ಪೆಟ್ರೋಲ್ ದುಬಾರಿ: ಶೀಘ್ರದಲ್ಲಿ ಹೋಂಡಾ ಡೀಸೆಲ್ ಕಾರ್
ಪೆಟ್ರೋಲ್ ದರ ಹೆಚ್ಚಳದಿಂದ ಕಾರು ಕಂಪನಿಗಳು ಪೆಟ್ರೋಲ್ ಕಾರುಗಳಿಗೆ ದರ ವಿನಾಯಿತಿ ಪ್ರಕಟಿಸುತ್ತಿವೆ. ಅದೇ ರೀತಿ ಡೀಸೆಲ್ ಕಾರುಗಳ ಬೇಡಿಕೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಕಾರು ಕಂಪನಿಗಳು ಡೀಸೆಲ್ ಕಾರುಗಳ ಉತ್ಪಾದನೆ ಹೆಚ್ಚಳಕ್ಕೆ ಹೆಚ್ಚು ಒತ್ತು ನೀಡಲಿವೆ.
"2014ಕ್ಕೆ ಡೀಸೆಲ್ ಕಾರು ಪರಿಚಯಿಸಲು ಈ ಹಿಂದೆ ಯೋಜಿಸಿದ್ದೇವು. ಆದರೆ ಇದೀಗ ಪೆಟ್ರೋಲ್ ದರ ಹೆಚ್ಚಳವಾಗಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರದ ಅಂತರ ಹೆಚ್ಚಿದೆ. ಹೀಗಾಗಿ ಆದಷ್ಟು ಬೇಗ ಡೀಸೆಲ್ ಕಾರು ಹೊರತರಲು ಯೋಜಿಸಿದ್ದೇವೆ" ಎಂದು ಕಾರು ಕಂಪನಿಯೊಂದರ ಮುಖ್ಯಸ್ಥರು ಹೇಳಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿಯೇ ಜನಪ್ರಿಯ ಸಣ್ಣಕಾರು ಬ್ರಿಯೊ ಡೀಸೆಲ್ ಆವೃತ್ತಿಯನ್ನು ಪರಿಚಯಿಸಲು ಯೋಜಿಸಿದೆ. ಇದರೊಂದಿಗೆ ಬ್ರಿಯೊ ಡೀಸೆಲ್ ಸೆಡಾನ್ ಕಾರನ್ನು ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಪರಿಚಯಿಸಲು ಯೋಜಿಸಿದೆ. ಹೀಗಾಗಿ ಮುಂದಿನ ವರ್ಷ ಹೋಂಡಾ ಫ್ಯಾಕ್ಟರಿಯಿಂದ ಸಣ್ಣ ಮತ್ತು ಸೆಡಾನ್ ಡೀಸೆಲ್ ಆವೃತ್ತಿಗಳು ಆಗಮಿಸಲಿವೆ.
2014ರಲ್ಲಿ ಹೋಂಡಾ ಕಂಪನಿಯ ಹ್ಯಾಚ್ ಬ್ಯಾಕ್ ಜಾಝ್ ಕೂಡ ಡೀಸೆಲ್ ಆಯ್ಕೆಯಲ್ಲಿ ಆಗಮಿಸಲಿದೆ. ಹೋಂಡಾ ಕಂಪನಿಯು 1.2 ಲೀಟರ್ ಅಥವಾ 1.5 ಲೀಟರ್ ಡೀಸೆಲ್ ಎಂಜಿನ್ ಕಾರುಗಳನ್ನು ಪರಿಚಯಿಸಲಿದೆ ಎಂದು ಮೂಲಗಳು ಹೇಳಿವೆ.


Click it and Unblock the Notifications









