ಹೋಂಡಾ ಹೊಸ ಜಾಝ್ ಫಿಟ್ ಬರೋದು ಖಚಿತ

ಮುಂದಿನ ತಲೆಮಾರಿನ ಜಾಝ್(ಫಿಟ್) ಸರಣಿ ಕಾರನ್ನು ಪರಿಚಯಿಸುವುದನ್ನು ಹೋಂಡಾ ಖಚಿತಪಡಿಸಿದೆ. ಆದಗ್ಯೂ ನೂತನ ಸೀರಿಸ್ ಕಾರು ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರಲಿದೆ. ಡೀಸೆಲ್ ಆವೃತ್ತಿ ಆಗಮಿಸುವ ಕುರಿತು ಯಾವುದೇ ಖಚಿತತೆಯಿಲ್ಲ.

ಹೋಂಡಾ ಕಂಪನಿಯು ಆರಂಭಿಕವಾಗಿ ಬ್ರಿಯೊ ಕಾರಿಗೆ ಡೀಸೆಲ್ ಎಂಜಿನ್ ಅಳವಡಿಸಲಿದೆ. ಇದು ಮುಂದಿನ ವರ್ಷ ರಸ್ತೆಗೆ ಆಗಮಿಸಲಿದೆ. ಇದರೊಂದಿಗೆ ಕಂಪನಿಯು ಜಾಝ್ ಕಾರಿನ ಸಣ್ಣ ಎಸ್ ಯುವಿ ಆವೃತ್ತಿಯೊಂದನ್ನು ಪರಿಚಯಿಸಲು ಯೋಜಿಸಿದೆ.

ಕಾಂಪ್ಯಾಕ್ಟ್ ಸ್ಪೋರ್ಟ್ಸ್ ಕಾರುಗಳಿಗೆ ದೇಶದಲ್ಲಿ ಬೇಡಿಕೆಯಿದೆ. ಈಗಾಗಲೇ ರೆನೊ ಡಸ್ಟರ್, ಮಹೀಂದ್ರ ಕ್ವಾಂಟೊ ಮತ್ತು ಪ್ರಿಮಿಯರ್ ರಿಯೊ ಕಾರುಗಳಿಗೆ ಗ್ರಾಹಕರಿಂದ ಅತ್ಯುತ್ತಮ ಬೇಡಿಕೆಯಿದೆ.

ಶೀಘ್ರದಲ್ಲಿ ಫೋರ್ಡ್ ಕಂಪನಿ ಕೂಡ ಎಕೊಸ್ಪೋರ್ಟ್ ಕಾರಿನ ಮೂಲಕ ಕಾಂಪ್ಯಾಕ್ಟ್ ಎಸ್ ಯುವಿ ಬಳಗಕ್ಕೆ ಜೊತೆಯಾಗಲಿದೆ. ಸದ್ಯ ದೇಶದಲ್ಲಿ ಹೋಂಡಾ ಕಂಪನಿಯ ಕಾರುಗಳ ಮಾರಾಟ ಅಷ್ಟೇನೂ ಆಶಾದಾಯಕವಾಗಿಲ್ಲ. ಕಂಪನಿಗೆ ಸಣ್ಣಕಾರು ಬ್ರಿಯೊ ಪ್ರಮುಖ ಆಧಾರ. ಆದರೆ ಸದ್ಯ ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿಲ್ಲ.

More from DriveSpark

Article Published On: Monday, September 24, 2012, 11:32 [IST]
English summary
Honda has confirmed that it would introduce the next generation Jazz [Fit] series in India. However this new series will be offered in petrol. The big speculation around the Jazz being offered in diesel is out of the question, at-least for the moment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+