ಭಾರತೀಯನ ಸಾಧನೆ: ನೀರಿನಿಂದ ಕಾರಿನ ಮೈಲೇಜ್ ಹೆಚ್ಚಳ

ನೀರನ್ನು ಇಂಧನವಾಗಿ ಬಳಸಿಕೊಳ್ಳುವ ಕಾರೊಂದರ ನಿರೀಕ್ಷೆಯಲ್ಲಿ ಹೆಚ್ಚಿನ ಜನರಿದ್ದಾರೆ. ಈ ಕುರಿತು ಹಲವು ಅನ್ವೇಷಣೆಗಳು ನಡೆದಿವೆ. ಪಾಕಿಸ್ತಾನವಂತೂ ಇತ್ತೀಚೆಗೆ ವಾಟರ್ ಕಾರ್ ತಂತ್ರಜ್ಞಾನದಿಂದ ಸುದ್ದಿ ಮಾಡಿತ್ತು. ಇದೀಗ ದೇಶದ ವಿಜ್ಞಾನಿಯೊಬ್ಬರು ನೀರು ಬಳಕೆಯಿಂದ ಕಾರಿನ ಮೈಲೇಜ್ ಹೆಚ್ಚಿಸಿಕೊಳ್ಳುವ ಸಾಧನವೊಂದು ಅಭಿವೃದ್ಧಿಪಡಿಸಿದ್ದಾರೆ.

ಕಾರಿನ ಮೈಲೇಜ್ ಹೆಚ್ಚಿಸಿಕೊಳ್ಳಲು ನೀರು ನೆರವಾಗಬಲ್ಲದು ಎಂದು ಜೈಪುರದ ಪ್ರೊ ವಿಜಯ್ ತೋರಿಸಿಕೊಟ್ಟಿದ್ದಾರೆ. ಅವರು ಅಭಿವೃದ್ಧಿಪಡಿಸಿದ ನೂತನ ತಂತ್ರಜ್ಞಾನದಿಂದ ವಾಹನದ ಮೈಲೇಜ್ ಗರಿಷ್ಠವಾಗಿ ಹೆಚ್ಚುತ್ತದೆ. ಇದನ್ನು ತನ್ನ ಸ್ವಂತ ನಿಸ್ಸಾನ್ ಸನ್ನಿ ಕಾರಿಗೆ ಅಳವಡಿಸಿ ಯಶಸ್ವಿಯಾಗಿದ್ದಾರೆ.

ಕ್ಯಾಟಲಿಟಿಕ್ ಫ್ಯೂಯಲ್ ಪ್ರೊಡಕ್ಷನ್ ಕಿಟ್(ಸಿಎಫ್ ಪಿಕೆ) ಎಂದು ಈ ಸಾಧನಕ್ಕೆ ಹೆಸರಿಡಲಾಗಿದೆ. ಇದು ಎಲ್ ಪಿಜಿ ಅಥವಾ ಪೆಟ್ರೋಲ್ ಉತ್ಪಾದಿಸುವ ದಹನಶೀಲ ಹೈಡ್ರೊಜನಿನ ಇಂಜೆಸ್ಟನನ್ನು ಕಡಿಮೆ ಮಾಡುತ್ತದೆ. ಇದರಿಂದ ಉಳಿತಾಯವಾಗುವ ಹೈಡ್ರೊಜನನ್ನು ಮತ್ತೆ ಲಭ್ಯವಿರುವ ಇಂಧನಕ್ಕೆ ಪೂರೈಸಲಾಗುತ್ತದೆ. ಒಟ್ಟಾರೆ ಇಂಧನವನ್ನು ಸದುಪಯೋಗ ಮಾಡಿಕೊಂಡು ಈ ಕಿಟ್ ಮೈಲೇಜ್ ಹೆಚ್ಚಿಸುತ್ತದೆ.

ವಿಜಯ್ ಬಳಿಯಿರುವ 1988ರ ನಿಸ್ಸಾನ್ ಸನ್ನಿ ಕಾರಿಗೆ ಈ ಸಾಧನ ಅಳವಡಿಸಿದ್ದಾರೆ. ಅವರಿಗೆ ಸುಮಾರು ಶೇಕಡ 15ರಷ್ಟು ಹೆಚ್ಚು ಮೈಲೇಜ್ ದೊರಕುವುದಾಗಿ ಅವರು ಹೇಳಿದ್ದಾರೆ. ಈ ಸಾಧನವು ಸದ್ಯ ಪೆಟ್ರೋಲ್ ಮತ್ತು ಎಲ್ ಪಿಜಿ ವಾಹನಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ. ಪ್ರೊಫೆಸರ್ ವಿಜಯ್ ಡೀಸೆಲ್ ಕಾರಿಗೂ ಇದನ್ನು ಅಳವಡಿಸುವ ಪ್ರಯತ್ನದಲ್ಲಿದ್ದಾರೆ.

ಈ ಕಿಟ್ ದರ ಸುಮಾರು 10 ಸಾವಿರ ರು. ಅಂತೆ. ಇದೀಗ ಅಭಿವೃದ್ಧಿ ಹಂತದಲ್ಲಿರುವ ತಂತ್ರಜ್ಞಾನವಾಗಿದ್ದು, ಸಂಪೂರ್ಣವಾಗಿ ಅಭಿವೃದ್ಧಿಯಾದ ನಂತರ ನಾವು ಕೂಡ ನಮ್ಮ ಕಾರುಗಳಿಗೆ ಈ ಕಿಟ್ ಖರೀದಿಸಿ ಅಳವಡಿಸಿಕೊಳ್ಳಬಹುದು. (ಕಾರಿನ ಮೈಲೇಜ್ ಹೆಚ್ಚಿಸಲು ಹದಿನೇಳು ಸಲಹೆ )

More from DriveSpark

Article Published On: Friday, August 10, 2012, 10:11 [IST]
English summary
Increase car mileage using water. Prof Y.K. Vijay(Jaipur) has developed a new technique to increase the mileage of car using water. New technique lowering the ingestion of petrol or LPG fuel producing combustible hydrogen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+