ಜಾಗ್ವಾರ್ ಕುರಿತು ಟಾಟಾ ಐಡಿಯಾ ಮಾಡ್ಯಾರ!
ಭಾರೀ ಪ್ರಮಾಣದಲ್ಲಿ ಅಬಕಾರಿ ಸುಂಕ ಪಾವತಿಸುವುದರಿಂದ ಕಾರುಗಳು ಅಸಲಿ ದರಕ್ಕಿಂತ ಎಷ್ಟೋ ಪಾಲು ದುಬಾರಿಯಾಗುತ್ತವೆ. ಅತ್ಯಧಿಕ ಬೇಡಿಕೆಯಲ್ಲಿರುವ ಜಾಗ್ವಾರ್ ಎಕ್ಸ್ಎಫ್ ಕಾರಿಗೆ ದುಬಾರಿ ದರದಿಂದಾಗಿ ಪ್ರತಿಸ್ಪರ್ಧಿ ಕಾರುಗಳೊಂದಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ಮಾಡಲು ಸಾಧ್ಯವಾಗುತ್ತಿಲ್ಲ.
ಮರ್ಸಿಡಿಸ್ ಬೆಂಝ್ ಇ ಕ್ಲಾಸ್, ಬಿಎಂಡಬ್ಲ್ಯು 5 ಸೀರಿಸ್ ಮತ್ತು ಆಡಿ ಎ6 ಕಾರುಗಳು ಜಾಗ್ವಾರ್ ಎಕ್ಸ್ಎಫ್ ಕಾರಿಗೆ ಪ್ರಮುಖ ಪ್ರತಿಸ್ಪರ್ಧಿಗಳು. ಇವುಗಳಲ್ಲಿ ಹೆಚ್ಚಿನ ಕಾರು ದೇಶದಲ್ಲಿ ಸಿಕೆಡಿ ಘಟಕದಲ್ಲಿ ಅಸೆಂಬಲ್ ಮಾಡುವ ಮೂಲಕ ಹೆಚ್ಚಿನ ಅಬಕಾರಿ ಸುಂಕದಿಂದ ಪಾರಾಗಿವೆ.
ಜಾಗ್ವಾರ್ ಕಂಪನಿಯು ಈಗ ಕಸ್ಟಮ್ ಬಿಲ್ಟ್ ಯುನಿಟ್(ಸಿಬಿಯು) ಹಾದಿ ಮೂಲಕ ಎಕ್ಸ್ ಎಫ್ ಕಾರನ್ನು ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದೆ. ಆದರೆ ಇದರ ಪ್ರತಿಸ್ಪರ್ಧಿ ಕಂಪನಿಗಳು ಕಾರನ್ನು ಭಾರತದಲ್ಲಿಯೇ ಜೋಡಿಸುತ್ತಿವೆ.
ಸಿಬಿಯು ಮೂಲಕ ಆಮದು ಮಾಡಿಕೊಂಡರೆ ಶೇಕಡ 75ರಷ್ಟು ಮತ್ತು ಸಿಕೆಡಿ ಹಾದಿ ಮೂಲಕ ಬಂದರೆ ಶೇಕಡ 30ರಷ್ಟು ಅಬಕಾರಿ ಸುಂಕವಿದೆ. ಅಂದರೆ ಸಿಕೆಡಿ ಹಾದಿ ಮೂಲಕ ಗೇರ್ ಬಾಕ್ಸ್, ಎಂಜಿನ್ ಇತ್ಯಾದಿಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಕೊಂಚ ಅಬಕಾರಿ ಸುಂಕ ಪಾವತಿಸಬೇಕಾಗುತ್ತದೆ.
ಜಾಗ್ವಾರ್ ಕಂಪನಿಯ ಅಂದದ ಎಕ್ಸ್ ಎಫ್ ಕಾರಿಗೆ ಅದರ ದುಬಾರಿ ದರವೇ ದೇಶದಲ್ಲಿ ಶತ್ರುವಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಕಂಪನಿಯು ಎಕ್ಸ್ ಎಫ್ ಕಾರನ್ನು ಸಿಕೆಡಿ ಹಾದಿ ಮೂಲಕ ಆಮದು ಮಾಡಿಕೊಳ್ಳಲು ಆಲೋಚಿಸುತ್ತಿದೆ. ಇದರಿಂದ ಇದರ ದರ ಕಡಿಮೆಯಾಗುವ ನಿರೀಕ್ಷೆಯಿದೆ.
"ನಾವು ದೇಶದಲ್ಲಿ ಎಕ್ಸ್ ಎಫ್ ಕಾರನ್ನು ಅಸೆಂಬಲ್ ಮಾಡುವ ಕುರಿತು ಆಲೋಚಿಸುತ್ತಿದ್ದೇವೆ" ಎಂದು ರತನ್ ಟಾಟಾ ಇತ್ತೀಚೆಗೆ ಹೇಳಿದ್ದರು.
ಅಂದಹಾಗೆ ನೀವು ಬಿಎಂಡಬ್ಲ್ಯು 520ಡಿ, ಮರ್ಸಿಡಿಸ್ ಬೆಂಝ್ ಇ220 ಸಿಡಿಐ, ಆಡಿ ಎ6 2.0 ಟಿಡಿಐ ಮತ್ತು ಜಾಗ್ವಾರ್ ಎಕ್ಸ್ ಎಫ್ 3.0 ಲೀಟರ್ ವಿ6 ಡೀಸೆಲ್ ಕಾರನಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ.


Click it and Unblock the Notifications









