110ಸಿಸಿಯ ಹೋಂಡಾ ಡಿಯೊ ಸ್ಕೂಟರ್ ರಸ್ತೆಗೆ, ದರ 42 ಸಾವಿರ ರು.

ಹೋಂಡಾ ಡಿಯೊ ಸ್ಕೂಟರ್ ಕೂಡ 110 ಸಿಸಿ ಎಂಜಿನ್ ಹೊಂದಿದೆ. ಇದು 8 ಹಾರ್ಸ್ ಪವರ್ ಹೊಂದಿದೆ. ಆಕ್ಟಿವಾ ಕೂಡ ಇದೇ ಎಂಜಿನನ್ನು ಹೊಂದಿದೆ. ಹಳೆಯ ಡಿಯೋ ಸ್ಕೂಟರ್ ಪ್ರತಿಲೀಟರಿಗೆ 55 ಕಿ.ಮೀ. ಮೈಲೇಜ್ ನೀಡುತ್ತಿತ್ತು. ಆದರೆ ನೂತನ ಡಿಯೋ ಹಳೆಯದಕ್ಕಿಂತ ಶೇಕಡ 15ರಷ್ಟು ಹೆಚ್ಚು ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ.
ಡಿಯೊ ಸ್ಕೂಟರಿನ ಮುಂಭಾಗ ನೂತನ ವಿನ್ಯಾಸದೊಂದಿಗೆ ಬಂದಿದೆ. ಈ ಸ್ಕೂಟರ್ ಹೋಂಡಾ ಕಂಪನಿಯ ಭವಿಷ್ಯದ ಬ್ರೇಕಿಂಗ್ ಸಿಸ್ಟಮ್ "ಕಾಂಬಿ ಬ್ರೇಕ್ ಸಿಸ್ಟಮ್" ಹಿಂದಿದೆ. "ಯುವಕರು ಮತ್ತು ಯುವತಿಯರ ದಿನನಿತ್ಯದ ಪ್ರಯಾಣಕ್ಕೆ ನೂತನ ಡಿಯೋ ಸೂಕ್ತವಾಗಿದೆ" ಎಂದು ಕಂಪನಿಯ ಉಪಾಧ್ಯಕ್ಷರಾದ ಎನ್. ಕೆ. ರತನ್ ಹೇಳಿದ್ದಾರೆ.


Click it and Unblock the Notifications