳಲ್ಲಿ, ಇದನ್ನು ಈಕ್ವಟರ್ ಸ್ಪೋರ್ಟ್ ಎಂದು ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ಇತ್ತೀಚೆಗೆ ಸಲ್ಲಿಸಿದ ಟ್ರೇಡ್‌ಮಾರ್ಕ್‌ನಿಂದ ಸೂಚಿಸಿದಂತೆ, ಇದನ್ನು ಟೆರಿಟರಿ ಎಂದು ಕರೆಯಲಾಗುತ್ತದೆ. ಈ ಹೊಸ ಫೋರ್ಡ್ ಟೆರಿಟರಿ (Ford Territory) ಎಸ್‍ಯುವಿಯ ವಿನ್ಯಾಸವು ಕ್ಲಾಸಿ ಲುಕ್ ಅನ್ನು ಹೊಂದಿದೆ. ಇದು ಹನಿಕಾಂಗ್ ಗ್ರಿಲ್‌ನೊಂದಿಗೆ ಸಂಯೋಜಿಸಲ್ಪಟ್ಟ C-ಆಕಾರದ LED DRL ಗಳನ್ನು ಹೊಂದಿರುತ್ತದೆ.

ಈ ಎಸ್‍ಯುವಿಯು ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿರುತ್ತದೆ, ಅಲ್ಲಿ ಮೈನ್ LED ಹೆಡ್‌ಲೈಟ್ ಸೆಟಪ್ ಅನ್ನು ಬಂಪರ್‌ನಲ್ಲಿ ಇರಿಸಲಾಗುತ್ತದೆ. ಈ ಎಸ್‍ಯುವಿಯ ಸೈಡ್ ಪ್ರೊಫೈಲ್‌ನಲ್ಲಿ, ಇದು ವ್ಹೀಲ್ ಅರ್ಚಾರ್ ಮತ್ತು ದೊಡ್ಡ ಅಲಾಯ್ ವ್ಹೀಲ್ ಗಳೊಂದಿಗೆ ಸುಸಜ್ಜಿತವಾಗಿರುತ್ತದೆ. ಇದರ ಉದ್ದವು ಸುಮಾರು 4600 ಮಿಮೀ ಆಗಿರುತ್ತದೆ, ಇದು ಎಂಡೀವರ್ (ಎವರೆಸ್ಟ್) ಕೆಳಗೆ ಸ್ಲಾಟ್ ಮಾಡುತ್ತದೆ. ಇದು ಸುಮಾರು 2700 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿರುತ್ತದೆ.
ಫೋರ್ಡ್ ಟೆರಿಟರಿ ಎಸ್‍ಯುವಿ ಅಗ್ರೇಸಿವ್ ಮತ್ತು ಕ್ಲಾಸಿ ವಿನ್ಯಾಸವನ್ನು ಹೊಂದಿದೆ. ಇದು C-ಆಕಾರದ LED ಟೈಲ್‌ಲೈಟ್‌ಗಳು, ಹಿಂಭಾಗದ ಸ್ಪಾಯ್ಲರ್ ಮತ್ತು ತೀಕ್ಷ್ಣವಾದ ಹಿಂಭಾಗದ ಡಿಫ್ಯೂಸರ್ ಅನ್ನು ಪಡೆಯುತ್ತದೆ. ಇನ್ನು ಒಟ್ಟಾರೆಯಾಗಿ ತುಂಬಾ ಆಧುನಿಕವಾಗಿ ಕಾಣುತ್ತದೆ ಮತ್ತು ನೋಟದಲ್ಲಿ ಹೊಸ ಸಫಾರಿ ಮತ್ತು XUV700 ಗೆ ಯೋಗ್ಯವಾದ ಪ್ರತಿಸ್ಪರ್ಧಿ ಎಂದು ಸಾಬೀತುಪಡಿಸಬಹುದು.

ಈ ಎಸ್‍ಯುವಿಯು ಇನ್ಸ್ಟ್ರುಮೆಂಟ್ ಗೇಜ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್‌ಗಾಗಿ ಎರಡು 12.3-ಇಂಚಿನ LCD ಗಳನ್ನು ಪಡೆಯುತ್ತದೆ. ಇವುಗಳಲ್ಲದೆ, ಈ ಎಸ್‍ಯುವಿಯ ವೈಶಿಷ್ಟ್ಯಗಳ ಪಟ್ಟಿಯೂ ವಿಸ್ತಾರವಾಗಿದೆ. ಇದು ಸೀಟ್‌ಗಳು ಮತ್ತು ಸ್ಟೀರಿಂಗ್ ವೀಲ್‌ಗಾಗಿ ಸಂಪೂರ್ಣ ಲೆದರ್ ಟ್ರಿಮ್, 10-ವೇ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು 4-ವೇ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಪ್ಯಾಸೆಂಜರ್ ಸೀಟ್‌ನೊಂದಿಗೆ ಸಜ್ಜುಗೊಂಡಿದೆ.
ಇದು ಟ್ವಿನ್-ಪ್ಯಾನಲ್ ಪನೋರಮಿಕ್ ಮೂನ್‌ರೂಫ್, ಡ್ಯುಯಲ್-ಬಣ್ಣದ ಎಲ್ಇಡಿ ಆಂಬಿಯೆಂಟ್ ಲೈಟಿಂಗ್ ಮತ್ತು 8-ಸ್ಪೀಕರ್ ಆಡಿಯೊ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ. ಈ ಫೋರ್ಡ್ ಟೆರಿಟರಿ ಎಸ್‍ಯುವಿಯಲ್ಲಿ 1.8-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ. ಈ ಎಂಜಿನ್ 185 bhp ಮತ್ತು 318 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಿರಿ.


Click it and Unblock the Notifications








