FORD ಭಾರತಕ್ಕೆ ಬಂದರೂ ಮಧ್ಯಮ ವರ್ಗಕ್ಕೆ ಪ್ರಯೋಜನವಿಲ್ಲ: ಇಕೋ ಸ್ಪೋರ್ಟ್‌,ಫೀಗೋ ಮಾರಾಟಕ್ಕಿಲ್ಲ!

ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಸಿದ್ದ ಕಾರು ನಿರ್ಮಾಣ ಕಂಪನಿ ಫೋರ್ಡ್‌ ಸದ್ಯದಲ್ಲೆ ಮತ್ತೆ ಭಾರತಕ್ಕೆ ಬರಲಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಮರಳಿ ಭಾರತಕ್ಕೆ ಬರುವಾಗ ಪ್ರಸಿದ್ದ ಕಾರು ಮಾದರಿಯಾದ ಎಂಡೋವರ್‌ ಅನ್ನು ಎವರೆಸ್ಟ್‌ ಎಂಬ ಹೆಸರಿನಲ್ಲಿ ಭಾರತದಲ್ಲಿ ಲಾಂಚ್ ಮಾಡಲಿದೆ ಎಂಬ ಸುದ್ದಿಯೂ ಹರಿದಾಡಿದೆ.

ಆದರೆ ಭಾರತದಲ್ಲಿನ ಫೋರ್ಡ್ ಕಾರು ಪ್ರೀಯರಿಗೆ ಕೊಂಚ ಅಪ್ರೀಯವಾದ ಸುದ್ದಿಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಈ ಕಂಪನಿಯ ಕಾರು ಪ್ರೀಯರ ಮುಖದಲ್ಲಿ ಇದ್ದ ಮಂದಹಾಸ ಮರೆಯಾಗುವಂತೆ ಮಾಡಿದೆ. ಇಂದಿನ ಈ ಲೇಖನದಲ್ಲಿ ನಾವು ಈ ವಿಷಯದ ಕುರಿತಾಗಿ ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ.

Ford Will Not Bring Back Eco Sport Figo And Aspire Models To India

ಫೋರ್ಡ್‌ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಅವರ ಬೆಸ್ಟ್‌ ಸೆಲ್ಲರ್‌ ಎಂದು ಹೆಸರುವಾಸಿಯಾಗಿದ್ದ ಕಾರುಗಳೆಂದರೆ ಅವು ಫೋರ್ಡ್‌ ಇಕೋ ಸ್ಪೋರ್ಟ್‌,ಫೀಗೋ ಮತ್ತು ಆಸ್ಪೈರ್‌ ಕಾರು ಮಾದರಿಗಳು. ಫೋರ್ಡ್‌ ಭಾರತಕ್ಕೆ ಬರಲಿದೆ ಎಂದು ತಿಳಿದಾಗ ಅನೇಕರು, ಸದ್ಯ ಭಾರತದಲ್ಲಿ ಈ ಕಾರುಗಳೆಲ್ಲಾ ಮತ್ತೆ ಬರಲಿದೆಯಲ್ಲಾ ಎಂದು ಸಂತೋಷಪಟ್ಟಿದ್ದರು. ಆದರೆ ಇದೀಗ ಆ ಆಸೆಗೆ ಕಂಪನಿ ತಣ್ಣೀರೆರೆಚಿದೆ.

ಮಾಹಿತಿಗಳ ಪ್ರಕಾರ ಫೋರ್ಡ್‌ (Ford) ಕಂಪನಿಯು ಭಾರತದಲ್ಲಿ ಫೋರ್ಡ್‌ ಇಕೋ ಸ್ಪೋರ್ಟ್‌, ಪೀಗೋ ಮತ್ತು ಆಸ್ಪೈರ್ ಕಾರುಗಳನ್ನು ಲಾಂಚ್‌ ಮಾಡುತ್ತಿಲ್ಲ. ಈ ಕಾರುಗಳನ್ನು ಇಲ್ಲಿಯೇ ತಯಾರಿಸಲು ಫೋರ್ಡ್ಗೆ ಹೆಚ್ಚಿನ ಹಣ ವ್ಯಯವಾಗಲಿದೆ ಎಂದು ತಿಳಿದು ಬಂದಿದೆ. ಫೋರ್ಡ್‌ ಕಂಪನಿಯು T6 ಪ್ಲಾಟ್‌ಫಾರ್ಮ್‌ನಲ್ಲಿರುವ ವಾಹನಗಳನ್ನು ಮಾತ್ರ ಭಾರತದಲ್ಲಿ ಲಾಂಚ್ ಮಾಡಲಿದೆ ಎಂದು ತಿಳಿದು ಬಂದಿದೆ.

Ford Will Not Bring Back Eco Sport Figo And Aspire Models To India

ಈ T6 ಪ್ಲಾಟ್‌ಫಾರ್ಮ್‌ನಲ್ಲಿ ಎಂಡೋವರ್‌ ಸಹ ಒಂದು. ಈ ಕಾರಿನ ಬಗ್ಗೆ ಮಾತನಾಡುವುದಾದರೆ, ವರದಿಗಳ ಪ್ರಕಾರ ಫೋರ್ಡ್‌ ಭಾರತಕ್ಕೆ ಬರುವಾಗ ಇದರ ಎಂಡೀವರ್‌ (Ford Endeavour) ಕಾರು ಮಾದರಿಯ ಹೆಸರು ಎವರೆಸ್ಟ್‌ ಎಂದು ಬದಲಾಗಲಿದೆ. ದ್ಯಕ್ಕೆ ಪೋರ್ಡ್‌ ಭಾರತಕ್ಕೆ ಈ ಕಾರು ಮಾದರಿಯನ್ನು ಲಿಮಿಟೆಡ್‌ ಸಂಖ್ಯೆಯಲ್ಲಿ ಇಂಪೋರ್ಟ್‌ ಮಾಡಲಿದ್ದು, ೨೦೨೫ರಿಂದ ಭಾರತದಲ್ಲಿಯೇ ಈ ಕಾರನ್ನು ತಯಾರಿಸುವ ಯೋಜನೆಯನ್ನು ಫೋರ್ಡ್‌ ರೂಪಿಸಲಿದೆ ಎಂದು ತಿಳಿದು ಬಂದಿದೆ.

ಫೋರ್ಡ್ ಎವರೆಸ್ಟ್ ಅನ್ನು ಚೆನ್ನೈನಲ್ಲಿ ಟವ್ ಟ್ರಕ್‌ನಲ್ಲಿ ಸಾಗಿಸುವ ದೃಶ್ಯವೊಂದು ಭಾರೀ ವೈರಲ್ ಆಗಿದೆ. ಥೈಲ್ಯಾಂಡ್‌ನಲ್ಲಿ ಈಗಾಗಲೇ ಲಭ್ಯವಿರುವ ಎವರೆಸ್ಟ್‌ ಮಾದರಿಯಾಗಿದೆ. ವರದಿಗಳ ಪ್ರಕಾರ, ಫೋರ್ಡ್ ಎಂಡೀವರ್ (Ford Endeavour) ಕಂಪನಿಯ ಚೆನ್ನೈ ಸ್ಥಾವರದಲ್ಲಿ ಜೋಡಿಸಲಾದ ಕಂಪ್ಲೀಟ್ಲಿ ಬಿಲ್ಟ್ ಅಪ್ (CBU) ಯುನಿಟ್ ಆಗಿ ಭಾರತಕ್ಕೆ ಮರಳಬಹುದು.

Ford Will Not Bring Back Eco Sport Figo And Aspire Models To India

ಅಂತರಾಷ್ಟ್ರೀಯವಾಗಿ, ಹೊಸ ಫೋರ್ಡ್ ಎವರೆಸ್ಟ್ (ಎಂಡೀವರ್) ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 170 bhp ಪವರ್ ಮತ್ತು 405 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಇನ್ನು ಹೆಚ್ಚುವರಿಯಾಗಿ, 2.0-ಲೀಟರ್ ಬೈ-ಟರ್ಬೊ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 210 bhp ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಎಸ್‍ಯುವಿಯು ಆರು ಡ್ರೈವ್ ಮೋಡ್‌ಗಳನ್ನು ನೀಡುತ್ತದೆ ಮತ್ತು 4X2 ಮತ್ತು 4X4 ಡ್ರೈವ್‌ಟ್ರೇನ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, May 8, 2024, 13:19 [IST]
English summary
Ford will not bring back eco sport figo and aspire models to india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+