ವಿಶ್ವದ ಅತಿ ಅಪಾಯಕಾರಿ ಕಣಿವೆ ರಸ್ತೆಯಲ್ಲಿ ಆಕ್ಟಿವಾ ಸವಾರಿ

By Nagaraja

ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಯಾಗಿರುವ ಹಿಮಾಚಲ ಪ್ರದೇಶದ ಸಚ್ ಪಾಸ್ ಹಾಗೂ ಕಿಲ್ಲರ್ ಕಿಶ್ ತ್ವಾರ್ ರಸ್ತೆಯಲ್ಲಿ ಹೋಂಡಾ ಆಕ್ಟಿವಾ ಗೇರ್ ಲೆಸ್ ಸ್ಕೂಟರ್ ನಲ್ಲಿ ಸಂಚರಿಸುವ ಮೂಲಕ 21ರ ಹರೆಯದ ಕರಣ್ ಬಿರ್ ಸಿಂಗ್ ನೂತನ ದಾಖಲೆ ಸ್ಥಾಪಿಸಿದ್ದಾರೆ.

ಕಣಿವೆ ಪ್ರದೇಶದಿಂದ ಆವರಿಸ್ಪಟ್ಟಿರುವ ಇಲ್ಲಿನ ಅಪಾಯಕಾರಿ ರಸ್ತೆಗಳಲ್ಲಿ ಸಂಚರಿಸುವುದು ಅಷ್ಟು ಸುಲಭದ ವಿಚಾರವಲ್ಲ. ಹಾಗಿರುವಾಗ ಧೈರ್ಯ ಮಾಡಿರುವ ಕರಣ್ ಬಿರ್ ಸಿಂಗ್ ತಮ್ಮ ಜೀವವನ್ನು ಲೆಕ್ಕಿಸದೇ ಹೊಸ ದಾಖಲೆಗೆ ಮುಂದಾಗಿದ್ದರು.

ವಿಶ್ವದ ಅತಿ ಅಪಾಯಕಾರಿ ಕಣಿವೆ ರಸ್ತೆಯಲ್ಲಿ ಆಕ್ಟಿವಾ ಸವಾರಿ

ಮುಂಬೈನ ಘಟಕವೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಕರಣ್ ಬಿರ್ ಸಿಂಗ್, ದೈನಂದಿನ ಕಚೇರಿಗೆ ಹೋಗಿ ಬರಲು ತಾಯಿಯ ಹೋಂಡಾ ಆಕ್ಟಿವಾ ಸ್ಕೂಟರನ್ನು ಬಳಕೆ ಮಾಡುತ್ತಿದ್ದರು.

ವಿಶ್ವದ ಅತಿ ಅಪಾಯಕಾರಿ ಕಣಿವೆ ರಸ್ತೆಯಲ್ಲಿ ಆಕ್ಟಿವಾ ಸವಾರಿ

ತಮ್ಮ ತವರೂರಾದ ಜಲಂಧರ್ ನಿಂದ ಆರಂಭಿಸಿದ ರೋಚಕ ಪ್ರಯಾಣವು ಬಳಿಕ ಮೂಲ ಸ್ಥಾನವನ್ನು ತಲುಪುವ ಮೂಲಕ ವಾಹನ ಪ್ರೇಮಿಗಳಿಗೆ ಸ್ಪೂರ್ತಿಯಾಗಿದ್ದಾರೆ.

ವಿಶ್ವದ ಅತಿ ಅಪಾಯಕಾರಿ ಕಣಿವೆ ರಸ್ತೆಯಲ್ಲಿ ಆಕ್ಟಿವಾ ಸವಾರಿ

ಈ ಬಗ್ಗೆ ಅನುಭವ ಹಂಚಿಕೊಂಡಿರುವ ಕರಣ್, ಪಂಗಿ ಕಣಿವೆಯಲ್ಲಿನ ಗೇರ್ ಲೆಸ್ ಸ್ಕೂಟರ್ ಜೊತೆಗಿನ ಪ್ರಯಾಣವು ತಮ್ಮ ಕನಸಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ವಿಶ್ವದ ಅತಿ ಅಪಾಯಕಾರಿ ಕಣಿವೆ ರಸ್ತೆಯಲ್ಲಿ ಆಕ್ಟಿವಾ ಸವಾರಿ

ಸಹಜವಾಗಿಯೇ ಸಣ್ಣ ಚಕ್ರಗಳು ಹಾಗೂ ಪವರ್ ಕಡಿಮೆ ಆಗಿದ್ದರಿಂದ ಕಣಿವೆ ಏರುವಾಗ ತೊಂದರೆಗಳು ಎದುರಾಗಿದ್ದವು. ಇನ್ನು ಕೆಲವು ಬಾರಿ ಬ್ರೇಕ್ ಸಮಸ್ಯೆಯು ಎದುರಾಗಿತ್ತು ಎಂದು ತಮ್ಮ ಅಪಾಯಕಾರಿ ಪ್ರಯಾಣದ ಆತಂಕದ ಕ್ಷಣಗಳನ್ನು ವಿವರಿಸುತ್ತಾರೆ.

ವಿಶ್ವದ ಅತಿ ಅಪಾಯಕಾರಿ ಕಣಿವೆ ರಸ್ತೆಯಲ್ಲಿ ಆಕ್ಟಿವಾ ಸವಾರಿ

ಯಾರ ನೆರವನ್ನು ಪಡೆಯದೇ ಒಬ್ಬಂಟಿಯಾಗಿ ಸವಾರಿ ಮಾಡಲು ತೋರಿರುವ ಆತ್ಮ ಸ್ಥೈರ್ಯವನ್ನು ಇಲ್ಲಿ ಎಲ್ಲ ವಾಹನ ಪ್ರೇಮಿಗಳು ಮೆಚ್ಚುಗೆಗೆ ಪಾತ್ರವಾಗಿದೆ. ಇದು ವಿನೂತನ ಅನುಭವಕ್ಕೆ ಕಾರಣವಾಗಿತ್ತು ಎಂದು ತಮ್ಮ ಇನ್ ಸ್ಟಾಂ ಪೇಜ್ ನಲ್ಲಿ ಅನುಭವ ಹಂಚಿಕೊಂಡಿದ್ದಾರೆ.

ವಿಶ್ವದ ಅತಿ ಅಪಾಯಕಾರಿ ಕಣಿವೆ ರಸ್ತೆಯಲ್ಲಿ ಆಕ್ಟಿವಾ ಸವಾರಿ

ಹಿಮಾಚಲ ಪ್ರದೇಶದ ಚಂಬ ಜಿಲ್ಲೆಯಲ್ಲಿ ಹಾದು ಹೋಗುವ ಹಿಮಾಲಯ ಶ್ರೇಣಿಯ ಭಾಗವಾಗಿರುವ ಸಚ್ ಪಾಸ್ ಕಣಿವೆ ಹಾದಿಯು 4,420 ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿದೆ. ಇದು ಜಮ್ಮು ಕಾಶ್ಮೀರದ ಕಿಶ್ ತ್ವಾರ್ ಕಣಿವೆ ಮಾರ್ಗದತ್ತ ದಾಪುಗಾಲನ್ನಿಡುತ್ತಿದೆ.

ವಿಶ್ವದ ಅತಿ ಅಪಾಯಕಾರಿ ಕಣಿವೆ ರಸ್ತೆಯಲ್ಲಿ ಆಕ್ಟಿವಾ ಸವಾರಿ

ಎತ್ತರದ ಪ್ರದೇಶದಲ್ಲಿ ಹಾದು ಹೋಗುವ ಕಣಿವೆ ಭೂ ಪ್ರದೇಶದ ಎಕ್ಸ್ ಕ್ಲೂಸಿವ್ ವಿಡಿಯೋವನ್ನು ಡ್ರೈವ್ ಸ್ಪಾರ್ಕ್ ಓದುಗರಿಗಾಗಿ ಹಂಚಿಕೊಳ್ಳಲಾಗಿದೆ.

ರೋಚಕ ವಿಡಿಯೋ ವೀಕ್ಷಿಸಿ


More from DriveSpark

Article Published On: Wednesday, August 10, 2016, 16:43 [IST]
English summary
Honda Activa pass through world's most dangerous road
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+