ಬ್ರಿಯೊ ಪ್ಲಾಟ್‌ಫಾರ್ಮ್‌ನಲ್ಲಿ ಹೋಂಡಾ ಎಂಪಿವಿ

ಹೋಂಡಾ ಫ್ಯಾಕ್ಟರಿಯಲ್ಲಿ ಹೊಸ ಮಲ್ಟಿ ಪರ್ಪೊಸ್ ವೆಹಿಕಲ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಕಂಪನಿಯು ದೇಶಕ್ಕೆ ಇತ್ತೀಚೆಗೆ ಪರಿಚಯಿಸಿದ ಬ್ರಿಯೊ ಪ್ಲಾಟ್ ಫಾರ್ಮಿನಲ್ಲಿ ನೂತನ ಎಂಪಿವಿ ಅಭಿವೃದ್ಧಿಪಡಿಸುತ್ತಿದೆಯಂತೆ. ನೂತನ ಎಂಪಿವಿ ಪ್ರಾಜೆಕ್ಟಿಗೆ ಕಂಪನಿಯು 2ಎನ್ಎಚ್ ಎಂದು ಹೆಸರಿಟ್ಟಿದೆ. ಈ ಪ್ರಾಜೆಕ್ಟ್ ಇಂಡೋನೇಷ್ಯದಲ್ಲಿ ನಡೆಯುತ್ತಿದೆ.

ನೂತನ ಬ್ರಿಯೊ ಆಧರಿತ ಎಂಪಿವಿಯನ್ನು ಕಂಪನಿಯು ಏಷ್ಯಾ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸುತ್ತಿದೆ. ಇದರ ದರವೂ ಕಡಿಮೆ ಇರುವ ನಿರೀಕ್ಷೆಯಿದೆ. ಈ ಎಂಪಿವಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸುವ ಕುರಿತು ಹೋಂಡಾ ಸೂಚನೆ ನೀಡಿಲ್ಲ.

ಎಂಪಿವಿ ಬೇಡಿಕೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ದೇಶಕ್ಕೂ ಹೋಂಡಾ ಎಂಪಿವಿ ಆಗಮಿಸುವ ಸಾಧ್ಯತೆಯಿದೆ. ಈಗಾಗಲೇ ಟೊಯೊಟಾ ಇನ್ನೋವಾ ಮತ್ತು ಮಾರುತಿ ಎರ್ಟಿಗಾ ದೇಶದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಹೋಂಡಾ ಕಂಪನಿಯು ನೂತನ ಎಂಪಿವಿಯನ್ನು ಇಂಡೋನೇಷ್ಯಾದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇಂಡೋನೇಷ್ಯಾದಲ್ಲಿ ಎಂಪಿವಿಗಳಿಗೆ ಅತ್ಯಧಿಕ ಬೇಡಿಕೆಯಿದೆ. ಕಂಪನಿಯು ನೂತನ ಎಂಪಿವಿಗೆ ಶೇಕಡ 50ರಷ್ಟು ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಮಾರುತಿ ಸುಜುಕಿ ಕಂಪನಿಯು ಇತ್ತೀಚೆಗೆ ಎರ್ಟಿಗಾ ಪರಿಚಯಿಸಿದ ನಂತರ ಹೆಚ್ಚಿನ ಕಂಪನಿಗಳು ಎಂಪಿವಿ ಮಾರುಕಟ್ಟೆ ಕುರಿತು ಗಂಭೀರವಾಗಿವೆ. ನಿಸ್ಸಾನ್ ಕಂಪನಿಯು ಇವಲಿಯಾ ಎಂಬ ಎಂಪಿವಿಯನ್ನು ಶೀಘ್ರದಲ್ಲಿ ಪರಿಚಯಿಸಲು ನಿರ್ಧರಿಸಿದೆ. ರೆನೊ ಕಂಪನಿಯು ಡಸ್ಟರ್ ಎಂಬ ಎಂಪಿವಿ ಪರಿಚಯಿಸಲಿದೆ. ಅಶೋಕ್ ಲೇಲ್ಯಾಂಡ್ ಕಂಪನಿಯು ಫ್ಲೈಟ್ ಎಂಪಿವಿ ಪರಿಚಯಿಸುವ ಇಂಗಿತ ವ್ಯಕ್ತಪಡಿಸಿದೆ.

ಇಷ್ಟೇಲ್ಲ ಕಾರು ಕಂಪನಿಗಳು ಎಂಪಿವಿ ಮಾರುಕಟ್ಟೆಗೆ ಲಗ್ಗೆಯಿಡಲು ಯೋಜಿಸಿದ ಸಂದರ್ಭದಲ್ಲಿ ಹೋಂಡಾ ಕಂಪನಿ ಎಂಪಿವಿ ಅಭಿವೃದ್ಧಿಪಡಿಸಿರುವುದರಲ್ಲಿ ಯಾವುದೇ ವಿಶೇಷತೆಯಿಲ್ಲ. ಆದರೆ ಕಂಪನಿಯು ಬ್ರಿಯೊ ಪ್ಲಾಟ್ ಫಾರ್ಮಿನಲ್ಲಿ ಎಂಪಿವಿ ಹೊರತರುವುದು ಕೊಂಚ ಅಚ್ಚರಿಯ ವಿಷಯ. ಬಹುಶಃ ನೂತನ ಎಂಪಿವಿ ಸಣ್ಣದಾಗಿರಲಿದ್ದು, ಬೃಹತ್ ಎಂಜಿನ್ ಹೊಂದಿರುವುದು ಸಂಶಯ.

ಕಂಪನಿಯು ನೂತನ ಎಂಪಿವಿಯನ್ನು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆಯ್ಕೆಯಲ್ಲೂ ಪರಿಚಯಿಸಲಿದೆಯೇ ಎನ್ನುವ ಕುರಿತು ಖಚಿತತೆಯಿಲ್ಲ. ಕಂಪನಿಯು ಇಲ್ಲಿವರೆಗೆ ದೇಶಕ್ಕೆ ಡೀಸೆಲ್ ಕಾರು ಪರಿಚಯಿಸಿಲ್ಲ. ಆದರೆ ಕಂಪನಿಯು ಇದೀಗ ಡೀಸೆಲ್ ಎಂಜಿನ್ ಕುರಿತು ಗಂಭೀರವಾಗಿ ಆಲೋಚಿಸುತ್ತಿದ್ದು, ನೂತನ ಎಂಪಿವಿ ಕೂಡ ಡೀಸೆಲ್ ಎಂಜಿನ್ ಹೊಂದಿರುವ ನಿರೀಕ್ಷೆಯಲ್ಲಿರೋಣ.

More from DriveSpark

Article Published On: Monday, June 11, 2012, 17:06 [IST]
English summary
Honda, the Japanese carmaker has joined the list of carmakers planning to build affordable MPVs. Honda has stated that it has now started developing a new MPV based on its recently launched small car Brio. Honda's Brio based MPV has been code named as the 2NH and is being developed in Indonesia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+