ಹೋಂಡಾ ಅಕಾರ್ಡ್ ಭವಿಷ್ಯದ ಕುರಿತು ಡೌಟ್!

ಇತ್ತೀಚೆಗೆ ಹೋಂಡಾ ಫ್ಯಾಕ್ಟರಿಯಿಂದ ಮುಂದಿನ ತಲೆಮಾರಿನ ಹೊಸ ಅಕಾರ್ಡ್ ಕಾರು ಆಗಮಿಸಿತ್ತು. ಶೀಘ್ರದಲ್ಲಿ ಅಕಾರ್ಡ್ ಮಾರಾಟ ಆರಂಭಿಸುವುದಾಗಿಯೂ ಕಂಪನಿ ಹೇಳಿದೆ. ಆದರೆ ಡ್ರೈವ್ ಸ್ಪಾರ್ಕ್ ವಿಶ್ಲೇಷಕರು ಅಕಾರ್ಡ್ ಭವಿಷ್ಯದ ಕುರಿತು ಸಂದೇಹ ವ್ಯಕ್ತಪಡಿಸಿದ್ದಾರೆ.

ದೇಶದ ಜನರಿಗೆ ಅಕಾರ್ಡ್ ಕಾರು ಅಷ್ಟೇನೂ ಇಷ್ಟವಾದಂತೆ ಕಾಣುತ್ತಿಲ್ಲವೆನ್ನುವುದಕ್ಕೆ ಪ್ರತಿತಿಂಗಳು ಬೆರಳೆಣಿಕೆಯ ಸಂಖ್ಯೆಯ ಅಕಾರ್ಡ್ ಮಾರಾಟವೇ ಸಾಕ್ಷಿ. ಇದೇ ಕಾರಣಕ್ಕೆ ಕಂಪನಿಯು ಹೊಸ ಆವೃತ್ತಿ ಪರಿಚಯಿಸಿದೆ.

ಪೆಟ್ರೋಲ್ ದರ ದುಬಾರಿಯಾಗಿರುವುದರಿಂದ ಪೆಟ್ರೋಲ್ ಕಾರು ಹೆಚ್ಚಿನ ಜನರಿಗೆ ಅಚ್ಚುಮೆಚ್ಚಾಗಿ ಉಳಿದಿಲ್ಲ. ಇದು ಹೋಂಡಾ ಪ್ರೀಮಿಯಂ ಪೆಟ್ರೋಲ್ ಕಾರುಗಳ ಮಾರಾಟಕ್ಕೂ ಹೊಡೆತ ನೀಡಿದೆ.

ಇದೀಗ ಹೋಂಡಾ ಕೂಡ ಮಾರುತಿ ಇಟ್ಟಂತಹ ಹೆಜ್ಜೆಯನ್ನೇ ಇಡಲು ನಿರ್ಧರಿಸಿದೆ. ಮಾರುತಿ ಇತ್ತೀಚಿನವರೆಗೆ ಸಣ್ಣಕಾರು ಮಾರಾಟವನ್ನೇ ನಂಬಿಕೊಂಡಿತ್ತು. ಹೋಂಡಾ ಕೂಡ ಪ್ರೀಮಿಯಂ ಸಣ್ಣಕಾರುಗಳನ್ನು ಮುಂದಿನ ವರ್ಷ ಪರಿಚಯಿಸುವ ನಿರೀಕ್ಷೆಯಿದೆ.

ಹೋಂಡಾ ಕಂಪನಿಯು ಶೀಘ್ರದಲ್ಲಿ ಸಿವಿಕ್ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿತ್ತು. ಹೋಂಡಾ ಸಿವಿಕ್ ಮತ್ತು ಅಕಾರ್ಡ್ ಕಾರುಗಳನ್ನು ದೇಶಕ್ಕೆ ಸಿಕೆಡಿ ಹಾದಿ ಮೂಲಕ ಆಮದು ಮಾಡಿಕೊಳ್ಳಲಾಗುತ್ತದೆ. ಇದರಿಂದ ಇದರ ದರ ದುಬಾರಿಯಾಗಿದೆ.

ಭವಿಷ್ಯದಲ್ಲಿ ಹೋಂಡಾ ಡೀಸೆಲ್ ಕಾರುಗಳತ್ತ ಹೊರಳುವ ನಿರೀಕ್ಷೆಯಿದೆ. ಈಗಾಗಲೇ ಕಂಪನಿಯು ಅರ್ಥ್ ಡ್ರೀಮ್ಸ್ ಯೋಜನೆ ಹಾಕಿಕೊಂಡಿದೆ. ಬ್ರಿಯೊ ಮತ್ತು ಜಾಝ್ ಕಾರುಗಳ ಡೀಸೆಲ್ ಆವೃತ್ತಿ ಆಗಮಿಸಲಿದೆ.

ಓದಿ: 2013 ಹೋಂಡಾ ಅಕಾರ್ಡ್ ಅಫಿಷಿಯಲ್ ಚಿತ್ರ ಬಹಿರಂಗ

More from DriveSpark

Article Published On: Thursday, September 6, 2012, 9:49 [IST]
English summary
Recently Honda unveiled the next generation Accord. The next generation accord is slated to go on sale shortly. On the other hand, its future is on thin ice in India. Most likely Indian's will not witness or get to drive the next generation Honda Accord. Drivespark looks deeper into this episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+