ಶೀಘ್ರದಲ್ಲಿ ಹೋಂಡಾ ಸಿಟಿ ಸೆಡಾನ್ ಸಿಎನ್ಜಿ ಆವೃತ್ತಿ ರಸ್ತೆಗೆ
ಈಗ ಹೋಂಡಾ ಸಿಟಿ ಪೆಟ್ರೋಲ್ ಆವೃತ್ತಿಯು ಹೆಚ್ಚಿನ ಜನರನ್ನು ಸೆಳೆಯುತ್ತಿಲ್ಲ. ಹೀಗಾಗಿ ಕಂಪನಿಯು ಡೀಸೆಲ್ ಆವೃತ್ತಿಯನ್ನು ಪರಿಚಯಿಸಲು ಯೋಜಿಸಿದೆ. ಆದರೆ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸಲು ಸಾಕಷ್ಟು ಸಮಯ ಹಿಡಿಯುತ್ತದೆ. ಇದೇ ಕಾರಣಕ್ಕೆ ಕಂಪನಿಯು ಶೀಘ್ರದಲ್ಲಿ ಸಿಎನ್ಜಿ ಸಿಟಿ ಆವೃತ್ತಿಯನ್ನು ಪರಿಚಯಿಸಲು ಯೋಜಿಸಿದೆ.
ನೂತನ ಹೋಂಡಾ ಸಿಟಿ ಸಿಎನ್ಜಿ ಆವೃತ್ತಿಯು ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳಲ್ಲಿ ಆಗಮಿಸುವ ನಿರೀಕ್ಷೆಯಿದೆ. ಡೀಸೆಲ್ ಚಾಲಿತ ಹೋಂಡಾ ಸಿಟಿ ಮುಂದಿನ ವರ್ಷದಲ್ಲಿ ಆಗಮಿಸುವ ಸಾಧ್ಯತೆಯಿದೆ. ನೂತನ ಸಿಎನ್ಜಿ ಆವೃತ್ತಿಯ ಸಿಟಿ ಕಾರಿಗೆ ಗ್ರಾಹಕರಿಂದ ಕೊಂಚ ಬೇಡಿಕೆ ಬರುವ ನಿರೀಕ್ಷೆಯಿದೆ. ಆದರೆ ದೇಶದಲ್ಲಿ ಕಡಿಮೆ ನಗರಗಳಲ್ಲಿ ಮಾತ್ರ ಸಿಎನ್ಜಿ ಜನಪ್ರಿಯವಾಗಿದೆ.
ಕೆಲವು ಸಮಯದ ಹಿಂದೆಯೇ ಕಂಪನಿಯು ಸಿಎನ್ಜಿ ಸಿಟಿ ಅಭಿವೃದ್ಧಿಪಡಿಸಲು ಆರಂಭಿಸಿದೆ. ಇದು ಈಗ ರಸ್ತೆಯಲ್ಲಿರುವ ಸಿಟಿ ಕಾರಿನ ಐ-ವಿಟೆಕ್ ಪೆಟ್ರೋಲ್ ಎಂಜಿನನ್ನೇ ಹೊಂದಿರಲಿದೆ.
ಇತ್ತೀಚೆಗೆ ಹೋಂಡಾ ಕಂಪನಿಯು ಸಿಟಿ ಸೆಡಾನ್ ಕಾರಿನ ಆಟೋಮ್ಯಾಟಿಕ್ ಆವೃತ್ತಿಯನ್ನು ಪರಿಚಯಿಸಿತ್ತು. ಈಗ ಆಟೋಮ್ಯಾಟಿಕ್ ಗೇರ್ ಕಾರುಗಳಿಗೆ ಬೇಡಿಕೆಯಿರುವ ಹಿನ್ನಲೆಯಲ್ಲಿ ಕಂಪನಿಯು ಈ ಕಾರನ್ನು ಮರುಪರಿಚಯಿತ್ತು,


Click it and Unblock the Notifications









