ಬ್ರಿಯೊ ಸೆಡಾನ್ ಹೊರತರಲು ಹೋಂಡಾ ಚಿಂತನೆ

ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಡಿಝೈರ್, ಟೊಯೊಟಾದ ಎಟಿಯೋಸ್ ಮತ್ತು ಟಾಟಾ ಮಾಂಝಾ ಕಾರುಗಳೊಂದಿಗೆ ನೂತನ ಹೋಂಡಾ ಸೆಡಾನ್ ಪೈಪೋಟಿ ನಡೆಸಲಿದೆ. ನೂತನ ಹೋಂಡಾ ಸೆಡಾನ್ ಕಾರು ಮಾರುಕಟ್ಟೆಗೆ ಮುಂದಿನ ವರ್ಷದಲ್ಲಿ ಆಗಮಿಸುವ ನಿರೀಕ್ಷೆಯಿದೆ.
ಮಾರುತಿ ಸುಜುಕಿ ಇತ್ತೀಚೆಗೆ ಎರ್ಟಿಗಾ ಪರಿಚಯಿಸಿದ ನಂತರ ಹೆಚ್ಚಿನ ಕಂಪನಿಗಳು ಎಂಪಿವಿ ಮಾರುಕಟ್ಟೆ ಕುರಿತು ಗಂಭೀರವಾಗಿವೆ. ನಿಸ್ಸಾನ್ ಕಂಪನಿಯು ಇವಲಿಯಾ ಎಂಬ ಎಂಪಿವಿಯನ್ನು, ರೆನೊ ಕಂಪನಿಯು ಡಸ್ಟರ್ ಎಂಬ ಎಂಪಿವಿ ಪರಿಚಯಿಸಲಿದೆ. ಅಶೋಕ್ ಲೇಲ್ಯಾಂಡ್ ಕಂಪನಿಯು ಫ್ಲೈಟ್ ಎಂಪಿವಿ ಪರಿಚಯಿಸಲಿದೆ.
ಹೋಂಡಾ ಹೊಸ ಸೆಡಾನ್ ಕಾರಿನ ಟೆಕ್ ಮಾಹಿತಿ, ದರ ಮಾಹಿತಿ ಯಾವುದೂ ಸದ್ಯಕ್ಕೆ ಲಭ್ಯವಿಲ್ಲ. ಇದರ ದರವೂ ಕಡಿಮೆ ಇರುವ ನಿರೀಕ್ಷೆಯಿದೆ. ದರ ಸುಮಾರು 7 ಲಕ್ಷ ರುಪಾಯಿಗಿಂತ ಕಡಿಮೆ ಇರಲಿದೆ. ಇದರೊಂದಿಗೆ ಕಂಪನಿಯು ಡೀಸೆಲ್ ಬ್ರಿಯೊ ಕಾರನ್ನು ಶೀಘ್ರದಲ್ಲಿ ಪರಿಚಯಿಸಲಿದೆ.
ನೂತನ ಬ್ರಿಯೊ ಆಧರಿತ ಸೆಡಾನ್ ಕಾರನ್ನು ಏಷ್ಯಾ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸುತ್ತಿದೆ. ಈ ಎಂಪಿವಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸುವ ಕುರಿತು ಹೋಂಡಾ ಸೂಚನೆ ನೀಡಿಲ್ಲ. ಇತ್ತೀಚೆಗೆ ಹೋಂಡಾ ಕಂಪನಿಯು ಎಂಟ್ರಿ ಲವೆಲ್ ಬ್ರಿಯೊ ಹ್ಯಾಚ್ ಬ್ಯಾಕ್ ಕಾರನ್ನು ಪರಿಚಯಿಸಿತ್ತು.
ಇದು 1.2 ಲೀಟರಿನ 1.2 ಲೀಟರಿನ ಐ-ವಿಟೆಕ್ ಎಂಜಿನ್ ಹೊಂದಿದೆ. ಆರು ಬಣ್ಣಗಳಲ್ಲಿ ದೊರಕುವ ನೂತನ ಬ್ರಿಯೊ ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತದೆ. ಇದರ ಆರಂಭಿಕ ದರ 3.99 ಲಕ್ಷ ರುಪಾಯಿ ಇದೆ.


Click it and Unblock the Notifications








