ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ

ಪ್ರಸಕ್ತ ವರ್ಷದ ಜೂನ್ ಹದಿನೈದರೊಳಗೆ ಎಚ್ಎಸ್ಆರ್ಪಿ ಜಾರಿಗೊಳಿಸಿ ಅಥವಾ ನ್ಯಾಯಾಂಗ ನಿಂದನೆ ಆಪಾದನೆ ಎದುರಿಸಲು ಸಜ್ಜಾಗಿ ಎಂದು ಕೋರ್ಟ್ ರಾಜ್ಯಗಳಿಗೆ ಎಚ್ಚರಿಕೆಯ ಗಡವು ನೀಡಿದೆ.
ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ, ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ಮತ್ತು ಶ್ವೇತಂತರ್ ಕುಮಾರ್ ತ್ರಿಸದಸ್ಯ ಪೀಠವು ಈಗಾಗಲೇ ಆಂದ್ರಪ್ರದೇಶದ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ ಲಕ್ಷ್ಮಿ ಪಾರ್ಥಸಾರಥಿ ಮತ್ತು ಸಾರಿಗೆ ಆಯುಕ್ತ ಹಿರಲಾಲ್ ಸಮರಿಯಾರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಲು ಹಲವು ಬಾರಿ ಸುಪ್ರಿಂ ಕೋರ್ಟ್ ಸೂಚಿಸಿತ್ತು. "1950ರಲ್ಲಿ ಭಾರತ ಸಂವಿಧಾನದ 129ನೇ ಪರಚ್ಛೇಧಕ್ಕೆ ಅನುಗುಣವಾಗಿ ಎಚ್ ಎಸ್ಆರ್ಪಿ ಯೋಜನೆ ಆರಂಭಿಸುವುದು ಕೇವಲ ಭದ್ರತಾ ದೃಷ್ಟಿಯಿಂದ ಮಾತ್ರವಲ್ಲದೇ, ಸಾರ್ವಜನಿಕ ಹಿತದೃಷ್ಟಿಯಿಂದಲೂ ಅತ್ಯಂತ ಅಗತ್ಯ" ಎಂದು ಕೋರ್ಟ್ ತಿಳಿಸಿದೆ.
"ಈ ವರ್ಷದ ಏಪ್ರಿಲ್ 30ರಿಂದ ಹೊಸ ವಾಹನಗಳಿಗೆ ಮತ್ತು ಜೂನ್ ಹದಿನೈದರಿಂದ ಎಲ್ಲಾ ವಾಹನಗಳಿಗೂ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್" ಕಡ್ಡಾಯವಾಗಿ ಅಳವಡಿಸಬೇಕು. ಈ ಯೋಜನೆ ಅಳವಡಿಕೆಗೆ ಯಾವುದೇ ಸಮಯ ವಿಸ್ತರಣೆ ಮತ್ತು ನೆಪಗಳನ್ನು ಯಾವ ರಾಜ್ಯವೂ ತಿಳಿಸಬಾರದು" ಎಂದು ತೀರ್ಪಿನಲ್ಲಿ ನ್ಯಾಯಮೂರ್ತಿ ಕುಮಾರ್ ಷರಾ ಬರೆದಿದ್ದಾರೆ.
"ನಿಗದಿತ ಸಮಯಕ್ಕೆ ಈ ಯೋಜನೆ ಅನುಷ್ಠಾನ ಸಾಧ್ಯವಾಗದಿದ್ದರೆ ಸಾರಿಗೆ ವಿಭಾಗದ ಕಾರ್ಯದರ್ಶಿ, ಆಯುಕ್ತ, ರಾಜ್ಯ ಸಾರಿಗೆ ಆಡಳಿತ ಮತ್ತು ಈ ವಿಭಾಗಕ್ಕೆ ಸಂಬಂಧಿಸಿದ ವ್ಯಕ್ತಿ ಅಥವಾ ಸಂಸ್ಥೆ ಮೇಲೆ 1971ರ ನ್ಯಾಯಾಂಗ ನಿಂದನೆ ಆರೋಪಕ್ಕೆ ಪಾತ್ರರಾಗಲು ಸಿದ್ಧವಾಗಬೇಕು" ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ ಎಂದರೇನು? ಈ ಮಾಹಿತಿಯನ್ನು ಶೀಘ್ರದಲ್ಲಿ ಕನ್ನಡ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದಿಡಲಿದೆ.


Click it and Unblock the Notifications








