ಮತ್ತೆ, ಮಗದೊಮ್ಮೆ ಹೋಂಡಾ ಸಿಟಿ ದರ ಹೆಚ್ಚಳ

ಕಳೆದ ವಾರ ಕಂಪನಿಯು ಸಿಟಿ ಸೆಡಾನ್ ದರವನ್ನು 5 ಸಾವಿರ ರು.ನಿಂದ 10 ಸಾವಿರ ರು.ವರೆಗೆ ಏರಿಕೆ ಮಾಡಿತ್ತು, ಇದರಿಂದ ದೆಹಲಿ ಎಕ್ಸ್ ಶೋರೂಂನಲ್ಲಿ ಸಿಟಿ ದರ 7.1 ಲಕ್ಷ ರು.ನಿಂದ 10.33 ಲಕ್ಷ ರು.ವರೆಗೆ ಏರಿಕೆ ಕಂಡಿತ್ತು.
"ಸಂಪೂರ್ಣ ದರ ಹೆಚ್ಚಳ ಮಾಡುವ ಸಲುವಾಗಿ ಕಂಪನಿಯು ಎಲ್ಲಾ ಸಿಟಿ ಆವೃತ್ತಿಗಳ ದರವನ್ನು 8-10 ಸಾವಿರ ರು. ಏರಿಕೆ ಮಾಡಲು ನಿರ್ಧರಿಸಿದ್ದೇವೆ" ಎಂದು ಕಂಪನಿಯ ಮಾರಾಟ ವಿಭಾಗದ ಉಪಾಧ್ಯಕ್ಷ ಜ್ಞಾನೇಶ್ವರ ಸೇನ್ ಹೇಳಿದ್ದಾರೆ.
2012-13ನೇ ಸಾಲಿನ ಕೇಂದ್ರ ಬಜೆಟಿನಲ್ಲಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅಬಕಾರಿ ಸುಂಕವನ್ನು ಶೇಕಡ 10ರಿಂದ ಶೇಕಡ 12ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಿದ್ದರು. ಕಂಪನಿಯು ಸಿಟಿ ಮಾತ್ರವಲ್ಲದೇ ಹೋಂಡಾ ಬ್ರಿಯೊ ದರವನ್ನು 4 ಸಾವಿರ ರು.ನಿಂದ 10 ಸಾವಿರ ರು.ವರೆಗೆ ಏರಿಕೆ ಮಾಡಿತ್ತು. ಜಾಝ್ ಕೂಡ 15 ಸಾವಿರ ರು.ವರೆಗೆ ದುಬಾರಿಯಾಗಿತ್ತು. ಸಿವಿಕ್ ದರ 45 ಸಾವಿರ ರು.ವರೆಗೆ ಮತ್ತು ಸೆಡಾನ್ ಅಕಾರ್ಡ್ ದರ 93,975 ರು.ವರೆಗೆ ಹೆಚ್ಚಾಗಿತ್ತು. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








