ಭಾರತದಲ್ಲಿ ಜಾಗ್ವಾರ್ ಉತ್ಪಾದನೆಯಿಲ್ಲ: ಟಾಟಾ

Jaguar Land Rover Will Not Be Made In India
ದೇಶದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ ಸಂಸ್ಥೆಯ ಹೋರಹೋಗುತ್ತಿರುವ ಮುಖ್ಯಸ್ಥ ರತನ್ ಟಾಟಾ, ಅಂತರಾಷ್ಟ್ರೀಯ ಬ್ರಾಂಡ್‌ಗಳಾದ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿಲ್ಲ ಎಂದಿದ್ದಾರೆ.

ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಪೂರ್ಣ ಪ್ರಮಾಣದಲ್ಲಿ ದೇಶದಲ್ಲಿ ಉತ್ಪಾದನೆಯಾಗಲಾರದು. ವಿಪರೀತ ತೆರಿಗೆ ಹೊರೆ ಇದಕ್ಕೆ ಕಾರಣವಾಗಿದೆ ಟಾಟಾ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಕಾರುಗಳು ದೇಶದಲ್ಲಿ ಜೋಡಣೆಯಾಗುತ್ತಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರೀಮಿಯಂ ಕಾರುಗಳನ್ನು ಸಂಪೂರ್ಣವಾಗಿ ತಯಾರಿಸುವುದು ಕಷ್ಟಕರ. ಈಗ ಚಾಲ್ತಿಯಲ್ಲಿರುವ ತೆರಿಗೆ ಪದ್ಧತಿ ಜೋಡಣೆ ಮಾಡುವುದಕ್ಕಿಂತಲೂ ದುಬಾರಿ ಮಾಡಿದೆ ಎಂದಿದ್ದಾರೆ.

ಅಲ್ಲದೆ ಈಗಿರುವ ಮಾರಾಟ ಪ್ರಮಾಣ ಗಮನಿಸಿದರೆ ಸ್ಥಳೀಯವಾಗಿ ತಯಾರಿಕಾ ಘಟಕ ರೂಪಿಸುವುದಕ್ಕೆ ಸಂಬಂಧಿಸಿದಂತೆ ಹಿನ್ನಡೆಯನ್ನುಂಟು ಮಾಡಿದೆ. ಪ್ರಸ್ತುತ ವರ್ಷಕ್ಕೆ 1000ದಷ್ಟು ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಕಾರುಗಳು ಮಾರಾಟವಾಗುತ್ತಿದ್ದು ಇದು ಕನಿಷ್ಠ 5000ಕ್ಕೆ ತಲುಪಬೇಕಾಗಿದೆ ಎಂದಿದೆ.

ಸದ್ಯ ಚೀನಾದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಘಟಕ ಅಭಿವೃದ್ಧಿಪಡಿಸಲಾಗುತ್ತಿದ್ದು, ಸೌದಿ ಅರೇಬಿಯಾದಿಂದಲೂ ಘಟಕ ಆರಂಭಿಸುವಂತೆ ಆಹ್ವಾನ ಬಂದಿದೆ. ಆದರೆ ಭಾರತೀಯ ಸರಕಾರದಿಂದ ಅಂತಹುದೇ ಯಾವುದೇ ನೆರವು ಬಂದಿಲ್ಲ ಎಂದಿದೆ.

ದೇಶದಲ್ಲಿ ಹೂಡಿಕೆ ಮಾಡಲು ಭಾರತ ಸರಕಾರ ಪ್ರೋತ್ಸಾಹ ನೀಡಬೇಕಾಗಿದೆ. ಇದರಿಂದಾಗಿ ಉದ್ಯೋಗ ಅವಕಾಶ ಲಭಿಸಿವುದರ ಜತೆಗೆ ರಫ್ತು ಕೂಡಾ ಅಭಿವೃದ್ಧಿಪಡಿಸಬಹುದು. ಪ್ರಸ್ತುತ ಬ್ರಿಟನ್‌ನಲ್ಲಿ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್‌ಗೆ ಮೂರು ಘಟಕಗಳಿವೆ.

More from DriveSpark

Article Published On: Monday, December 17, 2012, 12:14 [IST]
English summary
Ratan Tata, the outgoing chairman of the Tata Group has stated that Tata Motor's prime international brands - Jaguar and Land Rover will not have full fledged manufacturing facilities in India. Mr Tata blamed some 'silly' taxes and low volumes for his decision.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+