ಹೊಸ ಹೋಂಡಾ ಆಕ್ಟಿವಾ 4ಜಿ ಬಿಡುಗಡೆ: ಸ್ಕೂಟರಿನಲ್ಲೇ ಮೊಬೈಲ್ ಚಾರ್ಜ್ ಮಾಡ್ಕೊಳಿ

Written By:

ಭಾರತದ ಪ್ರತಿಷ್ಠಿತ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ತಯಾರಕ ಕಂಪನಿ ಹೋಂಡಾ ತನ್ನ ಬಹುನೀರೀಕ್ಷಿತ ಸ್ವಯಂಚಾಲಿತ ಹೆಡ್ ಲ್ಯಾಂಪ್(AHO) ಹೊಂದಿರುವ ಹೋಂಡಾ 4ಜಿ ಸ್ಕೂಟರನ್ನು ಬಿಡುಗಡೆಗೊಳಿಸಿದೆ.

ಹೊಸ ಹೋಂಡಾ ಆಕ್ಟಿವಾ 4ಜಿ ಬಿಡುಗಡೆ: ಸ್ಕೂಟರಿನಲ್ಲೇ ಮೊಬೈಲ್ ಚಾರ್ಜ್ ಮಾಡ್ಕೊಳಿ

ಪ್ರತಿಯೊಬ್ಬರಿಗೂ ತಿಳಿದಿರುವಂತೆಯೇ ದೇಶದಲ್ಲಿಯೇ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, ಸ್ಕೂಟರ್ ವಿಭಾಗದಲ್ಲಿ ಈಗಾಗಲೇ ತನ್ನ ಅಧಿಪತ್ಯ ಹೊಂದಿದ್ದು, ಹೋಂಡಾ ಕಂಪನಿಯ ಈ ಯಶಸ್ಸಿನ ಹಿಂದೆ ಆಕ್ಟಿವಾ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಮರೆಯುವಂತಿಲ್ಲ.

ಹೊಸ ಹೋಂಡಾ ಆಕ್ಟಿವಾ 4ಜಿ ಬಿಡುಗಡೆ: ಸ್ಕೂಟರಿನಲ್ಲೇ ಮೊಬೈಲ್ ಚಾರ್ಜ್ ಮಾಡ್ಕೊಳಿ

ಇಷ್ಟೆಲ್ಲಾ ಹಿನ್ನೆಲೆ ಹೊಂದಿರುವ ಹೋಂಡಾ ಸ್ಕೂಟರ್ ಇಂಡಿಯಾ ಕಂಪನಿ ತನ್ನ 4ನೇ ತಲೆಮಾರಿನ 110 ಸಿಸಿ ಹೋಂಡಾ ಆಕ್ಟಿವಾ ಸ್ಕೂಟರ್ ಬಿಡುಗಡೆಗೊಳಿಸಿದೆ.

ಹೊಸ ಹೋಂಡಾ ಆಕ್ಟಿವಾ 4ಜಿ ಬಿಡುಗಡೆ: ಸ್ಕೂಟರಿನಲ್ಲೇ ಮೊಬೈಲ್ ಚಾರ್ಜ್ ಮಾಡ್ಕೊಳಿ

ಹೊಸ ಆಕ್ಟಿವಾ 4ಜಿ ಬಿಎಸ್ IV ಕಂಪ್ಲೈಂಟ್ ಎಂಜಿನ್ ಮತ್ತು ಸ್ವಯಂಚಾಲಿತ ಹೆಡ್ ಲ್ಯಾಂಪ್(AHO) ವಿಶೇಷತೆಗಳನ್ನು ಹೊಂದಿದೆ.

ಹೊಸ ಹೋಂಡಾ ಆಕ್ಟಿವಾ 4ಜಿ ಬಿಡುಗಡೆ: ಸ್ಕೂಟರಿನಲ್ಲೇ ಮೊಬೈಲ್ ಚಾರ್ಜ್ ಮಾಡ್ಕೊಳಿ

ಹೋಂಡಾ ಕಂಪನಿಯ ಈ ಸ್ಕೂಟರ್ ನಿಮ್ಮದಾಗಿಸಿಕೊಳ್ಳಬೇಕಾದರೆ ರೂ. 50,730 (ಎಕ್ಸ್ ಶೋ ರೂಂ ದೆಹಲಿ) ನೀಡಬೇಕು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಹೋಂಡಾ ಆಕ್ಟಿವಾ 4ಜಿ ಬಿಡುಗಡೆ: ಸ್ಕೂಟರಿನಲ್ಲೇ ಮೊಬೈಲ್ ಚಾರ್ಜ್ ಮಾಡ್ಕೊಳಿ

ಈ ಸ್ಕೂಟರ್ ಮುಂಭಾಗದಲ್ಲಿ ಹೊಸ ವಿನ್ಯಾಸದ ಕವರ್ ವಿನ್ಯಾಸ ಪಡೆದುಕೊಂಡಿದ್ದು, ಮೊಬೈಲ್ ಚಾರ್ಜ್ ಕೂಡ ಮಾಡಬಹುದಾದ ಹೊಸ ಆಯ್ಕೆಯೊಂದನ್ನು ನೀಡಲಾಗಿದೆ. ಉಳಿದಂತೆ ಈ ಹಿಂದಿನ ಆವೃತಿಯ ವಿಶೇಷತೆಗಳು ಹೊಸ ಆಕ್ಟಿವಾ 4ಜಿಯಲ್ಲೂ ಮುಂದುವರಿಯಲಿದ್ದು, ಟ್ಯೂಬ್ ಲೆಸ್ ಟೈರುಗಳು, ಸೀಟಿನ ಕೆಳಗಿರುವ ವಿಶಾಲವಾದ ಸ್ಥಳ ಪಡೆದುಕೊಳ್ಳಲಿದೆ.

ಹೊಸ ಹೋಂಡಾ ಆಕ್ಟಿವಾ 4ಜಿ ಬಿಡುಗಡೆ: ಸ್ಕೂಟರಿನಲ್ಲೇ ಮೊಬೈಲ್ ಚಾರ್ಜ್ ಮಾಡ್ಕೊಳಿ

ಹೊಸ ಆಕ್ಟಿವಾ 4ಜಿ ಸ್ಕೂಟರ್ ಮಟ್ಟ್ ಸೆಲೆನ್ ಸಿಲ್ವರ್ ಮೆಟಾಲಿಕ್ ಮತ್ತು ಮಟ್ಟೇ ಆಕ್ಸಿಸ್ ಗ್ರೇ ಮೆಟಾಲಿಕ್ ಎಂಬ ಎರಡು ಹೊಚ್ಚ ಹೊಸ ಬಣ್ಣಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.

ಹೊಸ ಹೋಂಡಾ ಆಕ್ಟಿವಾ 4ಜಿ ಬಿಡುಗಡೆ: ಸ್ಕೂಟರಿನಲ್ಲೇ ಮೊಬೈಲ್ ಚಾರ್ಜ್ ಮಾಡ್ಕೊಳಿ

ಕಾಂಬಿ ಬ್ರೇಕ್ ಸಿಸ್ಟಮ್ ಮತ್ತು ಇಕ್ವಾಲೈಸರ್ ತಂತ್ರಜ್ಞಾನ ಹೊಂದಿರುವ ಹೋಂಡಾ ಆಕ್ಟಿವಾ 4ಜಿ ಸ್ಕೂಟರ್ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುವುದರಲ್ಲಿ ಸಂದೇಹವಿಲ್ಲ.

ಹೊಸ ಹೋಂಡಾ ಆಕ್ಟಿವಾ 4ಜಿ ಬಿಡುಗಡೆ: ಸ್ಕೂಟರಿನಲ್ಲೇ ಮೊಬೈಲ್ ಚಾರ್ಜ್ ಮಾಡ್ಕೊಳಿ

109 ಸಿಸಿ ಇಕೋ ತಂತ್ರಜ್ಞಾನ ಹೊಂದಿರುವ ಈ ಸ್ಕೂಟರ್ 9 ಏನ್ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿ ಉತ್ಪಾದಿಸುವಷ್ಟು ಶಕ್ತವಾಗಿದೆ. ಭಾರತ ಮಾತ್ರವಲ್ಲದೆ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಏಕೈಕ ಸ್ಕೂಟರ್ ಈ ಆಕ್ಟಿವಾ ಎಂಬ ವಿಚಾರ ಕಂಪನಿಗೆ ಮತ್ತಷ್ಟು ಬಲ ತಂದುಕೊಟ್ಟಿದ್ದು, ಸದ್ಯ 1.5 ಕೋಟಿಗೂ ಹೆಚ್ಚು ಮಂದಿ ಈ ಸ್ಕೂಟರ್ ಬಳಸುತ್ತಿದ್ದಾರೆ.

ಹೊಚ್ಚ ಹೊಸ ಏಪ್ರಿಲಿಯ ಎಸ್ಆರ್ ಸ್ಕೂಟರಿನ ಚಿತ್ರಗಳನ್ನು ವೀಕ್ಷಿಸಿ...

English summary
Honda Motorcycle & Scooter India (HMSI) launched the new Activa 4G scooter with BS-IV compliant engine and Automatic Headlamp On(AHO) feature.
Story first published: Wednesday, March 1, 2017, 11:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark