'Everest' ಆಗಿ ಅಖಾಡಕ್ಕೆ ಎಂಟ್ರಿಯಾಗಲಿದೆ ಫೋರ್ಡ್‌ ಎಂಡೀವರ್‌: ಫಾರ್ಚ್ಯೂನರ್‌ಗೆ ಎದೆ ನಡುಕ ಶುರು!

ಫುಲ್‌ ಸೈಜ್‌ ಎಸ್‌ಯುವಿಗಳ ಬಗ್ಗೆ ಮಾತನಾಡುವಾಗ ನಮಗೆ ನೆನಪಾಗುವುದು ಎರಡು ವಾಹನಗಳು. ಒಂದು ಟೊಯೋಟಾ ಕಂಪನಿಯ ಫಾರ್ಚ್ಯೂನರ್‌ ಮತ್ತು ಇನ್ನೊಂದು ಫೋರ್ಡ್‌ ಎಂಡೇವರ್‌. ಕೆಲವು ವರ್ಷಗಳ ಹಿಂದೆಯೇ ಫೋರ್ಡ್‌ ಕಂಪನಿ ಭಾರತ ಬಿಟ್ಟು ಹೋದಾಗಿನಿಂದ ಫಾರ್ಚ್ಯೂನರ್‌ ಈ ಸೆಗ್ಮೆಂಟ್‌ನಲ್ಲಿ ತಾನೇ ರಾಜ ಎನ್ನುವ ಹಾಗೆ ಇತ್ತು.

ಇದೀಗ ಕೆಲವು ಸಮಯಗಳಿಂದ ಫೋರ್ಡ್‌ ಮತ್ತೆ ಭಾರತಕ್ಕೆ ವಾಪಸ್‌ ಬರುತ್ತಿರುವುದು ಕನ್ಫರ್ಮ್‌ ಆಗಿದ್ದು, ತನ್ನ ಎಂಡೇವರ್‌ ಕಾರು ಮಾದರಿ ಜೊತೆ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ ಎಂದು ತಿಳಿದು ಬಂದಿದೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ. ಅದೇನೆಂದರೆ ಫೋರ್ಡ್‌ ಎಂಡೀವರ್‌ ಭಾರತಕ್ಕೆ ಬರುವಾಗ ಅದರ ಹೆಸರು ಬದಲಾಗಲಿದೆ ಎಂಬ ಸುದ್ದಿ ಇದೀಗ ಹೊರ ಬಂದಿದ್ದು ಎಲ್ಲರಲ್ಲೂ ಕುತೂಹಲಕ್ಕೆ ಕಾರಣವಾಗಿದೆ.

Ford Endeavour

ಹೌದು, ವರದಿಗಳ ಪ್ರಕಾರ ಫೋರ್ಡ್‌ ಭಾರತಕ್ಕೆ ಬರುವಾಗ ಇದರ ಎಂಡೀವರ್‌ (Ford Endeavour) ಕಾರು ಮಾದರಿಯ ಹೆಸರು ಎವರೆಸ್ಟ್‌ ಎಂದು ಬದಲಾಗಲಿದೆ. ಸದ್ಯಕ್ಕೆ ಪೋರ್ಡ್‌ ಭಾರತಕ್ಕೆ ಈ ಕಾರು ಮಾದರಿಯನ್ನು ಲಿಮಿಟೆಡ್‌ ಸಂಖ್ಯೆಯಲ್ಲಿ ಇಂಪೋರ್ಟ್‌ ಮಾಡಲಿದ್ದು, ೨೦೨೫ರಿಂದ ಭಾರತದಲ್ಲಿಯೇ ಈ ಕಾರನ್ನು ತಯಾರಿಸುವ ಯೋಜನೆಯನ್ನು ಫೋರ್ಡ್‌ ರೂಪಿಸಲಿದೆ ಎಂದು ತಿಳಿದು ಬಂದಿದೆ.

ಹೊಸ ಫೋರ್ಡ್ ಎವರೆಸ್ಟ್ ಅನ್ನು ಚೆನ್ನೈನಲ್ಲಿ ಟವ್ ಟ್ರಕ್‌ನಲ್ಲಿ ಸಾಗಿಸುವ ದೃಶ್ಯವೊಂದು ಭಾರೀ ವೈರಲ್ ಆಗಿದೆ. ಥೈಲ್ಯಾಂಡ್‌ನಲ್ಲಿ ಈಗಾಗಲೇ ಲಭ್ಯವಿರುವ ಎವರೆಸ್ಟ್‌ ಮಾದರಿಯಾಗಿದೆ. ವರದಿಗಳ ಪ್ರಕಾರ, ಫೋರ್ಡ್ ಎಂಡೀವರ್ (Ford Endeavour) ಕಂಪನಿಯ ಚೆನ್ನೈ ಸ್ಥಾವರದಲ್ಲಿ ಜೋಡಿಸಲಾದ ಕಂಪ್ಲೀಟ್ಲಿ ಬಿಲ್ಟ್ ಅಪ್ (CBU) ಯುನಿಟ್ ಆಗಿ ಭಾರತಕ್ಕೆ ಮರಳಬಹುದು.

Ford Endeavour

ಈ ತಂತ್ರವು ಅದರ ಹಿಂದಿನದಕ್ಕೆ ಹೋಲಿಸಿದರೆ ಹೆಚ್ಚಿನ ಬೆಲೆಗೆ ಕಾರಣವಾಗಬಹುದು. ಫೋರ್ಡ್‌ನ ಇಂಡಿಯಾ ರಿಟರ್ನ್ ಮತ್ತು ಉತ್ಪನ್ನದ ಕಾರ್ಯತಂತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಹೊಸ ಫೋರ್ಡ್ ಎಂಡೀವರ್ ಲ್ಯಾಡರ್-ಫ್ರೇಮ್ ಆರ್ಕಿಟೆಕ್ಚರ್ ಮತ್ತು ಅದರ ಪೂರ್ವವರ್ತಿಯಿಂದ ಕೆಲವು ವಿನ್ಯಾಸ ಅಂಶಗಳನ್ನು ಉಳಿಸಿಕೊಂಡಿದೆ, ಇದು ರೇಂಜರ್‌ನೊಂದಿಗೆ ಕೆಲವು ಸ್ಟೈಲಿಂಗ್ ಸೂಚನೆಗಳನ್ನು ಹಂಚಿಕೊಳ್ಳಲಾಗಿದೆ.

ಇನ್ನು ಗಮನಾರ್ಹ ವೈಶಿಷ್ಟ್ಯಗಳೆಂದರೆ ಇಂಟಿಗ್ರೇಟೆಡ್ ಸಿ-ಆಕಾರದ DRLಗಳೊಂದಿಗೆ ಮ್ಯಾಟ್ರಿಕ್ಸ್ LED ಹೆಡ್‌ಲ್ಯಾಂಪ್‌ಗಳು, ಪರಿಷ್ಕೃತ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ವಿಸ್ತರಿಸಿದ ಮುಂಭಾಗದ ಗ್ರಿಲ್, 21-ಇಂಚಿನ ಅಲಾಯ್ ವ್ಹೀಲ್ ಗಳು, L- ಆಕಾರದ ಟೈಲ್‌ಲ್ಯಾಂಪ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಟೈಲ್‌ಗೇಟ್ ಅನ್ನು ಹೊಂದಿದೆ.

Ford Endeavour

ಅಂತರಾಷ್ಟ್ರೀಯವಾಗಿ, ಹೊಸ ಫೋರ್ಡ್ ಎವರೆಸ್ಟ್ (ಎಂಡೀವರ್) ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 170 bhp ಪವರ್ ಮತ್ತು 405 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಇನ್ನು ಹೆಚ್ಚುವರಿಯಾಗಿ, 2.0-ಲೀಟರ್ ಬೈ-ಟರ್ಬೊ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 210 bhp ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಎಸ್‍ಯುವಿಯು ಆರು ಡ್ರೈವ್ ಮೋಡ್‌ಗಳನ್ನು ನೀಡುತ್ತದೆ ಮತ್ತು 4X2 ಮತ್ತು 4X4 ಡ್ರೈವ್‌ಟ್ರೇನ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, April 13, 2024, 9:15 [IST]
English summary
Ford endeavour will debut indian market as everest reports says
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+