ಹೆಸರು ಬದಲಾಯಿಸಿದ ಹೋಂಡಾ ಕಾರು ಕಂಪನಿ

ನವದೆಹಲಿ, ಸೆ 10: ಜಪಾನಿನ ಬೃಹತ್ ವಾಹನ ತಯಾರಿಕಾ ಕಂಪನಿಯು ಭಾರತದಲ್ಲಿನ ಅಂಗಸಂಸ್ಥೆಯ ಹೆಸರನ್ನು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಎಂದು ಬದಲಾಯಿಸಿದೆ. ಇದಕ್ಕೂ ಮುನ್ನ ಇದರ ಹೆಸರು ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾ ಎಂದಾಗಿತ್ತು.

ಶ್ರೀರಾಂ ಗ್ರೂಪಿನ ಉಷಾ ಇಂಟರ್ ನ್ಯಾಷನಲ್ ಜೊತೆಗಿನ ಮೈತ್ರಿ ಕಡಿದುಕೊಂಡ ನಂತರ ಹೋಂಡಾ ಕಾರು ಕಂಪನಿಯು ಹೆಸರು ಬದಲಾಯಿಸಿದೆ. ಜಂಟಿ ಉದ್ಯಮ ಕೊನೆಗೊಂಡಿರುವುದರಿಂದ ಹೋಂಡಾ ಕಂಪನಿಯು ಈಗ ಶೇಕಡ 100ರಷ್ಟು ಪಾಲು ಪಡೆದುಕೊಂಡಿದೆ.

"ದೆಹಲಿ ಮತ್ತು ಹರ್ಯಾಣದಲ್ಲಿ ಕಂಪನಿಗಳ ಹೆಸರು ನೋಂದಣಿ ವಿಭಾಗದಲ್ಲಿ ತಕ್ಷಣದಿಂದ ಅನ್ವಯವಾಗುವಂತೆ ಕಂಪನಿಯ ಹೆಸರನ್ನು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಎಂದು ಬದಲಾಯಿಸಲಾಗಿದೆ" ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ತಿಂಗಳು ಹೋಂಡಾ ಕಾರು ಕಂಪನಿಯು ಜಂಟಿ 180 ಕೋಟಿ ರುಪಾಯಿಗೆ ಜಂಟಿ ಉದ್ಯಮದಿಂದ ಸಂಪೂರ್ಣ ಶೇಕಡ 3.16ರಷ್ಟು ಪಾಲು ಸ್ವಾಧೀನಪಡಿಸಿಕೊಂಡಿತ್ತು. ಈ ಮೂಲಕ ಉಷಾ ಇಂಟರ್ ನ್ಯಾಷನಲ್ ಜೊತೆಗಿನ ದೀರ್ಘಕಾಲದ ಮೈತ್ರಿಗೆ ಕೊನೆ ಹಾಡಿತ್ತು.

ಹೋಂಡಾ ಮತ್ತು ಉಷಾ ಇಂಟರ್ ನ್ಯಾಷನಲ್ ಕಂಪನಿಯು 1995ರ ಡಿಸೆಂಬರ್ ತಿಂಗಳಲ್ಲಿ ಜಂಟಿ ಉದ್ಯಮ ಸ್ಥಾಪಿಸಿದ್ದವು.

More from DriveSpark

Article Published On: Monday, September 10, 2012, 16:09 [IST]
English summary
Honda Siel Cars India Name Changed. HSCI new name Honda Cars India Ltd. Honda and Usha International joint venture end.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+