ಭಾರತಕ್ಕೂ ಬರಲಿದೆ ಜಾಗ್ವಾರ್ ಹೈ ಸ್ಪೀಡ್ ಕಾರು
ತನ್ನದೇ ಆದ ಬ್ರಾಂಡ್ ಹೆಸರಿನ ಮೂಲಕ ಜಗತ್ತಿನಲ್ಲೆಡೆ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಬ್ರಿಟನ್‌ನ ಪ್ರಮುಖ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ಇದೀಗ ನೂತನ ಹೈ ಸ್ಪೀಡ್ ಕಾರನ್ನು ಪರಿಚಯಿಸುತ್ತಿದೆ.
ಲಾಸ್ ಏಜಂಲೀಸ್‌ನಲ್ಲಿ ನಡೆದ ಮೋಟಾರ್ ಶೋದಲ್ಲಿ ನೂತನ ಜಾಗ್ವಾರ್ XFR-S ಕಾರನ್ನು ಪರಿಚಯಿಸಲಾಗಿದ್ದು, ಮುಂದಿನ ವರ್ಷ ಅಮೆರಿಕ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ಫೇಸ್ ಲಿಫ್ಟಡ್ ಸ್ಪೋರ್ಟ್ಸ್ ವರ್ಷನ್ ಆಗಿರುವ ಜಾಗ್ವಾರ್ ಕೇವಲ 4.4 ಸೆಕೆಂಡುಗಳಲ್ಲಿ 100 ಕೀ. ಮೀ. ವೇಗ ವರ್ಧಿಸುವ ಸಾಮರ್ಥ್ಯ ಹೊಂದಿದೆ. ಜಾಗ್ವಾರ್ ಆವೃತ್ತಿಯ ಅತಿ ವೇಗದ ಕಾರಿನಲ್ಲಿ ಪವರ್ ಫುಲ್ ಎಂಜಿನ್ ಆಳವಡಿಸಲಾಗಿದೆ.
ಕಂಪನಿಯು ಈ ಕಾರಿನಲ್ಲಿ 5.0 ಲೀಟರ್ ಕ್ಷಮತೆಯ ಶಕ್ತಿಶಾಲಿ ಸೂಪರ್ ಚಾರ್ಜ್ಡ್ ವಿ8 ಎಂಜಿನ್ ಆಳವಡಿಸಿದೆ. ನಿಮ್ಮ ಮಾಹಿತಿಗಾಗಿ, 2008ರಲ್ಲಿ ದೇಶದ ಅತಿ ಹೊಡ್ಡ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ಬ್ರಿಟನಿನ ಜಾಗ್ವಾರ್ ಕಂಪನಿಯನ್ನು ಖರೀದಿಸಿತ್ತು. ಆ ಬಳಿಕ ಆಟೋಮೊಬೈಲ್ ಜಗತ್ತಿನಲ್ಲಿ ಭಾರಿ ಹೂಡಿಕೆ ನಡೆಸಿರುವ ಟಾಟಾ ಮೋಟಾರ್ಸ್ ಐಷಾರಾಮಿ ಕಾರು ಸೆಗ್ಮೆಂಟ್‌ನಲ್ಲಿ ಜಾಗ್ವಾರ್ ಮೂಲಕ ಬ್ರಾಂಡ್ ಹೆಸರು ಕಾಯ್ದುಕೊಂಡಿದೆ.
ಪ್ರಸ್ತುತ ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಪ್ರದರ್ಶನಗೊಂಡಿರುವ ಜಾಗ್ವಾರ್‌ನ ಲಿಮಿಟೆಡ್ ಅಡಿಷನ್ 200 ಕಾರುಗಳು ಮಾತ್ರ ಅಮೆರಿಕ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಹಾಗೆಯೇ ಮುಂದಿನ ಕೆಲವು ವರ್ಷಗಳಲ್ಲಿ ಭಾರತಕ್ಕೂ ಎಂಟ್ರಿ ಕೊಡುವ ನಿರೀಕ್ಷೆಯಿದೆ.

ಜಾಗ್ವಾರ್ ಹೈ ಸ್ಪೀಡ್ ಕಾರು

ಜಾಗ್ವಾರ್ ಹೈ ಸ್ಪೀಡ್ ಕಾರು

ಜಾಗ್ವಾರ್ ಹೈ ಸ್ಪೀಡ್ ಕಾರು

ಜಾಗ್ವಾರ್ ಹೈ ಸ್ಪೀಡ್ ಕಾರು

ಜಾಗ್ವಾರ್ ಹೈ ಸ್ಪೀಡ್ ಕಾರು

ಜಾಗ್ವಾರ್ ಹೈ ಸ್ಪೀಡ್ ಕಾರು

ಜಾಗ್ವಾರ್ ಹೈ ಸ್ಪೀಡ್ ಕಾರು

ಜಾಗ್ವಾರ್ ಹೈ ಸ್ಪೀಡ್ ಕಾರು

ಜಾಗ್ವಾರ್ ಹೈ ಸ್ಪೀಡ್ ಕಾರು

ಜಾಗ್ವಾರ್ ಹೈ ಸ್ಪೀಡ್ ಕಾರು

ಜಾಗ್ವಾರ್ ಹೈ ಸ್ಪೀಡ್ ಕಾರು


Click it and Unblock the Notifications








