ಜಾಗ್ವಾರ್ ಸ್ಪೆಷಲ್ ಅಡಿಷನ್ ಎಕ್ಸ್‌ಕೆಆರ್ ರಸ್ತೆಗೆ, ದರ?
"ನೂತನ ಜಾಗ್ವಾರ್ ಎಕ್ಸ್‌ಕೆಆರ್ ಸ್ಪೆಷಲ್ ಅಡಿಷನ್ ಕಾರು ಕೂಪೆ ಮತ್ತು ಕನ್ವರ್ಟಿಬಲ್ ಆಯ್ಕೆಗಳಲ್ಲಿ ಲಭಿಸಲಿದೆ ಎಂದು ಜಾಗ್ವಾರ್ ಹೇಳಿದೆ. ಇದು ಆಕರ್ಷಕ ಇಂಟಿರಿಯರ್, ಸುಂದರ ಸೀಟ್, ಅಂದದ ವಿನ್ಯಾಸವನ್ನು ಹೊಂದಿದೆ.
ನೂತನ ಜಾಗ್ವಾರ್ ಎಕ್ಸ್ ಕೆಆರ್ ಹೊರವಿನ್ಯಾಸ ಕಣ್ಮನ ಸೆಳೆಯುತ್ತದೆ. ಇದು ಆರು ಬಣ್ಣಗಳಲ್ಲಿ ದೊರಕಲಿದೆ. ಲಿಮಿಟೆಡ್ ಅಡಿಷನ್ ಆವೃತ್ತಿಯು ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, 510 ಪಿಎಸ್ ಪವರ್ ನೀಡುತ್ತದೆ.
ಇದು ಆರು ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಇದು ಗಟ್ಟಿಮುಟ್ಟಾದ ಕಾರಾಗಿದ್ದು 1.27 ರುಪಾಯಿ ನೀಡಿ ಖರೀದಿಸಬಹುದು.
ಎಕ್ಸ್‌ಕೆಆರ್ ಕಾರಿಗಿಂತ ದೇಶದಲ್ಲಿ ಜಾಗ್ವಾರ್ ಎಕ್ಸ್ ಜೆ ಹೆಚ್ಚು ಜನಪ್ರಿಯ ಕಾರಾಗಿದೆ. ಅತ್ಯಧಿಕ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿರುವ ಜಾಗ್ವಾರ್ ಎಕ್ಸ್‌ಜೆ ಎಂಜಿನ್ 275 ಪಿಎಸ್ ಪವರ್ ಮತ್ತು 600 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಕಾರು 6 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ. ಈ ಕಾರಿನ ದರ 93.01 ಲಕ್ಷ ರು. ಆಸುಪಾಸಿನಲ್ಲಿದೆ


Click it and Unblock the Notifications









