ಹ್ಯುಂಡೈ ಮೋಟರ್ ಏಪ್ರಿಲ್ ಲಾಭ ತುಸು ಏರಿಕೆ

ದೇಶದ ಪ್ರಮುಖ ಕಾರು ರಫ್ತುದಾರ ಕಂಪನಿ ಹ್ಯುಂಡೈ ಮೋಟರ್ ಇಂಡಿಯಾ ಕಳೆದ ತಿಂಗಳು ಮಾರಾಟದಲ್ಲಿ ಶೇಕಡ 5ರಷ್ಟು ಏರಿಕೆ ದಾಖಲಿಸಿದೆ. ಕೊರಿಯಾದ ಕಾರು ಕಂಪನಿಯು ಏಪ್ರಿಲ್ ತಿಂಗಳಲ್ಲಿ 54,606 ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಯ 52,057 ಯುನಿಟ್ ಮಾರಾಟ ಮಾಡಿತ್ತು.

ಕಳೆದ ತಿಂಗಳು ಹ್ಯುಂಡೈ ಕಂಪನಿಯ ದೇಶಿ ಮಾರಾಟ 35,070 ಯುನಿಟಿಗೆ ತಲುಪಿದ್ದು ಶೇಕಡ 10.9ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ದೇಶಿ ಮಾರಾಟ 31,636 ಯುನಿಟಿಗೆ ತಲುಪಿತ್ತು. ಕಂಪನಿಯ ಸಣ್ಣಕಾರು ಇಯಾನ್ ಮಾರಾಟ ಹೆಚ್ಚಲು ಸಾಥ್ ನೀಡಿದೆ.

"ಕೇಂದ್ರ ಬಜೆಟ್ ನಂತರ ದರ ಹೆಚ್ಚಿಸಿದರೂ ಮಾರುಕಟ್ಟೆ ಭಾವನೆಗೆ ಯಾವುದೇ ಹಿನ್ನಡೆಯಾಗಿಲ್ಲ" ಎಂದು ಹ್ಯುಂಡೈ ಇಂಡಿಯಾದ ನಿರ್ದೇಶಕರಾದ ಅರವಿಂದ್ ಸಕ್ಸೆನಾ ಹೇಳಿದ್ದಾರೆ.

ಕಂಪನಿಯ ಹ್ಯಾಚ್ ಬ್ಯಾಕ್ ಕಾರುಗಳು ಏಪ್ರಿಲ್ ತಿಂಗಳಲ್ಲಿ ಮಾರಾಟ ಹೆಚ್ಚಲು ಪ್ರಮುಖ ನೆರವು ನೀಡಿವೆ. ಕಂಪನಿಯು ಕಳೆದ ತಿಂಗಳು ಸುಮಾರು 44,891 ಹ್ಯಾಚ್ ಬ್ಯಾಕ್ ಕಾರುಗಳನ್ನು ಮಾರಾಟ ಮಾಡಿವೆ. ಸೆಡಾನ್ ಕಾರುಗಳಾದ ವೆರ್ನಾ ಮತ್ತು ಅಸೆಂಟ್ 9,579 ಯುನಿಟ್ ಆಗಿವೆ. ಸಾಂತಾ ಫೆ ಮಾರಾಟ 70 ಯುನಿಟ್ ಮಾತ್ತು ಫ್ಲೂಡಿಕ್ ಸೊನಾಟ 67 ಯುನಿಟ್ ಮಾರಾಟವಾಗಿವೆ.

ಹ್ಯುಂಡೈ ಕಂಪನಿಯು ಕಳೆದ ತಿಂಗಳು ಸುಮಾರು 19,536 ಯುನಿಟ್ ವಾಹನ ರಫ್ತು ಮಾಡಿದ್ದು, ಕಳೆದ ವರ್ಷದ ಇದೇ ಅವಧಿಯ 20,421 ಯುನಿಟಿಗೆ ಹೋಲಿಸಿದರೆ ಶೇಕಡ 4.3ರಷ್ಟು ಇಳಿಕೆ ಕಂಡಿದೆ. ಕಂಪನಿಯು ಯುರೋಪ್, ಆಫ್ರಿಕಾ ಮತ್ತು ಆಗ್ನೇಯಾ ಏಷ್ಯಾ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಐ10 ಸಣ್ಣಕಾರುಗಳನ್ನು ರಫ್ತು ಮಾಡುತ್ತಿದೆ.

More from DriveSpark

Article Published On: Thursday, May 3, 2012, 9:33 [IST]
English summary
Hyundai Motor India, India's leading car exporter posted a 5% jump in April sales. The Korean carmaker managed to sell 54,606 cars this April as against the 52,057 units it sold in the corresponding period last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+