ಒಲಿಂಪಿಕ್ ಪದಕ ವೀರರಿಗೆ ಆಡಿ ಕ್ಯೂ5 ಅದ್ದೂರಿ ಕಾರು

ಹರ್ಯಾಣ, ಆ 28: ಲಂಡನ್ ಒಲಿಂಪಿಕ್ಸ್ 2012ರಲ್ಲಿ ದೇಶಕ್ಕೆ ಪದಕ ಗಳಿಸಿಕೊಟ್ಟ ರಾಜ್ಯದ ವಿಜೇತರಿಗೆ ಡಿಎಲ್ಎಫ್ ಕಂಪನಿಯು ರಾಜ್ಯ ಸರಕಾರದ ಸಹಯೋಗದೊಂದಿಗೆ ಆಡಿ ಕ್ಯೂ5 ಕಾರುಗಳನ್ನು ವಿತರಿಸಲಿದೆ. ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ ಪದಕ ಪಡೆಯದ ಕ್ರೀಡಾಳುಗಳಿಗೂ ಮಾರುತಿ ಎಸ್ಎಕ್ಸ್4 ಕಾರನ್ನು ಡಿಎಲ್ಎಫ್ ನೀಡಲಿದೆ.

ಕುಸ್ತಿ ಪಂದ್ಯದಲ್ಲಿ ಪದಕ ಪಡೆದ ಸುಶೀಲ್ ಕುಮಾರ್, ಯೋಗೇಶ್ವರ್ ದತ್, ಬ್ಯಾಂಡ್ಮಿಟನ್ ತಾರೆ ಸೈನಾ ನೆಹ್ವಾಲ್ ಮತ್ತು ಶೂಟರ್ ಗಗನ್ ನಾರಂಗ್ ಗೆ ದೇಶದ ಬೃಹತ್ ರಿಯಾಲ್ಟಿ ಕಂಪನಿ ಡಿಎಲ್ಎಫ್, ಸರಕಾರದ ಸಹಯೋಗದೊಂದಿಗೆ ಆಡಿ ಅದ್ದೂರಿ ಕಾರನ್ನು ಉಡುಗೊರೆಯಾಗಿ ನೀಡಲಿದೆ.

ಇಷ್ಟು ಮಾತ್ರವಲ್ಲದೆ ಉಳಿದ ಸುಮಾರು 15 ಕ್ರೀಡಾಳುಗಳಿಗೆ ಮಾರುತಿ ಸುಜುಕಿ ಎಸ್ಎಕ್ಸ್4 ಕಾರುಗಳನ್ನು ಕಂಪನಿಯು ನೀಡಲಿದೆ. ಇವರೆಲ್ಲರೂ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಪದಕ ಪಡೆಯಲು ವಿಫಲರಾಗಿದ್ದರು.

ಮುಂದಿನ ಬಾನುವಾರ ಗೊಹಾನದಲ್ಲಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಕಾರುಗಳ ಕೀಲಿಕೈ ಹಸ್ತಾಂತರಿಸಲಿದ್ದಾರೆ. ಪ್ರಸಕ್ತ ವರ್ಷ ಒಲಿಂಪಿಕ್ಸ್ ನಲ್ಲಿ ದೇಶವು ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ ಪಡೆದಿದೆ.

ಒಲಿಂಪಿಕ್ಸ್ ಬ್ಯಾಂಡ್ಮಿಟನ್ ಪಂದ್ಯಾವಳಿಯಲ್ಲಿ ದೇಶಕ್ಕೆ ಪ್ರಪ್ರಥಮ ಪದಕ ಗಳಿಸಿಕೊಟ್ಟ ಸೈನಾ ಇತ್ತೀಚೆಗೆ ಹೈದರಾಬಾದಿನಲ್ಲಿ ಬಿಎಂಡಬ್ಲ್ಯು ಕಾರೊಂದನ್ನು ಸಚಿನ್ ಕೈನಲ್ಲಿ ಪಡೆದಿದ್ದರು. ಆಂಧ್ರ ಬ್ಯಾಡ್ಮಿಂಟನ್ ಸಂಸ್ಥೆಯ ಉಪಾಧ್ಯಕ್ಷ ಚಾಮುಂಡೇಶ್ವರಿ ನಾಥ್ ಈ ಉಡುಗೊರೆ ನೀಡಿದ್ದರು.

More from DriveSpark

Article Published On: Tuesday, August 28, 2012, 8:04 [IST]
English summary
Olympic medalists from Haryana wrestlers Sushil Kumar and Yogeshwar Dutt, badminton star Saina Nehwal and shooter Gagan Narang will get Audi Q5s for bringing laurels to the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+