ಹ್ಯುಂಡೈ ಗ್ರಾಹಕರಿನ್ನು ನೆಟ್ಟಲ್ಲೇ ಸರ್ವಿಸ್ ಪಡೆಯಬಹುದು!

ಹ್ಯುಂಡೈ ಮೋಟರ್ಸ್ ಇಂಡಿಯಾ ನೂತನ ಆನ್ ಲೈನ್ ಪೋರ್ಟಲ್ ಆರಂಭಿಸಿದೆ. ಇದರಿಂದಾಗಿ ಹ್ಯುಂಡೈ ಕಾರು ಗ್ರಾಹಕರು ದೇಶದಾದ್ಯಂತವಿರುವ ಹ್ಯುಂಡೈ ಡೀಲರ್ ಷಿಪ್ ಸೇವೆಯನ್ನು ಸುಲಭವಾಗಿ ಸಂಪರ್ಕಿಸಬಹುದು. ಇದೇ ತಾಣದಲ್ಲಿ ಗ್ರಾಹಕರು ತಮ್ಮ ವಾಹನದ ಮಾಹಿತಿ, ಸರ್ವಿಸ್ ಮಾಡಬೇಕಾದ ದಿನಾಂಕ, ಅವಧಿ ಮತ್ತು ಸರ್ವಿಸ್ ಮಾಡಿರುವ ಇತಿಹಾಸ ಇತ್ಯಾದಿಗಳನ್ನು ದಾಖಲಿಸಬಹುದಾಗಿದೆ.

ನೂತನ ಹ್ಯುಂಡೈ ಸರ್ವಿಸ್ ಪೋರ್ಟಲ್ ನಲ್ಲಿ ಗ್ರಾಹಕರು ತಮ್ಮ ಹತ್ತಿರದ ಸರ್ವಿಸ್ ಕೇಂದ್ರವನ್ನು ಸಂಪರ್ಕಿಸಲು ಸಾಧ್ಯವಿದೆ. ಇದರಲ್ಲಿರುವ "ಸರ್ವಿಸ್ ಕ್ಯಾಲ್ಕ್ಯುಲೆಟರ್" ಇನ್ನೊಂದು ಆಸಕ್ತಿದಾಯಕ ಫೀಚರಾಗಿದೆ. ಮುಂದಿನ ಸರ್ವಿಸ್ ಸಮಯದಲ್ಲಿ ವೆಚ್ಚಮಾಡಬೇಕಾದ ಹಣ, ಯಾವೆಲ್ಲ ಬಿಡಿಭಾಗಗಳು ಅಗತ್ಯವಿದೆ, ಅವುಗಳ ದರ ಇತ್ಯಾದಿ ಮಾಹಿತಿಗಳನ್ನು ಈ ಕ್ಯಾಲ್ಕ್ಯುಲೆಟರಿನಲ್ಲಿ ತಿಳಿದುಕೊಳ್ಳಬಹುದಾಗಿದೆ.

ಹ್ಯುಂಡೈ ಸಾಂಪ್ರದಾಯಿಕ ವೆಬ್ ತಾಣಕ್ಕಿಂತ ಈ ನೂತನ ಮೈಕ್ರೊ ವೆಬ್ ತಾಣವು ವಿಭಿನ್ನವಾಗಿದೆ. ಹಳೆಯ ತಾಣಗಳು ಕೇವಲ ಮಾಹಿತಿಯನ್ನಷ್ಟೇ ನೀಡುತ್ತಿದ್ದವು. ಅದರಲ್ಲಿ ಖರೀದಿ, ಡೀಲರ್ ಸಂಪರ್ಕ ಮಾತ್ರ ಸಾಧ್ಯವಾಗುತ್ತಿತ್ತು. ಆದರೆ ನೂತನ ವೆಬ್ ತಾಣವು ಕಾರು ಖರೀದಿಸಿದ ನಂತರವೂ ಗ್ರಾಹಕರಿಗೆ ಸೇವೆ ನೀಡಲಿದೆ.

ಈಗಾಗಲೇ ಕಂಪನಿಯು ದೇಶದಾದ್ಯಂತ "ಆಲ್ ವೇಸ್ ಅರೌಂಡ್" ಕಾರ್ಯಕ್ರಮದ ಮೂಲಕ ಉಚಿತ ಕಾರ್ ಚೆಕಪ್ ನಡೆಸುತ್ತಿದೆ. "ಆನ್ ಲೈನ್ ಪೋರ್ಟಲ್ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲಿದೆ. ಹೊಸ ಕಾರ್ಯತಂತ್ರದ ಮೂಲಕ ಕಂಪನಿಯು ಯಾವಾಗಲೂ ಗ್ರಾಹಕರಿಗೆ ನಿಕಟವಾಗಿ ಸೇವೆ ನೀಡಲು ಬಯಸುತ್ತದೆ. ನೂತನ ಸೇವೆಯು ಗ್ರಾಹಕರಿಗೆ ಕಾರು ಖರೀದಿಯ ನಂತರದ ಸೇವೆಯನ್ನು ಉತ್ತಮಗೊಳಿಸಲು ಸಾಧ್ಯವಾಗಿಸಲಿದೆ" ಎಂದು ಹ್ಯುಂಡೈ ಮೋಟರ್ಸ್ ಇಂಡಿಯಾ ಲಿಮಿಟೆಡ್ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ಅರವಿಂದ್ ಸಕ್ಸೆನಾ ಅಭಿಪ್ರಾಯಪಟ್ಟಿದ್ದಾರೆ.

More from DriveSpark

Article Published On: Friday, July 6, 2012, 11:49 [IST]
English summary
Hyundai Motor India launched its Online Service website. The micro site will be available on Hyundai's corporate website. This website site will offer personalized services like service scheduler-reminder, on-line service booking, history - periodic service details, Service and insurance calculators, nearest service station locator etc.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+