ಆಗಸ್ಟ್ ತಿಂಗಳಲ್ಲಿ ಹ್ಯುಂಡೈ ಎಲಾಂಟ್ರಾ ಕಾರು ರಸ್ತೆಗೆ
ದೇಶದ ಜನರಿಗೆ ಈಗಾಗಲೇ ಎಲಾಂಟ್ರಾ ಕಾರು ಚಿರಪರಿಚಿತ. ಕಂಪನಿಯು 2004ರಲ್ಲೇ ಎಲೆಂಟ್ರಾ ಆವೃತ್ತಿಯನ್ನು ದೇಶಕ್ಕೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿತ್ತು. ಆದರೆ 2007ನೇ ಇಸವಿಯ ನಂತರ ಗ್ರಾಹಕರಿಂದ ಕಡಿಮೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಎಲಾಂಟ್ರಾ ಮಾರಾಟ ಸ್ಥಗಿತಗೊಂಡಿತ್ತು.
ಇದೀಗ ಹ್ಯುಂಡೈ ಕಂಪನಿಯು ಐದನೇ ತಲೆಮಾರಿನ ಎಲಾಂಟ್ರಾ ಕಾರನ್ನು ಮಾರಾಟ ಮಾಡುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ಜನಪ್ರಿಯವಾಗಿರುವ ನೂತನ ಎಲಾಂಟ್ರಾ ಕಾರನ್ನು ಪರಿಚಯಿಸಲು ಕಂಪನಿ ಯೋಜಿಸಿದೆ. ವಿಶೇಷವೆಂದರೆ ನೂತನ ಎಲಾಂಟ್ರಾ ಕಾರು ಫ್ಲೂಡಿಕ್ ವಿನ್ಯಾಸ ಹೊಂದಿದೆ.
ಈಗಾಗಲೇ ಹ್ಯುಂಡೈ ವೆರ್ನಾ ದೇಶದಲ್ಲಿ ಜನಪ್ರಿಯವಾಗಿದೆ. ಇದೇ ರೀತಿ ಎಲಾಂಟ್ರಾ ಕಾರಿನ ಮೂಲಕ ಕಂಪನಿಯು ದೇಶದಲ್ಲಿ ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳಲು ಯೋಜಿಸಿದೆ. ವೆರ್ನಾ ಮತ್ತು ಸೊನಾಟಾ ಕಾರುಗಳ ವಿನ್ಯಾಸದಂತೆ ನೂತನ ಎಲಾಂಟ್ರಾ ವಿನ್ಯಾಸವಿದೆ.
ಹ್ಯುಂಡೈ ಎಲಾಂಟ್ರಾ ಕಾರು ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ವದಂತಿಗಳ ಪ್ರಕಾರ ದೇಶದ ರಸ್ತೆಗೆ 1.8 ಲೀಟರ್ ಎಂಜಿನಿನ ಎಲಾಂಟ್ರಾ ಆಗಮಿಸಲಿದೆ. ಜೊತೆಗೆ 1.6 ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ಎಲಾಂಟ್ರಾ ಇಲ್ಲಿಗೆ ಆಗಮಿಸಲಿದೆ.
ಟೊಯೊಟಾ ಕೊರೊಲಾ, ಹೋಂಡಾ ಸಿವಿಕ್, ಷೆವರ್ಲೆ ಕ್ರೂಝ್, ರೆನೊ ಫ್ಲೂಯೆನ್ಸ್, ಸ್ಕೋಡಾ ಲಾರಾ ಮತ್ತು ಫೋಕ್ಸ್ ವ್ಯಾಗನ್ ಜೆಟ್ಟಾಕಾರುಗಳ ಜೊತೆ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯ ನೂತನ ಎಲಾಂಟ್ರಾ ಪೈಪೋಟಿ ನಡೆಸಲಿದೆ.


Click it and Unblock the Notifications









