ಪ್ರೀತಿ ಹುಚ್ಚಿಗೆ ಕೆಂಪಾದವೋ ಎಲ್ಲಾ ಕೆಂಪಾದವೋ..

ಪ್ರೇಮಿಗಳ ದಿನ ಸನಿಹದಲ್ಲಿದೆ. ಕೆಂಪು ರಕ್ತದ ಚಲನೆ ವೇಗ ಪಡೆದುಕೊಳ್ಳುವ ಸಮಯವಿದು. ಕೆಲವರಿಗೆ ಕೆಂಪು ಪ್ರೀತಿ, ಇನ್ನೂ ಕೆಲವರಿಗೆ ಕೆಂಪು ಭೀತಿ. ಆಕೆ ಉಟ್ಟ ಕೆಂಪು ಬಣ್ಣದ ಸೆಲ್ವಾರ್ ಕಮೀಜ್, ಅವನ ಕೆಂಪು ಅಂಗಿ ಎಲ್ಲವೂ ಪ್ರೀತಿಯ ಸಂಕೇತಗಳು.
ಪ್ರೇಮಿಗಳ ದಿನಕ್ಕೆ ಒನ್ ಇಂಡಿಯಾವೂ ಸಜ್ಜಾಗಿದೆ. ಓದುಗರಿಂದಲೇ ಲವ್ ಲೆಟರ್ ಬರೆಸಿ ಜಗತ್ತಿನ ಮುಂದೆ ಇಡುತ್ತಿದೆ. ಆದರೆ ಬರೀ ಕಾರು ಬೈಕು ಜೀಪು ಲಾರಿ ಟ್ರಕ್ಕು ಬೈಸಿಕಲ್ ಬಗ್ಗೆ ಮಾತನಾಡುವ ಕನ್ನಡ ಡ್ರೈವ್ ಸ್ಪಾರ್ಕಿಗೂ ಹೃದಯವಿದೆ. ಅಲ್ಲೂ ಪ್ರೀತಿಯ ಮಿಡಿತವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹಾರ್ಸ್ ಪವರ್ ಇದೆ
ಪ್ರೇಮಿಗಳ ದಿನಕ್ಕೆ ಕೆಂಪು ಗುಲಾಬಿ, ಕೆಂಪು ಕೇಕ್, ಕೆಂಪು ಬೊಂಬೆ ಕೊಟ್ಟರೆ ಸಾಕೇ? ನಾವು ನಿಮಗೆ ಹತ್ತು ಕೆಂಪು ಕಾರುಗಳನ್ನು ಪರಿಚಯಿಸುತ್ತೇವೆ. ಇದರ ದರ ದುಬಾರಿಯಾಗಿರಬಹುದು. ಬೆಲೆಕಟ್ಟಲಾಗದ ಪ್ರೀತಿಯ ಮುಂದೆ ಇದು ಗೌಣವೆಂದು ನಾವು ಹೇಳುತ್ತಿಲ್ಲ.
ಈ ಪ್ರೇಮಿಗಳ ದಿನದ ಸಂಭ್ರಮದಲ್ಲಿ ಹತ್ತು ಕೆಂಪು ಕಾರುಗಳ ಪರಿಚಯ ಮಾಡಿಕೊಳ್ಳೋಣ. ಓಹ್ ಪ್ರೇಮಿಗಳ ದಿನಕ್ಕೆ ಇನ್ನೂ ಟೈಂ ಇದೆಯಲ್ವ? ಸರಿ ದಿನಕ್ಕೆ ಒಂದು ಅಥವಾ ಎರಡು ಕಾರುಗಳನ್ನು ನಾಳೆಯಿಂದ ಈ ಮಾಲಿಕೆಯಲ್ಲಿ ನೀವು ಓದಲಿದ್ದೀರಿ.


Click it and Unblock the Notifications








