ಜಾಝ್ ಮತ್ತು ಬ್ರಿಯೊ ಉತ್ಪಾದನೆ ಪುನಾರಂಭ ಯಾವಾಗ?

ಥೈಲಾಂಡಿನಲ್ಲಿ ನೆರೆಹಾವಳಿಯಿಂದ ಬಿಡಿಭಾಗಗಳ ಪೂರೈಕೆಯಲ್ಲಿ ವ್ಯತ್ಯಯವುಂಟಾದ ಹಿನ್ನಲೆಯಲ್ಲಿ ಕಂಪನಿಯು ಇವೆರಡು ಕಾರುಗಳ ಉತ್ಪಾದನೆಯನ್ನು ಇತ್ತೀಚೆಗೆ ಸ್ಥಗಿತಗೊಳಿಸಿತ್ತು.
ಕಂಪನಿಯು ಕಳೆದ ವರ್ಷ ಎರಡು ನೈಸರ್ಗಿಕ ವಿಕೋಪದಿಂದ ಹಿನ್ನಡೆ ಅನುಭವಿಸಿತ್ತು. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಜಪಾನಿನಲ್ಲಿ ಸಂಭವಿಸಿದ ತ್ಸುನಾಮಿ ಮತ್ತು ಥೈಲಾಂಡ್ ನಲ್ಲಿನ ನೆರೆ ಹಾವಳಿ ಕಂಪನಿಯ ಉತ್ಪಾದನೆಗೆ ಪ್ರಬಲವಾದ ಹೊಡೆತವನ್ನೇ ನೀಡಿತ್ತು.
ಕಾರು ಉತ್ಪಾದನೆಗೆ ಅವಶ್ಯವಿರುವ ಕೆಲವು ಪ್ರಮುಖ ಬಿಡಿಭಾಗಗಳಿಗೆ ಕಂಪನಿಯು ಥೈಲಾಂಡನ್ನು ಅವಲಂಬಿಸಿತ್ತು. ಹೋಂಡಾ ಕಂಪನಿಯ ದೇಶದ ಜಂಟಿ ಉದ್ಯಮವು ಜಾಝ್, ಬ್ರಿಯೊ ಮುಂತಾದ ಹ್ಯಾಚ್ ಬ್ಯಾಕ್ ಕಾರುಗಳನ್ನು, ಅಕಾರ್ಡ್, ಸಿಟಿ ಮುಂತಾದ ಸೆಡಾನ್ ಕಾರುಗಳನ್ನು ಉತ್ಪಾದಿಸುತ್ತಿದೆ.


Click it and Unblock the Notifications








