ಅಕ್ಟೋಬರ್ 1ರಿಂದ ಷೆವರ್ಲೆ ಕಾರುಗಳು ದುಬಾರಿ

ಷೆವರ್ಲೆ ಬ್ರಾಂಡಿನಡಿ ಮಾರಾಟ ಮಾಡುವ ಕಾರುಗಳ ದರಗಳನ್ನು ಹೆಚ್ಚಿಸುವುದಾಗಿ ಜನರಲ್ ಮೋಟರ್ಸ್ ಇಂಡಿಯಾ ಪ್ರಕಟಿಸಿದೆ. ವಾಹನ ಬಿಡಿಭಾಗಗಳು, ಕಚ್ಚಾ ವಸ್ತುಗಳ ದರ ಏರಿಕೆ ಮತ್ತು ಕರೆನ್ಸಿ ಏರಿಳಿತ ದರ ಹೆಚ್ಚಳಕ್ಕೆ ಕಾರಣವೆಂದು ಕಂಪನಿ ತಿಳಿಸಿದೆ.

"ಅಕ್ಟೋಬರ್ ಒಂದರಿಂದ ಅನ್ವಯವಾಗುವಂತೆ ಕಾರುಗಳ ದರವನ್ನು ಹೆಚ್ಚಿಸಲಾಗುವುದು" ಎಂದು ಜನರಲ್ ಮೋಟರ್ಸ್ ಇಂಡಿಯಾ ಉಪಾಧ್ಯಕ್ಷರಾದ ಪಿ. ಬಾಲೆಂದ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಣ್ಣ ಕಾರು ಷೆವರ್ಲೆ ಸ್ಪಾರ್ಕಿನಿಂದ, ಹೈ ಎಂಡ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಷೆವರ್ಲೆ ಕ್ಯಾಪ್ಟಿವಾದವರೆಗೆ ಎಲ್ಲಾ ಕಾರುಗಳ ದರವನ್ನು ಹೆಚ್ಚಿಸುವುದಾಗಿ ಕಂಪನಿ ತಿಳಿಸಿದೆ. ಷೆವರ್ಲೆ ಸ್ಪಾರ್ಕ್ ದರ 2.85 ಲಕ್ಷ ರು.ನಿಂದ ಆರಂಭವಾದರೆ ಕ್ಯಾಪ್ಟಿವಾ ದರ 24.6 ಲಕ್ಷ ರು. ಇದೆ.

ಈಗಾಗಲೇ ಮಾರುತಿ ಸುಜುಕಿ ಮತ್ತು ಹೋಂಡಾ ಕಂಪನಿಗಳು ಈಗಾಗಲೇ ಕಾರು ದರ ಹೆಚ್ಚಳ ಪ್ರಕಟಿಸಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರು ಕಂಪನಿಗಳು ವಾಹನಗಳ ದರ ಹೆಚ್ಚಳ ಪ್ರಕಟಿಸುವ ನಿರೀಕ್ಷೆಯಿದೆ.

ಹಬ್ಬದ ವೇಳೆಗೆ ಕಾರು ದರ ಇಳಿಮುಖವಾಗಬಹುದೆಂದು ನಿರೀಕ್ಷಿಸುತ್ತಿದ್ದವರಿಗೆ ನಿರಾಶೆ ಖಚಿತ.

Most Read Articles

Kannada
English summary
General Motors India announced to hike all Chevrolet brand cars Price from October 1st.
Story first published: Friday, September 28, 2012, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X